Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಂತಕಲ್ಲಿನಲ್ಲಿ ಗಣಿಗಾರಿಕೆ ಪುನರಾರಂಭಕ್ಕೆ ಆಗ್ರಹ: ಹಿರೇಕಂದವಾಡಿ ಗೌಡ್ರುಸ್ವಾಮಿ ಒತ್ತಾಯ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅ. 28 :  ಜಂತಕಲ್ಲಿನಲ್ಲಿ ಮೈನಿಂಗ್ ಪ್ರಾರಂಭವಾಗುವುದರಿಂದ ಸುತ್ತಾ-ಮುತ್ತಲಿನ ಗ್ರಾಮಸ್ಥರು ಹಾಗೂ ಕಾರ್ಮಿಕರ ಅನುಕೂಲವಾಗಲಿದೆ ಇಲ್ಲಿನ ಶೇಕಡಾ 95 ರಷ್ಟು ಜನತೆಯ ಆಶಯದಂತೆ ಮೈನಿಂಗ್ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಹಿರೇಕಂದವಾಡಿ ಗೌಡ್ರುಸ್ವಾಮಿ ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈನಿಂಗ್ ಬೇಡಿಕೆಯನ್ನು ನಿಲ್ಲಿಸಬೇಕು ಎಂಬ ಶಿವಪ್ರಕಾಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೌಡ್ರುಸ್ವಾಮಿ ಮೇಗಳಹಳ್ಳಿಯಲ್ಲಿ ಶೇಕಡಾ 90 ರಿಂದ 95 ರಷ್ಟು ಜನ ಮೈನಿಂಗ್ ಪ್ರಾರಂಭಿಸಬೇಕು ಎಂದು ಬಯಸುತ್ತಿದ್ದಾರೆ. ಮೈನಿಂಗ್ ಆರಂಭಿಸುವುದರಿಂದ ಗ್ರಾಮಗಳ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ತಮ್ಮದೇ ಕುಟುಂಬದವರು ಒಂಬತ್ತು ವರ್ಷಗಳ ಕಾಲ ಅದೇ ಸ್ಥಳದಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡಿ ಇಂದು ಸ್ವಂತ ವಾಹನಗಳನ್ನು ಹೊಂದಿದ್ದಾರೆ ವೈಯಕ್ತಿಕ ಕಾರಣಗಳಿಗಾಗಿ ನೂರಾರು ಕುಟುಂಬಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮೈನಿಂಗ್ ಚಟುವಟಿಕೆಗಳು ಆರಂಭವಾದರೆ ಸುಮಾರು ಇನ್ನೂರಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗಲಿದೆ. ಇದರಿಂದ ಗ್ರಾಮದ ಯುವಕರು, ಕುಟುಂಬಗಳು ಮತ್ತು ಪರಿವಾರಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಸುತ್ತಮುತ್ತಲಿನ ಮೈನ್ಸ್‍ಗಳು ಅಭಿವೃದ್ಧಿ ಹೊಂದಿ ಐದು-ಆರು ವರ್ಷಗಳಿಂದ ಮೈನಿಂಗ್ ನಡೆಸುತ್ತಿರುವುದರಿಂದ ಆ ಹಳ್ಳಿಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿವೆ ಜಿ.ಎಸ್.ಡಬ್ಲ್ಯೂ. ಮೈನ್ಸ್ ವತಿಯಿಂದ ಗೋಕಟ್ಟೆಯಿಂದ ಕೆರೆಗೆ ಪೈಪ್‍ಲೈನ್ ಅಳವಡಿಕೆ, ಶಾಲೆಗಳ ನಿರ್ಮಾಣ, ಸುಶೋಧನೆ ಹಾಗೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಲಾಗಿದೆ ಅಕ್ಕಪಕ್ಕದ ಎಲ್ಲಾ ಮೈನ್ಸ್‍ಗಳು ಅಭಿವೃದ್ಧಿ ಹೊಂದಿರುವಂತೆ ನಮ್ಮ ಗ್ರಾಮದಲ್ಲೂ ಮೈನ್ಸ್ ಆರಂಭವಾಗಬೇಕು ಎಂದು ಅವರು ಒತ್ತಾಯಿಸಿ ದರು.

ಓಬಳೇಶ್ ನಾಯ್ಕ್, ಗುರುಸ್ವಾಮಿ, ಕೋಟಿ ರಾಮಣ್ಣ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now