Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಜೆಸಿಆರ್ ಬಡಾವಣೆಯ ಶ್ರೀ ಗಣಪತಿ, ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ನಗರದ ಜೆಸಿಆರ್ ಬಡಾವಣೆಯ ಶ್ರೀ ಗಣಪತಿ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಯಶಸ್ವಿಯಾಗಿ ನೆರವೇರಿತು.

ಅಂದು ಬೆಳಗ್ಗೆ 11 ಗಂಟೆಗೆ ಕರೆದಿದ್ದ ಮಹತ್ವದ ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾಗಿ ಚಿದಾನಂದಪ್ಪ ಹಾಗೂ ಅಧ್ಯಕ್ಷರಾಗಿ ಅಶೋಕ ಚತುರ್ವೇದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಸ್.ಜಿ. ಸುರೇಶ್ ಬಾಬು, ಕಾರ್ಯದರ್ಶಿಯಾಗಿ ಬಿ.ಆರ್. ಹರೀಶ್ ಹಾಗೂ ಖಜಾಂಚಿಯಾಗಿ ಮುರುಗೇಶ್ ಗೌಡ್ರು ನೇಮಕಗೊಂಡಿದ್ದಾರೆ.

ನಿರ್ದೇಶಕರ ಮಂಡಳಿಗೆ ಎಚ್.ವಿ. ಕೃಷ್ಣಪ್ಪ, ಸ್ವಂತಾಲ್ ಕೃಷ್ಣ, ವರದಾ ಶಂಕರ್, ಲೋಕೇಶ್ ವಕೀಲರು, ಎನ್.ಜಿ. ಶ್ರೀಧರ್, ಎಂ.ಎ. ಶ್ರೀನಿವಾಸ್ ಹಾಗೂ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದ್ದು, ನೂತನ ನಿರ್ದೇಶಕರಾಗಿ ಎನ್.ಜಿ. ರಮೇಶ್, ಚೈತನ್ಯ, ರವಿಶಂಕರ್ ಮತ್ತು ಕಲಾ ಮಹಾಂತೇಶ್ ಅವರು ಸೇರ್ಪಡೆಗೊಂಡಿದ್ದಾರೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now