Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅ.31 ರಿಂದ ನ.03 ವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

---Advertisement---

ಚಿತ್ರದುರ್ಗ. ಅ.27:  ಭಾರತೀಯ ಸೇನೆಯ ವತಿಯಿಂದ ಚಿತ್ರದುರ್ಗ ನಗರದ ಒನಕೆ ಒಬವ್ವ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿಯು ಅಕ್ಟೋಬರ್ 31 ರಿಂದ ನವೆಂಬರ್ 03ರವರೆಗೆ ನಡೆಯಲಿದ್ದು ಅಭ್ಯರ್ಥಿಗಳಿಗೆ ಪಾಲಿಸಬೇಕಾದ ಸೂಚನೆಗಳ ಬಗ್ಗೆ ನೇಮಕಾತಿ ರ‍್ಯಾಲಿಯ ಹೊಣೆ ಹೊತ್ತಿರುವ ಕರ್ನಲ್ ಪುಷ್ಪರಾಜ್ ಮಾಹಿತಿ ನೀಡಿದ್ದಾರೆ.

ಅಗ್ನಿವೀರ್ ಸಾಮಾನ್ಯ ಕರ್ತವ್ಯ, ತಾಂತ್ರಿಕ ಹಾಗೂ ಟ್ರೇಡ್ಸ್ ವರ್ಗಗಳ ಹುದ್ದೆಗೆಳ ನೇಮಕಾತಿ ರ‍್ಯಾಲಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು, ವಿಜಯನಗರ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 14 ಜಿಲ್ಲೆಗಳಿಂದ 957 ಅಭ್ಯರ್ಥಿಗಳು ರಾಲ್ಯಿಯಲ್ಲಿ ಭಾಗವಹಿಸಲಿದ್ದಾರೆ. ಅ.31 ರಂದು 543 ಹಾಗೂ ನ.1 ರಂದು 414 ಅಭ್ಯರ್ಥಿಗಳ ದೈಹಿಕ ಕ್ಷಮತೆ, ವೈದ್ಯಕೀಯ ಹಾಗೂ ವ್ಯಾಸಂಗ ಸೇರಿದಂತೆ ಇತರೆ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.

ನೇಮಕಾತಿ ರಾಲಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ (Admit Card) ನಿಗದಿಪಡಿಸಿರುವ ದಿನಾಂಕ ಮತ್ತು ಸಮಯದಲ್ಲಿ ತಪ್ಪದೆ ಬೆಳಗ್ಗೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿರುವ ಮಾರ್ಷಲಿಂಗ್ ಪ್ರದೇಶಕ್ಕೆ ವರದಿ ಮಾಡಿಕೊಳ್ಳಬೇಕು.

ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿದಂತೆ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು. ದಾಖಲೆಗಳು ತರದಿದ್ದರೆ ಅಥವಾ ತಪ್ಪು ದಾಖಲೆಗಳಿದ್ದರೆ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು.
ನೇಮಕಾತಿಯಲ್ಲಿ ಸಹಾಯ ಮಾಡುವ ಭರವಸೆ ನೀಡುವ ಮಧ್ಯವರ್ತಿಗಳ ಮೋಸಕ್ಕೆ ಅಭ್ಯರ್ಥಿಗಳು ಬಲಿಯಾಗಬಾರದು. ಯಾವುದೇ ರೀತಿಯ ಹಣವನ್ನು ಯಾರಿಗೂ ನೀಡಬೇಡಬಾರದು. ಆಯ್ಕೆಯು ಸಂಪೂರ್ಣವಾಗಿ ಅರ್ಹತೆ ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಆಧಾರದ ಮೇಲೆ ಮಾತ್ರ ನಡೆಯುತ್ತದೆ.
ಯಾವುದೇ ರೀತಿಯ ಮಾದಕ ದ್ರವ್ಯಗಳು ಅಥವಾ ನಶೆ ತರುವ ವಸ್ತುಗಳನ್ನು ಸೇವಿಸುವುದು ಮತ್ತು ಸಾಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆಯ್ದ ಅಭ್ಯರ್ಥಿಗಳ ಡ್ರಗ್ ಸೇವನೆ ಪತ್ತೆ ಪರೀಕ್ಷೆಯನ್ನು ಸಹ ಸ್ಥಳದಲ್ಲಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ, ನೇಮಕಾತಿ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು ಹಾಗೂ ಸೂಕ್ತ ಕ್ರೀಡಾ ಉಡುಪು ಹಾಗೂ ಪಾದರಕ್ಷೆ ಧರಿಸಬೇಕು.

ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.joinindianarmy.nic.in ಅನ್ನು ಸಂಪರ್ಕಿಸುವAತೆ ಹಾಗೂ ವಾಟ್ಸ್ಪ್ ಚಾನಲ್ INDIAN ARMY RECRUITMENT INFO @KARNATAKA channel on Whats App: https://whatsapp.com/channel/0029Vb8ud6yK5cDGhuckHF3u ಫಾಲೋ ಮಾಡುವಂತೆ ಕರ್ನಲ್ ಪುಷ್ಪರಾಜ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now