ಬೆಂಗಳೂರು : ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಿಬ್ಬಂದಿ ಕಾರ್ಯಗಳಿಗೆ ವೇಗ ನೀಡಲು ಮಹತ್ವದ ಹೆಜ್ಜೆಯಿಡಲಾಗಿದೆ. ಸರ್ಕಾರಿ ನೌಕರರಿಗೆ ಸಂಬಂಧಿಸಿದ ಪ್ರಮುಖ 35 ಸೇವೆಗಳನ್ನು ‘ಸಕಾಲ’ ಕಾಯ್ದೆಯ ವ್ಯಾಪ್ತಿಗೆ ತರಲಾಗಿದ್ದು, ಇದರಿಂದ ಇಲಾಖಾ ಹಂತದಲ್ಲಿ ಸೇವೆಗಳು ಇನ್ನು ಮುಂದೆ ನಿಗದಿತ ಕಾಲಮಿತಿಯೊಳಗೆ ಸಿಗಲಿವೆ.
ನೌಕರರ ಪ್ರಮುಖ ಸೇವೆಗಳು ಇನ್ನು ಸಕಾಲಕ್ಕೆ ಲಭ್ಯ
ಸರ್ಕಾರಿ ನೌಕರರ ರಜೆ ಮಂಜೂರಾತಿ, ವೇತನ ಬಿಡುಗಡೆ, ಸೇವಾವಧಿ ವಿಸ್ತರಣೆ, ವೈದ್ಯಕೀಯ ರಜೆ, ಪಿಂಚಣಿ ಸೌಲಭ್ಯ, ನಿವೃತ್ತಿ ಪ್ರಕ್ರಿಯೆ, ವರ್ಗಾವಣೆ ಹಾಗೂ ಸೇವಾ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ ಸೇವೆಗಳು ಇದರಲ್ಲಿ ಸೇರಿವೆ. ಈ ಎಲ್ಲಾ ಸೇವೆಗಳು ಸಕಾಲದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ನಿಗಮ-ಮಂಡಳಿ, ಸಂಸ್ಥೆಗಳ ಸಿಬ್ಬಂದಿಯ ಕಡತಗಳು ವಿಳಂಬವಿಲ್ಲದೆ ವಿಲೇವಾರಿಯಾಗಲಿವೆ.
'ಸಕಾಲ'ದ ವ್ಯಾಪ್ತಿಗೆ 35 ಸರ್ಕಾರಿ ಸೇವೆಗಳು-ಹೊಣೆಗಾರಿಕೆಗೆ ಮತ್ತಷ್ಟು ಬಲ
ಸರ್ಕಾರಿ ನೌಕರರ ರಜೆ, ವೇತನ, ಸೇವಾವಧಿ ವಿಸ್ತರಣೆ, ವೈದ್ಯಕೀಯ ರಜೆ, ಪಿಂಚಣಿ, ನಿವೃತ್ತಿ, ವರ್ಗಾವಣೆ ಹಾಗೂ ಸೇವಾ ದಾಖಲೆಗಳಿಗೆ ಸಂಬಂಧಿಸಿದಂತೆ 35 ಸೇವೆಗಳನ್ನು ‘ಸಕಾಲ’ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ.
ಈ ಕ್ರಮದಿಂದ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ… pic.twitter.com/DJEa5p5YM4
— DIPR Karnataka (@KarnatakaVarthe) October 27, 2026
ಇದನ್ನು ಓದಿಚಿತ್ರದುರ್ಗ | ತಾರಕೇಶ್ವರಿ ನಿಧನ
ಪ್ರಾಧಿಕಾರಗಳ ವ್ಯವಸ್ಥೆ ಮುಂದುವರಿಕೆ ಮತ್ತು ಕಾಲಮಿತಿ ನಿಗದಿ
ಸಕಾಲದಡಿ ಪ್ರಸ್ತುತ ಚಾಲ್ತಿಯಲ್ಲಿರುವ ಸಕ್ಷಮ ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರದ ವ್ಯವಸ್ಥೆಯೇ ಮುಂದುವರಿಯಲಿದೆ. ಸಕಾಲ ನಿಯಮಗಳ ಅನ್ವಯ ಮೇಲ್ಮನವಿಗಳನ್ನು ಇತ್ಯರ್ಥಪಡಿಸುವುದಕ್ಕೂ ನಿರ್ದಿಷ್ಟ ಕಾಲಮಿತಿಯನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಸರ್ಕಾರಿ ನೌಕರರ ಕೆಲಸ-ಕಾರ್ಯಗಳಲ್ಲಿ ಹೊಣೆಗಾರಿಕೆ ಮತ್ತು ದಕ್ಷತೆ ಮತ್ತಷ್ಟು ಹೆಚ್ಚಲಿದೆ.












