ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ವಿಜಯದಶಮಿ ಕೇವಲ ಹಬ್ಬವಲ್ಲ, ಅದೊಂದು ಸಂಭ್ರಮದ ಉತ್ಸವ, ಅಜ್ಞಾನದ ಕತ್ತಲನ್ನು ಸೀಳಿ ಸುಜ್ಞಾನದ ಬೆಳಕನ್ನು ಬೀರುವ ವಿಜಯದ ಪರ್ವಕಾಲ. ನವದುರ್ಗೆಯರು ಒಂಬತ್ತು ದಿನಗಳ ಕಾಲ ಒಂಬತ್ತು ರೂಪಗಳಲ್ಲಿ ಆರಾಧನೆಗೊಂಡು, ಹತ್ತನೇ ದಿನ ಜಗನ್ಮಾತೆಯಾಗಿ, ಮಹಿಷಾಸುರಮರ್ದಿನಿಯಾಗಿ ದುಷ್ಟಶಕ್ತಿಯನ್ನು ಸಂಹರಿಸಿದ ವಿಜಯದ ಸಂಕೇತವೇ ಈ ವಿಜಯದಶಮಿ.
ವಿಜಯದಶಮಿ ಕೇವಲ ಹಬ್ಬವಲ್ಲ, ಅದೊಂದು ಸಂಭ್ರಮದ ಉತ್ಸವ, ಅಜ್ಞಾನದ ಕತ್ತಲನ್ನು ಸೀಳಿ ಸುಜ್ಞಾನದ ಬೆಳಕನ್ನು ಬೀರುವ ವಿಜಯದ ಪರ್ವಕಾಲ. ನವದುರ್ಗೆಯರು ಒಂಬತ್ತು ದಿನಗಳ ಕಾಲ ಒಂಬತ್ತು ರೂಪಗಳಲ್ಲಿ ಆರಾಧನೆಗೊಂಡು, ಹತ್ತನೇ ದಿನ ಜಗನ್ಮಾತೆಯಾಗಿ, ಮಹಿಷಾಸುರಮರ್ದಿನಿಯಾಗಿ ದುಷ್ಟಶಕ್ತಿಯನ್ನು ಸಂಹರಿಸಿದ ವಿಜಯದ ಸಂಕೇತವೇ ಈ ವಿಜಯದಶಮಿ. ಈ ಶುಭದಿನದಂದು… pic.twitter.com/DOyfRff1I9
— DK Shivakumar (@DKShivakumar) October 21, 2026
ಈ ಶುಭದಿನದಂದು ಚಾಮುಂಡಿ ತಾಯಿ ನಿಮ್ಮ ಮನೆ-ಮನಗಳಲ್ಲಿ ಅಷ್ಟೈಶ್ವರ್ಯಗಳನ್ನು, ಅನಂತ ಸಂತೋಷವನ್ನು ಹಾಗೂ ಉತ್ತಮ ಆರೋಗ್ಯವನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಎಂದು ನಾಡಿನ ಜನತೆಗೆ ಶುಭ ಕೋರಿದ್ದಾರೆ.












