Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರದಿಂದ ಜವಳಿ-ಉಡುಪು ನೀತಿ ಪ್ರಕಟ : 5 ಲಕ್ಷ ಉದ್ಯೋಗ ಸೃಷ್ಟಿ.!

---Advertisement---

ಬೆಂಗಳೂರು.ಅಕ್ಟೋಬರ್.01: ರಾಜ್ಯದ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ನೂತನ ‘ಜವಳಿ ಮತ್ತು ಉಡುಪು ನೀತಿ 4.0’ ಅನ್ನು ಪ್ರಕಟಿಸಲಾಗಿದೆ. ಈ ಹೊಸ ನೀತಿಯ ಅಡಿಯಲ್ಲಿ ಒಟ್ಟು 20 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಹಾಗೂ ಸುಮಾರು 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮಹತ್ವದ ಗುರಿ ಹೊಂದಲಾಗಿದೆ.

ರಾಜ್ಯ ಸರ್ಕಾರ ಜನರ ಬದುಕಿಗೆ ಮತ್ತುಷ್ಟು ಅವಕಾಶಗಳ ಬಾಗಿಲು ತೆರೆಯುವ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳ ವಿಸ್ತರಣೆ, ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬಿಯಾಂಡ್‌ ಬೆಂಗಳೂರು ಮೂಲಕ ಕೈಗಾರಿಕಾ ಬೆಳವಣಿಗೆಗೆ ಅವಕಾಶ ಕಲ್ಪಿಸಿ, ಕರ್ನಾಟಕದ ಯುವಜನತೆಗೆ ಉದ್ಯೋಗ ಮತ್ತು ಜನರಿಗೆ ಆರ್ಥಿಕ ಸದೃಢತೆಯ ದಾರಿ ನಿರ್ಮಿಸಲು ಸರ್ಕಾರ ಸದಾ ಬದ್ದವಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿಯೊಂದಿಗೆ ರೂಪಿಸಲಾಗಿರುವ ಈ ನೂತನ ನೀತಿಯು 2026 ರಿಂದ 2031ರ ಅವಧಿಗೆ ಅನ್ವಯವಾಗಲಿದೆ. ಜವಳಿ ಇಲಾಖೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನೀತಿಯ ಅನುಷ್ಠಾನಕ್ಕಾಗಿ ಬರೋಬ್ಬರಿ 4,000 ಕೋಟಿ ರೂ. ಆರ್ಥಿಕ ಬೆಂಬಲಕ್ಕೂ ಅನುಮೋದನೆ ದೊರೆತಿದೆ. ಮುಂದಿನ ಐದು ವರ್ಷಗಳಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ಯುವಜನರಿಗೆ ವ್ಯಾಪಕ ಉದ್ಯೋಗಾವಕಾಶ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕೈಗಾರಿಕೆಗಳು ಕೇವಲ ರಾಜಧಾನಿಗೆ ಸೀಮಿತವಾಗದೆ, ಬೆಂಗಳೂರಿನಿಂದ ಹೊರಗೂ ವಿಸ್ತರಣೆಯಾಗಬೇಕು ಮತ್ತು ಪ್ರಾದೇಶಿಕ ಸಮತೋಲನದೊಂದಿಗೆ ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯದ 34 ತಾಲೂಕುಗಳನ್ನು ‘ವಿಶೇಷ ಆದ್ಯತೆಯ ತಾಲೂಕುಗಳು’ ಎಂದು ಗುರುತಿಸಲಾಗಿದೆ.

Join WhatsApp

Join Now

Join Telegram

Join Now