Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING : ನಾವಿಪಿಳ್ಳೈಗೆ 2026ರ ನೊಬೆಲ್ ಶಾಂತಿ ಪುರಸ್ಕಾರ ಗೌರವ

---Advertisement---

ನವದೆಹಲಿ : ವಿಶ್ವಸಂಸ್ಥೆಯ ಮಾಜಿ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆ ನವನೀಥಂ ನಾವಿ ಪಿಳ್ಳೈ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ. ನಾರ್ವೆಯ ಓಸ್ಲೋ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೊಬೆಲ್ ಆಯ್ಕೆ ಸಮಿತಿಯು ಈ ಮಹತ್ವದ ಘೋಷಣೆ ಮಾಡಿದೆ.

ಶಾಂತಿ ಸ್ಥಾಪನೆ ಹಾಗೂ ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಾವಿ ಪಿಳ್ಳೈ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಮತ್ತು ಸುದೀರ್ಘ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ನ್ಯಾಯ, ಮಾನವೀಯ ಮೌಲ್ಯಗಳು ಹಾಗೂ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕಾನೂನಿನ ಪಾಲನೆಗಾಗಿ ಅವರು ನಡೆಸಿದ ಹೋರಾಟ ಅಪಾರವಾದದ್ದು ಎಂದು ಸಮಿತಿ ಶ್ಲಾಘಿಸಿದೆ.

ದಕ್ಷಿಣ ಆಫ್ರಿಕಾದ  ಭಾರತ ಮೂಲದವರಾದ ನಾವಿ ಪಿಳ್ಳೈ ಅವರು ಜನಾಂಗೀಯ ತಾರತಮ್ಯ ವಿರೋಧಿ ಚಳವಳಿಯ ಪ್ರಮುಖ ಕಾನೂನು ಹೋರಾಟಗಾರ್ತಿಯಾಗಿ ಗುರುತಿಸಿಕೊಂಡವರು. ನಂತರದ ದಿನಗಳಲ್ಲಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ (ICC) ನ್ಯಾಯಾಧೀಶರಾಗಿ ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿ ವಿಶ್ವಾದ್ಯಂತ ಶೋಷಿತರ ಪರ ದನಿ ಎತ್ತಿದ ಹೆಗ್ಗಳಿಕೆ ಇವರದ್ದಾಗಿದೆ.

Join WhatsApp

Join Now

Join Telegram

Join Now