ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅ. 28 : ವಿಧಾನ ಪರಿಷತ್ ಚುನಾವಣೆಯ ಈ ಭರ್ಜರಿ ಗೆಲುವು ಎನ್ಡಿಎ ಒಕ್ಕೂಟದ ಒಗ್ಗಟ್ಟು ಮತ್ತು ನಾಯಕರ ಸಾಮೂಹಿಕ ನೇತೃತ್ವಕ್ಕೆ ಸಿಕ್ಕಿದ ಮನ್ನಣೆಯಾಗಿದೆ. ಜೊತೆಗೆ, ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧ ಪದವೀಧರ ಹಾಗೂ ಶಿಕ್ಷಕ ಮತದಾರರು ನೀಡಿರುವ ಎಚ್ಚರಿಕೆಯ ಸಂದೇಶ ಹಾಗೂ ಪೇಪರ್ ಬ್ಯಾಲೆಟ್ನಲ್ಲೂ ಜನಪರ ಒಲವು ಇದೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕರಾಧ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ ನಾಲ್ಕು ಸ್ಥಾನಗಳಲ್ಲಿ ಎನ್.ಡಿ.ಎ.ಮೃತ್ರಿ ಕೊಟ ಜಯಗಳಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಆಚರಿಸಿದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವು ಜಯಗಳಿಸಿದ್ದು, ಇದು ಕರ್ನಾಟಕ ಸರ್ಕಾರದ ವೈಫಲ್ಯಗಳನ್ನು ಹಾಗೂ ಭಾರತೀಯ ಜನತಾ ಪಾರ್ಟಿ ಹಾಗೂ ಜೆಡಿಎಸ್ನ ನಾಯಕರ ಒಗ್ಗಟ್ಟಿನ ಫಲವಾಗಿದೆ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೊದಲನೇ ಸುತ್ತಿನ ಮತದಾನದಲ್ಲೇ ಜಯಗಳಿಸುವುದಾಗಿ ತಿಳಿಸಲಾಗಿದ್ದು, ಅದರಂತೆ ರಾಜ್ಯದ ಮತದಾರರು ಅತ್ಯಂತ ಹೆಚ್ಚಿನ ಮತಗಳನ್ನು ನೀಡಿ ಕೆ.ಎಂ. ಸುರೇಶ್ ಅವರನ್ನು ಜಯಶಾಲಿಯಾಗಿ ಕಳುಹಿಸಿಕೊಟ್ಟಿದ್ದಾರೆ. ಇತಿಹಾಸದಲ್ಲಿಯೇ ಕಳೆದ 40-50 ವರ್ಷಗಳಿಂದ ಈ ವಿಧಾನ ಪರಿಷತ್ತಿನಲ್ಲಿ ಭಾರತೀಯ ಜನತಾ ಪಕ್ಷ, ಜನಸಂಘ ಅಥವಾ ಎನ್ಡಿಎ ಜಯಗಳಿಸಿರುವುದು ಮತ್ತು ಜೆಡಿಎಸ್ ಎರಡು ಬಾರಿ ಗೆದ್ದಿರುವುದು ಸೇರಿದಂತೆ ಒಟ್ಟು ಒಂಬತ್ತು ಬಾರಿ ಈ ಕ್ಷೇತ್ರವನ್ನು ಗೆದ್ದುಕೊಂಡ ಐತಿಹಾಸಿಕ ಹಿನ್ನೆಲೆ ಇದೆ ಎಂದು ತಿಳಿಸಿದರು.
ಈ ಚುನಾವಣಾ ಗೆಲುವಿಗೆ ನರೇಂದ್ರ ಮೋದಿ, ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಹಾಗೂ ಚಲವಾದಿ ನಾರಾಯಣಸ್ವಾಮಿ ಮುಂತಾದವರ ನೇತೃತ್ವ ಹಾಗೂ ಮಾರ್ಗದರ್ಶನ ಕಾರಣವಾಗಿದೆ ರಾಜ್ಯದ ಬುದ್ಧಿವಂತ ಮತದಾರರು, ಅಂದರೆ ಪದವೀಧರರು ಹಾಗೂ ಶಿಕ್ಷಕರು, ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಿ ಈ ಜಯ ತಂದುಕೊಟ್ಟಿರುವುದು ರಾಜ್ಯ ಸರ್ಕಾರದ ವೈಫಲ್ಯಗಳ ಸ್ಪಷ್ಟ ಪ್ರತಿಫಲವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಇವಿಎಂ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ವಿರೋಧ ಪಕ್ಷದವರು ಇವಿಎಂ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎಂದು ಆರೋಪಿಸುತ್ತಿರುವುದನ್ನು ನೋಡಿದ್ದೇವೆ. ಆದರೆ ಈ ಚುನಾವಣೆ ಪೇಪರ್ ಬ್ಯಾಲೆಟ್ ಮೂಲಕ ನಡೆದಿದ್ದು, ನಾಲ್ಕೂ ಕ್ಷೇತ್ರಗಳಲ್ಲೂ ಮೊದಲನೇ ಸುತ್ತಿನಲ್ಲೇ ಅಭೂತಪೂರ್ವ ಗೆಲುವು ಸಾಧಿಸಿರುವುದು ವಿಶೇಷವಾಗಿದೆ. ಇವಿಎಂ ಬಗ್ಗೆ ಮಾತನಾಡುತ್ತಿದ್ದವರಿಗೆ ಇದು ಸೂಕ್ತ ನಿದರ್ಶನವಾಗಿದ್ದು, ಪೇಪರ್ ಬ್ಯಾಲೆಟ್ನಲ್ಲೂ ಜನತಾ ಪಕ್ಷ ಹಾಗೂ ಎನ್ಡಿಎಗೆ ಜನತೆಯ ಬೆಂಬಲವಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ತಿಳಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಮಿತ್ರಕೂಟವು ನಾಲ್ಕಕ್ಕೆ ನಾಲ್ಕು ಕ್ಷೇತ್ರಗಳಲ್ಲಿಯೂ ಅಭೂತಪೂರ್ವ ಜಯ ಸಾಧಿಸಿದೆ ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಆಗ್ನೇಯ ಪದವೀಧರ ಕ್ಷೇತ್ರವನ್ನು 23,000ಕ್ಕೂ ಅಧಿಕ ಮತಗಳ ಮುಖೇನ ಅತ್ಯಂತ ಯಶಸ್ವಿಯಾಗಿ ಗೆದ್ದುಕೊಳ್ಳಲಾಗಿದೆ ಎನ್ಡಿಎ ಮಿತ್ರಕೂಟದ ನೇತೃತ್ವದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಅತ್ಯಂತ ಯಶಸ್ವಿಯಾಗಿ ಗೆಲುವು ಸಾಧಿಸುವುದಾಗಿ ಮತ್ತು ರಾಜ್ಯದಲ್ಲಿಯೂ ಸಹ ಭಾರತೀಯ ಜನತಾ ಪಾರ್ಟಿ ಹಾಗೂ ಎನ್ಡಿಎ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲಾಗುವುದು ಎಂದು ದಿಕ್ಸೂಚಿಯಾಗಿದೆ ಎಂದರು.
ಇಂದಿನ ಈ ಚುನಾವಣಾ ಜಯವು ಮುಂಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಿದ್ದು, ಎನ್ಡಿಎ ಮಿತ್ರಕೂಟದ ನೇತೃತ್ವದಲ್ಲಿ ಮುಂಬರುವ ಎಲ್ಲಾ ಚುನಾವಣೆಯಲ್ಲೂ ಅಭೂತಪೂರ್ವ ಗೆಲುವು ಸಾಧಿಸಲಾಗುವುದು ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿಯೂ ಎಲ್ಲರೂ ಗೆದ್ದು ಬೀಗಲಿದ್ದು, ಈ ಗೆಲುವು ಮುಂದಿನ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಜಿ.ಎಚ್ ಮಾತನಾಡಿ, ವಿಧಾನಪರಿಷತ್ ಚುನಾವಣೆ ಯಲ್ಲಿ ಕಾಂಗ್ರೆಸ್ಗೆ ಎದುರಾಗಿರುವ ಹಿನ್ನಡೆಯು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಸಾಮಾಜಿಕ ನ್ಯಾಯ ಮತ್ತು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಎಸ್,ಸಿ, ಎಸ್.ಟಿ. ಮೀಸಲಾತಿ, ಒಳಮೀಸಲಾತಿ, ಎಸ್.ಸಿ.ಪಿ. ಟಿ.ಎಸ್.ಪಿ ಅನುದಾನ ಹಾಗೂ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ವಿಚಾರದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ದ್ರೋಹ ಮಾಡಿದೆ “ಅಹಿಂದ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳದೆ, ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಇದೇ ಧೋರಣೆ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ರಾಜಕೀಯವಾಗಿ ಕಣ್ಮರೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ರೈತಮೊರ್ಚಾ ಕಾರ್ಯದರ್ಶಿ ಕೆ ಮಲ್ಲಿ ಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ರೇಖಾ, ವಕ್ತಾರ ನವೀನ್ ಚಾಲುಕ್ಯ, ಗ್ರಾಮಾಂತರ ಅದ್ಯಕ್ಷ ನಾಗರಾಜ್, ನಗರಸಬಾ ಮಾಜಿ ಸದಸ್ಯ ಲಿಂಗರಾಜ್, ಸುರೇಶ್, ದಗ್ಗೆ ಶಿವಪ್ರಕಾಶ್, ಬಸವೇಶ್, ಕಿರಣ, ವಸಂತಾ ಚಾರ್, ನವೀನ್, ನಾಗರಾಜ್, ವೆಂಕಟೇಶ್, ಮತಿಘಟ್ಟ, ಬಸಮ್ಮ, ಶಮಿಕಾ, ಕಾಂಚನಾ, ರೊಹಿತ್, ಚಂದ್ರಿಕಾ ಲೋಕನಾಥ್, ಪ್ರದೀಪ್,ವಂಶಿ, ವಿರೂಪಾಕ್ಷ ಯಾದವ್, ಅರುಣಾಕುಮಾರಿ, ಶಾಂತಮ್ಮ, ಮಂಜುಳಮ್ಮ, ಕವನಾ, ಕವಿತಾ ,ರಜನಿ, ದೇವಿಕಾ ಸೇರಿದಂತೆ ಇತರರು ಭಾಗವಹಿಸಿದ್ದರು.













