ದಾವಣಗೆರೆ : ದಾವಣಗೆರೆ (Davanagere) ಜಿಲ್ಲೆಯ ಬರಪೀಡಿತ ಪ್ರದೇಶಗಳ ಹಾಗೂ ಬೆಳೆ ಹಾನಿ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಅಂತರ-ಸಚಿವಾಲಯ ಕೇಂದ್ರ ತಂಡವು ಅಕ್ಟೋಬರ್ 04 ರಂದು ಜಿಲ್ಲೆಗೆ ಭೇಟಿ ನೀಡಲಿದೆ.
ಅಕ್ಟೋಬರ್ 04 ರಂದು ಅಪರಾಹ್ನ 3.10 ಕ್ಕೆ ತಾಲೂಕಿನ ನಿರ್ಥಡಿ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆ ಪರಿಶೀಲನೆ ಅಪರಾಹ್ನ 4.35 ಕ್ಕೆ ನ್ಯಾಮತಿ ತಾಲೂಕಿನ ಮದನಭಾವಿ ಗ್ರಾಮದಲ್ಲಿ ಕೆರೆ ವೀಕ್ಷಣೆ ಹಾಗೂ ಪರಿಶೀಲನೆ. ನಂತರ ಬರಪೀಡಿತ ಮೆಕ್ಕೆಜೋಳ ಮತ್ತು ರಾಗಿ ಬೆಳೆಗಳ ಪರಿಶೀಲನೆ – ಸಂಜೆ 5.20ಕ್ಕೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆಗಳ ಪರಿಶೀಲನೆ ಸಂಜೆ 5.40 ಕ್ಕೆ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆ ಪರಿಶೀಲನೆ ಮಾಡಲಿದ್ದಾರೆ.










