Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ : ಭರಮಸಾಗರ ಹೋಬಳಿಯ ಅರಸೂರು(ಬೇಚಾರಕ್) ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 06 : ಅರಸೂರು ಗ್ರಾಮವು ಭರಮಸಾಗರ ಪಂಚಾಯತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ವಾಯುವ್ಯಕ್ಕೆ 33 ಕಿಲೋಮೀಟರ್ ದೂರದಲ್ಲಿ ಚಿತ್ರದುರ್ಗ-ಭರಮಸಾಗರ- ಅರಸೂರು-ಬಿಳಿಚೋಡು ಮಾರ್ಗದಲ್ಲಿದೆ.

ಈಗ ಈ ಗ್ರಾಮವು ಬೇಚಾರಕ್ ಆಗಿದ್ದು,ಜನವಸತಿ ರಹಿತವಾಗಿದೆ. ಹಿಂದೆ ಇದೊಂದು ಐತಿಹಾಸಿಕ ಗ್ರಾಮವಾಗಿದ್ದು,
1689-95 ರ ಸುಮಾರಿಗೆ ಬಿಚ್ಚುಗತ್ತಿ ಭರಮಣ್ಣನಾಯಕನು ಭರಮಸಾಗರ ಕೆರೆಗಳನ್ನು ಕಟ್ಟಿಸುವ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ದಳವಾಯಿ ಲಿಂಗಣ್ಣನಾಯಕರಿಗೆ ಕೊಟ್ಟಿರುತ್ತಾನೆ. ಕೆರೆಗಳನ್ನು ಕಟ್ಟಿಸುವಾಗ ಇಲ್ಲಿ ಒಂದು ಊರನ್ನು ಕಟ್ಟಿ ಅರಮನೆ, ಕೋಟೆ, ಬುರುಜು,ನೀರಿನ ಬಾವಿಗಳನ್ನು ನಿರ್ಮಿಸಿ ಊರಿನ ಪ್ರಾರಂಭಕ್ಕೆ ಬಿಚ್ಚುಗತ್ತಿ ಭರಮಣ್ಣನಾಯಕರನ್ನು ಕರೆದುಕೊಂಡು ಊರಿಗೆ ಹುಗಿ ಹೊಯ್ಯಿಸಿ ಅರಸೂರು ಎಂದು ನಾಮಕರಣ ಮಾಡಿದನು.

 

ಭರಮಣ್ಣನಾಯಕನು 1696 ರಲ್ಲಿ ಲಿಂಗಣ್ಣನಾಯಕನಿಗೆ ಅರಸೂರು ಗ್ರಾಮವನ್ನು ಉಂಬಳಿ ಹಾಕಿದನು.
ಅರಸೂರು ಗ್ರಾಮದಲ್ಲಿ ಲಿಂಗಣ್ಣನಾಯಕನು ಬಸವೇಶ್ವರ, ಕಲ್ಲೇಶ್ವರ ಹನುಮಂತರಾಯನ ಗುಡಿ ಕಟ್ಟಿಸಿದನು.
ಆದರೆ ಈಗ ಕಾರಾಣಾಂತರದಿಂದ ಊರು ಇಲ್ಲವಾಗಿದೆ.
ಈಗ ಇಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಮಾತ್ರ ಉಳಿದಿದ್ದು , ಹಿಂದಿನ ಗ್ರಾಮದ ಮಂದಿರಗಳ ಭಗ್ನಾವಶೇಷಗಳು ,ವೀರಮಾಸ್ತಿಗಲ್ಲು… ಮತ್ತಿತರ ಅವಶೇಷಗಳನ್ನು ಕಾಣಬಹುದಾಗಿದೆ.ಈ ಊರಿನ ಜನವಸತಿಯು ಅಕ್ಕಪಕ್ಕದ ಗ್ರಾಮಗಳಾದ ನಂದಿಹಳ್ಳಿ,  ಯಮ್ಮಗಟ್ಟ,  ಮುಂತಾದೆಡೆ ವಲಸೆ ಹೋಗಿದ್ದರು ಎನ್ನಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now