ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. , ದೇಶದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,608 ರೂಪಾಯಿ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,390 ರೂಪಾಯಿ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10,956 ರೂಪಾಯಿಗೆ ತಲುಪಿದೆ.
ಅಕ್ಟೋಬರ್ 20 ರ ಬೆಲೆಗೆ ಹೋಲಿಸಿದರೆ, ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 109 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 82 ರೂಪಾಯಿ ಇಳಿಕೆಯಾಗಿರುವುದು ಗ್ರಾಹಕರಿಗೆ ತುಸು ನಿರಾಳತೆ ತಂದಿದೆ.
ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಭವಿಷ್ಯದ ವಹಿವಾಟು ವಿಭಿನ್ನ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಜಿಯೋಟಸ್ ಸಿಇಒ ವಿಕ್ರಮ್ ಸುಬ್ಬುರಾಜ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಚಿನ್ನದ ಮಾರುಕಟ್ಟೆ ಒತ್ತಡದಲ್ಲಿದ್ದರೆ, ಬೆಳ್ಳಿ ಚೇತರಿಕೆಯ ಹಾದಿಯಲ್ಲಿದೆ. ಹೂಡಿಕೆದಾರರು ಹಣದುಬ್ಬರದ ಆತಂಕಗಳು ಹಾಗೂ ಅಮೆರಿಕದ ಬಡ್ಡಿದರಗಳ ಮುನ್ಸೂಚನೆಯನ್ನು ಗಮನಿಸುತ್ತಿದ್ದು, ಇವೆರಡೂ ಮುಂಬರುವ ದಿನಗಳಲ್ಲಿ ಬುಲಿಯನ್ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿವೆ ಎಂದು ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಯಿಟರ್ಸ್ ವರದಿಯ ಪ್ರಕಾರ, ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ ಶೇಕಡಾ 0.3 ರಷ್ಟು ಕುಸಿದು 4,125.90 ಡಾಲರ್‌ಗೆ ತಲುಪಿದೆ. ಜತೆಗೆ ಯುಎಸ್ ಡಿಸೆಂಬರ್ ಗೋಲ್ಡ್ ಫ್ಯೂಚರ್ಸ್ ಶೇಕಡಾ 0.4 ರಷ್ಟು ಇಳಿಕೆಯಾಗಿ 4,142.60 ಡಾಲರ್‌ಗೆ ತಲುಪಿದೆ. ಹಣದುಬ್ಬರದ ಅಪಾಯಗಳು, ಯುಎಸ್ ಡಾಲರ್ ಮೌಲ್ಯ ಮತ್ತು ಖಜಾನೆ ಇಳುವರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಫೆಡರಲ್ ರಿಸರ್ವ್‌ನ ನೀತಿ ನಿರ್ಧಾರಗಳು ಮಾರುಕಟ್ಟೆಯ ಏರಿಳಿತವನ್ನು ಮುಂದುವರಿಸುವ ಸಾಧ್ಯತೆಯಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ವಿವರ
ಬೆಂಗಳೂರು, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,608 ರೂಪಾಯಿ, 22 ಕ್ಯಾರೆಟ್ ದರ 13,390 ರೂಪಾಯಿ ಹಾಗೂ 18 ಕ್ಯಾರೆಟ್ ದರ 10,956 ರೂಪಾಯಿಯಷ್ಟಿದೆ.
ದೆಹಲಿಯಲ್ಲಿ ಚಿನ್ನದ ಬೆಲೆ ತುಸು ಹೆಚ್ಚಾಗಿದ್ದು, 24 ಕ್ಯಾರೆಟ್‌ಗೆ ಪ್ರತಿ ಗ್ರಾಂಗೆ 14,623 ರೂಪಾಯಿ, 22 ಕ್ಯಾರೆಟ್‌ಗೆ 13,405 ರೂಪಾಯಿ ಮತ್ತು 18 ಕ್ಯಾರೆಟ್‌ಗೆ 10,971 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 14,608 ರೂಪಾಯಿ ಮತ್ತು 22 ಕ್ಯಾರೆಟ್ 13,390 ರೂಪಾಯಿ ಇದ್ದರೆ, 18 ಕ್ಯಾರೆಟ್ ಚಿನ್ನದ ಬೆಲೆ 10,970 ರೂಪಾಯಿಯಾಗಿದೆ.
ಗುಜರಾತ್‌ನ ವಡೋದರಾ ಮತ್ತು ಅಹಮದಾಬಾದ್ ನಗರಗಳಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 14,613 ರೂಪಾಯಿ, 22 ಕ್ಯಾರೆಟ್ ಚಿನ್ನ 13,395 ರೂಪಾಯಿ ಹಾಗೂ 18 ಕ್ಯಾರೆಟ್ ಚಿನ್ನ 10,961 ರೂಪಾಯಿಗೆ ಮಾರಾಟವಾಗುತ್ತಿದೆ.













