ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 14 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟಾರೆಯಾಗಿ ಶೇ. 95.33ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಾಗಿದ್ದು, ವಿವಿಧ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.
ಚಿನ್ನದ ಪದಕಗಳು: ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಪಿಎಚ್‌ಡಿ ಪದವಿ: ವಿವಿಧ ವಿಭಾಗಗಳ ಒಟ್ಟು 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು.ರ‍್ಯಾಂಕ್ ಪ್ರಮಾಣ ಪತ್ರಗಳು: ಸ್ನಾತಕ ಪದವಿಯಿಂದ 66 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಿಂದ 71 ವಿದ್ಯಾರ್ಥಿಗಳು ಸೇರಿ ಒಟ್ಟು 137 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.
ಚಿನ್ನದ ಪದಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ
ಸ್ನಾತಕೋತ್ತರ ಪದವಿ ವಿಭಾಗ:
4 ಚಿನ್ನದ ಪದಕಗಳು: ಸವಿತಾ (ವಾಣಿಜ್ಯಶಾಸ್ತ್ರ ವಿಭಾಗ) – ಶ್ರೀ ಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿ.
3 ಚಿನ್ನದ ಪದಕಗಳು: ತಸ್ಮಿಯಾಬಾನು ಆರ್ (ಔದ್ಯೋಗಿಕ ರಸಾಯನಶಾಸ್ತç) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.
2 ಚಿನ್ನದ ಪದಕಗಳು:
ಉಜ್ಜನಿ ಈಶ್ವರ (ಭೌತಶಾಶಾಸ್ತ್ರ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.
ಸಮ್ರೀನ್ (ರಸಾಯನಶಾಶಾಸ್ತ್ರ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.
ಪದ್ಮಾವತಿ ಕೆ (ಸಮಾಜಕಾರ್ಯ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.
ಮಹಾಲಿಂಗಪ್ಪ ತಂಬ್ರಹಳ್ಳಿ (ಇತಿಹಾಸ ಮತ್ತು ಪುರಾತತ್ವ) – ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ.
*ಸ್ನಾತಕ ಪದವಿ ವಿಭಾಗ:*
ಪೂಜಾ (ಬಿ.ಕಾಮ್) – ಬಿಬಿಸಿ ಕಾಲೇಜು, ಬಳ್ಳಾರಿ.
ಅಜಯ್ (ಬಿ.ಎಸ್ಸಿ) – ಜಿವಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ.
ಬಸಮ್ಮ (ಬಿ.ಎ.) – ಜ್ಞಾನ ಭಾರತಿ ಡಿಗ್ರಿ ಕಾಲೇಜು, ಬಳ್ಳಾರಿ.
ಬಿ ಕಾವ್ಯ (ಬಿ.ಎಸ್.ಡಬ್ಲೂ) – ಗಂಗೋತ್ರಿ ಪದವಿ ಕಾಲೇಜು, ಕೊಟ್ಟೂರು.
ಈ ಬಾರಿ ವಿಶ್ವವಿದ್ಯಾಲಯವು ಒಟ್ಟಾರೆಯಾಗಿ ಶೇ. 95.33ರಷ್ಟು ಉತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆಯಲ್ಲಿ ಸ್ನಾತಕ ಪದವಿಯಲ್ಲಿ 13,346 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಮತ್ತು ಡಿಪ್ಲೋಮಾ ವಿಭಾಗದಲ್ಲಿ 1,448 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.
















