ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಅ. 10 : ಬಿಹಾರ ರಾಜ್ಯದ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ದಿನಾಂಕ: 01-11-2026 ರಿಂದ ದಿನಾಂಕ: 04-11-2026 ರವರೆಗೆ ನಡೆಯುವ 52ನೇ ಜೂನಿಯರ್ ಬಾಲಕರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ಗೆ ಭಾಗವಹಿಸಲು ಬೆಂಗಳೂರಿನಲ್ಲಿ ಬಾಲಕರ ಆಯ್ಕೆ ಪ್ರಕ್ರಿಯೆ ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಚಿತ್ರದುರ್ಗ ಜಿಲ್ಲಾ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ನ ಅಧ್ಯಕ್ಷರಾದ ಪಿ.ಸಿ. ಮುರುಗೇಶ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ 20 ವರ್ಷದೊಳಗಿನ ಬಾಲಕರ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ: 12-10-2026 ರಂದು ಮದ್ಯಾಹ್ನ 3.00 ಗಂಟೆಗೆ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಂಘಟಿಸಲಿದ್ದು, ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಾಲಕರ ದೇಹದ ತೂಕ 75ಕೆಜಿ ಒಳಗೆ ದಿನಾಂಕ: 04-11-2006 ರ ನಂತರ ಜನಿಸಿ 20 ವರ್ಷದೊಳಗೆ ಇದ್ದು, ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಆಧಾರ್ಕಾರ್ಡ್, ಜನನ ಪ್ರಮಾಣ ಪತ್ರ, ಎಸ್.ಎಸ್. ಎಲ್.ಸಿ. ಅಂಕಪಟ್ಟಿ, ಆಟಗಾರರ ಕ್ಲಬ್ನ ಲೆಟರ್ಹೆಡ್ ಮತ್ತು ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರ ಗಳೊಂದಿಗೆ ಭಾಗವಹಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ:ಪಿ.ಸಿ.ಮುರುಗೇಶ್ ಮೊ:9482013306, ದಾದಾಪೀರ್ ಮೊ:9480778282 ಸಂಪರ್ಕಿಸಲು ಸೂಚಿಸಲಾಗಿದೆ










