Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ನ. 11 ರಂದು ವೀರವನಿತೆ ಒನಕೆ ಓಬವ್ವ ಜಯಂತಿ: ಅದ್ಧೂರಿ ಆಚರಣೆಗೆ ಛಲವಾದಿ ಮಹಾಸಭಾ ಪೂರ್ವಭಾವಿ ಸಭೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 09 : ನಗರದಲ್ಲಿ ನ.11 ರಂದು ನಡೆಯಲಿರುವ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ವಿಜೃಂಭಣೆಯಿಂದ ಆಚರಿಸುವ ಕುರಿತು ಛಲವಾದಿ ಮಹಾಸಭಾದಿಂದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಛಲವಾದಿ ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ ಕೆಚ್ಚೆದೆಯ ಧೀರ ಮಹಿಳೆ ಒನಕೆ ಓಬವ್ವ ಶತ್ರುಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಇಂದಿಗೂ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ನಮ್ಮ ಸಮಾಜದ ಮುಖಂಡರುಗಳು ಹಳ್ಳಿಗಳಲ್ಲಿ ಸುತ್ತಾಡಿ ಛಲವಾದಿ ಸಮಾಜದವರಲ್ಲಿ ಒನಕೆ ಓಬವ್ವಳ ಕುರಿತು ಜಾಗೃತಿ ಮೂಡಿಸಿ ಕೋಟೆ ಮುಂಭಾಗದಿಂದ ಹೊರಡುವ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಮ್ಮ ಸಮಾಜದವರು ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.

ಒನಕೆ ಓಬವ್ವ ಜಯಂತಿಯಂದು ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಒದಗಿಸಬೇಕಾಗಿರುವುದರಿಂದ ಎಲ್ಲರ ಸಹಕಾರ ಮುಖ್ಯ. ಮುಂದಿನ ವರ್ಷದಿಂದ ಒಬವ್ವಳ ಜಯಂತಿಯನ್ನು ವೈಭವೋಪೇತವಾಗಿ ಆಚರಿಸೋಣ ಎಂದು ಛಲವಾದಿ ಸಮಾಜದವರಿಗೆ ಕರೆ ನೀಡಿದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಶೇಷಪ್ಪ, ಪ್ರೊ.ರಂಗಸ್ವಾಮಿ, ಭಾರ್ಗವಿ ದ್ರಾವಿಡ್, ಎಸ್.ವಿ.ಗುರುಮೂರ್ತಿ, ದಯಾನಂದ್, ಎಸ್.ಎನ್.ರವಿಕುಮಾರ್ ಕೆ.ಜಯರಾಮ್, ದೀಪಕ್, ಧರ್ಮಕಾಳೆ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ಪ್ರೊ.ನಟರಾಜ್, ಶಿವಪ್ರಸಾದ್, ನವೀನ್ ದ್ರಾವಿಡ್, ರಾಮಲಿಂಗಪ್ಪ, ಪರಮೇಶ್ ಪೂಜಾರ್
ಆರ್.ಪ್ರದೀಪ್‍ಕುಮಾರ್, ನಾಗರಾಜ್ ಪೈಲೆಟ್, ನವೀನ್ ಮಸ್ಕಲ್, ಶಿವಸ್ವಾಮಿ ಇವರುಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now