Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಸಿಮ್ರಾನ್ ಶರ್ಮಾ, ದಿಲೀಪ್ ಗವಿತ್‌ಗೆ ಚಿನ್ನದ ಪದಕ

BREAKING: Gold medals for India's Simran Sharma and Dilip Gavit at the Asian Para Games
---Advertisement---

ನವದೆಹಲಿ: ಏಷ್ಯನ್ ಪ್ಯಾರಾ ಗೇಮ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದು, ಸಿಮ್ರಾನ್ ಶರ್ಮಾ ಹಾಗೂ ದಿಲೀಪ್ ಮಹಾದು ಗವಿತ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಸಿಮ್ರಾನ್ ಶರ್ಮಾಗೆ ಡಬಲ್ ಗೋಲ್ಡ್ ಧಮಾಕಾ

ಭಾರತದ ಸ್ಟಾರ್ ಓಟಗಾರ್ತಿ ಸಿಮ್ರಾನ್ ಶರ್ಮಾ ಕ್ರೀಡಾಕೂಟದಲ್ಲಿ ತಾವಾಡಿದ ಎರಡೂ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಅಸಾಧಾರಣ ಸಾಧನೆ ಮೆರೆದಿದ್ದಾರೆ. ಮಹಿಳೆಯರ ಟಿ12 ವಿಭಾಗದ 200 ಮೀಟರ್ ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ (Games Record) ಮೊದಲ ಚಿನ್ನ ಗೆದ್ದಿದ್ದ ಸಿಮ್ರಾನ್, ಇದೀಗ 100 ಮೀಟರ್ ಸ್ಪರ್ಧೆಯಲ್ಲೂ ಕೂಟ ದಾಖಲೆಯೊಂದಿಗೆ ಎರಡನೇ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ. ಫೈನಲ್ ರೇಸ್‌ನಲ್ಲಿ ಮಿಂಚಿನ ವೇಗದ ಓಟ ಪ್ರದರ್ಶಿಸಿದ ಅವರು, ಇರಾನ್‌ನ ಪ್ರತಿಸ್ಪರ್ಧಿಗಿಂತ ಬಹುದೂರದ ಮುನ್ನಡೆ ಸಾಧಿಸಿ ಸುಲಭವಾಗಿ ಗೆಲುವಿನ ನಗೆ ಬೀರಿದರು.

ದಿಲೀಪ್ ಗವಿತ್‌ಗೂ ಬಂಗಾರದ ಬೇಟೆ

ಪುರುಷರ ವಿಭಾಗದಲ್ಲಿ ಭಾರತದ ದಿಲೀಪ್ ಮಹಾದು ಗವಿತ್ ಕೂಡ ದೇಶಕ್ಕೆ ಚಿನ್ನದ ಗರಿ ಮೂಡಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಟಿ47 ವಿಭಾಗದ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ದಿಲೀಪ್, ಇದೀಗ ಏಷ್ಯನ್ ಕೂಟದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಪಾರಮ್ಯವನ್ನು ಮುಂದುವರಿಸಿದ್ದಾರೆ.

ಒಂದೇ ದಿನ ಭಾರತದ ಇಬ್ಬರು ಸ್ಪರ್ಧಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಗೆದ್ದು ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.

Join WhatsApp

Join Now

Join Telegram

Join Now