Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ: ಇನ್ಮುಂದೆ ಬೈಪಾಸ್‌ನಲ್ಲೇ ರಾಜಹಂಸ ಬಸ್ ಹತ್ತಿ, ಆನ್‌ಲೈನ್ ಟಿಕೆಟ್ ಬುಕ್ ಮಾಡಿ!

---Advertisement---

 

ಚಿತ್ರದುರ್ಗ. ಅ.31: ಚಿತ್ರದುರ್ಗ ವಿಭಾಗದ ಚಿತ್ರದುರ್ಗ-ಬೆಂಗಳೂರು-ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸುವ ರಾಜಹಂಸ ಸಾರಿಗೆ ಬಸ್‍ಗಳಲ್ಲಿ ಹಿರಿಯೂರು ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಹಿರಿಯೂರು ಬೈಪಾಸ್‍ನಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಮುಂಗಡ ಆಸನ ಕಾಯ್ದಿರಿಸುವ ಅವಕಾಶ ಒದಗಿಸಲಾಗಿದೆ.

ಹಿರಿಯೂರು ಬೈಪಾಸ್‍ನಿಂದ ಪ್ರಯಾಣ ಬೆಳೆಸುವ ಹಾಗೂ ಇಳಿಯುವ ಪ್ರಯಾಣಿಕರು ಸಂಸ್ಥೆಯ ವೆಬ್‍ಸೈಟ್ www.ksrtc.in ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಈ ಮಾರ್ಗದ ಬಸ್‍ಗಳು ಹಿರಿಯೂರು ಬೈಪಾಸ್‍ನಿಂದ ಪ್ರತಿದಿನ ಬೆಳಿಗ್ಗೆ 05:15, 05:45, 06:15 ಹಾಗೂ 06:45ಕ್ಕೆ ಹೊರಡಲಿವೆ. ಹಾಗೆಯೇ ಬೆಂಗಳೂರಿನಿಂದ ಪ್ರತಿದಿನ ಬೆಳಿಗ್ಗೆ 09:15, 10:00, ಸಂಜೆ 06:15 ಹಾಗೂ ರಾತ್ರಿ 11:30ಕ್ಕೆ ಹೊರಡಲಿವೆ. ಪ್ರಯಾಣಿಕರು ಈ ನೂತನ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now