Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH | ಜೆನ್ ಝಿ ಯುವಜನತೆಯೊಂದಿಗೆ ಪ್ರಧಾನಿ ಮೋದಿ ‘ಭಜನ್ ಕ್ಲಬ್ಬಿಂಗ್’ : ಖಂಜರಿ ಬಾರಿಸಿ ಸಂಭ್ರಮ

PM Modi engages in Bhajan Clubbing with Gen Z youth; joins in the revelry while playing the Khanjari
---Advertisement---

ದೆಹಲಿ: ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ 110ನೇ ಜನ್ಮ ಜಯಂತಿಯ ಅಂಗವಾಗಿ ಶುಕ್ರವಾರ ಸಂಜೆ ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಭಜನ್ ಕ್ಲಬ್ಬಿಂಗ್’ (Bhajan Clubbing) ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೆನ್‌ ಜಿ (Gen Z) ಯುವಜನತೆಯೊಂದಿಗೆ ಭಾಗವಹಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ‘ಮಚ್ ಗಯಾ ಶೋರ್ ಸಾರೀ ನಗರೀ ರೇ’, ‘ಆರತಿ ಕುಂಜ್ ಬಿಹಾರೀ ಕೀ’, ‘ಗಿರಿಧರ್ ಕೃಷ್ಣ ಮುರಾರೀ ಕೀ’ ಸೇರಿದಂತೆ ಹಲವು ಜನಪ್ರಿಯ ಭಕ್ತಿಗೀತೆಗಳಿಗೆ ಯುವಪಡೆ ಭಕ್ತಿಯಿಂದ ಹೆಜ್ಜೆಹಾಕಿ ಸಂಭ್ರಮಿಸಿತು. ಮುಂಚೂಣಿ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ಅವರು ಭಜನೆಯಲ್ಲಿ ತಲ್ಲೀನರಾಗಿ ಖಂಜರಿ (ದಫ್ಲಿ) ಬಾರಿಸುತ್ತಾ ಯುವಕರ ಉತ್ಸಾಹವನ್ನು ಹೆಚ್ಚಿಸಿದರು.

ಯುವಜನರಲ್ಲಿ ಜನಪ್ರಿಯವಾಗುತ್ತಿರುವ ‘ಭಜನ್ ಕ್ಲಬ್ಬಿಂಗ್’

ಸಾಂಪ್ರದಾಯಿಕ ಭಜನೆ ಮತ್ತು ಕೀರ್ತನೆಗಳನ್ನು ಆಧುನಿಕ ಸಂಗೀತ ಶೈಲಿಯೊಂದಿಗೆ ಸಮ್ಮಿಲನಗೊಳಿಸುವ ‘ಭಜನ್ ಕ್ಲಬ್ಬಿಂಗ್’ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯಲ್ಲಿ ಹೊಸ ಆಧ್ಯಾತ್ಮಿಕ ಟ್ರೆಂಡ್ ಆಗಿ ಹೊರಹೊಮ್ಮುತ್ತಿದೆ. ಈ ಕಾರ್ಯಕ್ರಮದ ವಿಡಿಯೋವನ್ನು ಪ್ರಧಾನಿ ಮೋದಿ ಅವರೂ ಸಹ ಹಂಚಿಕೊಂಡಿದ್ದು, ಗಾಯಕರು ಮತ್ತು ಸಂಗೀತಗಾರರ ಭಕ್ತಿಗೀತೆಗಳ ಪ್ರಸ್ತುತಿಗೆ ಸಭಿಕರು ಚಪ್ಪಾಳೆ ತಟ್ಟುತ್ತಾ, ಭಕ್ತಿಯಿಂದ ಮೈಮರೆತು ಕುಣಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರಿಗೆ ನಮನ

ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಗೌರವ ನಮನ ಸಲ್ಲಿಸಿದರು. ಭಾರತೀಯ ಜನಸಂಘ ಮತ್ತು ಬಿಜೆಪಿಯ ಸೈದ್ಧಾಂತಿಕ ಬೆಳವಣಿಗೆಗೆ ಅವರ ಕೊಡುಗೆ, ‘ಏಕಾತ್ಮ ಮಾನವತಾವಾದ’ ಹಾಗೂ ‘ಅಂತ್ಯೋದಯ’ ತತ್ವಗಳನ್ನು ನಾಯಕರು ಸ್ಮರಿಸಿದರು.

ಕೇಂದ್ರ ಸಚಿವರು ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಹರ್ಷ್ ಮಲ್ಹೋತ್ರಾ ಮಾತನಾಡಿ, “ಭಾರತೀಯ ಜನಸಂಘ ಹಾಗೂ ಬಿಜೆಪಿಗೆ ಸೈದ್ಧಾಂತಿಕ ದಿಕ್ಕು ತೋರಿದ ಮಹಾನ್ ನಾಯಕ ದೀನ್‌ದಯಾಳ್ ಉಪಾಧ್ಯಾಯರು. ಅವರು 1951 ರಿಂದ 1968 ರವರೆಗೆ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಬಳಿಕ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು” ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.

Join WhatsApp

Join Now

Join Telegram

Join Now