ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ಚಿತ್ರದುರ್ಗದ ಸಾಹಿತಿ ಡಾ.ಬಿ.ಎಲ್.ವೇಣುರವರ ರಾಜಾ ಸುರಪುರದ ವೆಂಕಟಪ್ಪನಾಯಕ ಐತಿಹಾಸಿಕ ಕಾದಂಬರಿಯನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯ ಪದವಿ ತರಗತಿಗಳಿಗೆ ಪಠ್ಯವನ್ನಾಗಿ ಆಯ್ಕೆ ಮಾಡಿದೆ.
ಇವರ ಕಥೆ ಜೈಭೀಮ್ ಡಿಗ್ರಿ ತರಗತಿಗಳಿಗೆ ಆಯ್ಕೆಯಾಗಿದೆ. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಿ.ಎಲ್.ವೇಣುರವರ ಐತಿಹಾಸಿಕ ಕೃತಿ ದುರ್ಗದ
ಬೇಡರ್ದಂಗೆ ಯನ್ನು ಇದೇ ವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.










