Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಎಸ್ ಜೆಎಂ ಫಾರ್ಮಸಿ ಕಾಲೇಜಿನಲ್ಲಿ `ವಿಶ್ವ ಔಷಧಿ ತಜ್ಞರ ದಿನಾಚರಣೆ’ : ಹಿರಿಯ ಫಾರ್ಮಸಿಸ್ಟ್ಗಳಿಗೆ ಸನ್ಮಾನ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ನಗರದ ಎಸ್ ಜೆಎಂ ವಿದ್ಯಾಪೀಠ ಹಾಗೂ ಎಸ್ ಜೆಎಂ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ‘ಎಸ್ ಜೆಎಂ ಕಾಲೇಜ್ ಆಫ್ ಫಾರ್ಮಸಿ’ಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ – 2026 ಅನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನಡೆದ ಈ ಕಾರ್ಯಕ್ರಮವು “ಆರೋಗ್ಯಕರ ಭವಿಷ್ಯಕ್ಕಾಗಿ ಫಾರ್ಮಸಿಸ್ಟ್ಗಳ ಸಬಲೀಕರಣ” ಎಂಬ ಧೈಯವಾಕ್ಯದೊಂದಿಗೆ ಜರುಗಿತು.

ಚಿತ್ರದುರ್ಗದ ಸಹಾಯಕ ಔಷಧ ನಿಯಂತ್ರಕರಾದ ಗಿರೀಶ್ ಸಿ.ಹೆಚ್., ಎಸ್ ಜೆಎಂ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಜಿಲ್ಲೆಯ ಹಿರಿಯ ಫಾರ್ಮಸಿ ಅಧಿಕಾರಿ ಹಾಗೂ ವೇರ್ಹೌಸ್ ಮ್ಯಾನೇಜರ್ ಗೀತಾ ಲಕ್ಷ್ಮಿ ಸಿ.ಎಸ್., ಚಿತ್ರದುರ್ಗದ ಫಾರ್ಮಸಿಸ್ಟ್ ಸೀತಾರಾಮ್, ಮೊಳಕಾಲ್ಮೂರಿನ ಫಾರ್ಮಸಿಸ್ಟ್ ಬಸವರಾಜ್ ಬಿ.ಟಿ. ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಮಾರುತಿ ಟಿ. ಎಕಬೋಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಹಾಯಕ ಔಷಧ ನಿಯಂತ್ರಕ ಗಿರೀಶ್ ಸಿ.ಹೆಚ್., ವೈದ್ಯರು, ಶುಶ್ರೂಷಕರು ಮತ್ತು ರೋಗಿಗಳ ನಡುವೆ ಔಷಧ ತಜ್ಞರು ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು. ಅನೇಕ ಬಾರಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವ ಫಾರ್ಮಸಿಸ್ಟ್ಗಳ ಪರಿಶ್ರಮವನ್ನು ಸಮಾಜ ಗುರುತಿಸಬೇಕಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್ಗಳ ದುರ್ಬಳಕೆ ತಡೆಯುವಲ್ಲಿ ಹಾಗೂ ರೆಸಿಸ್ಟೆನ್ಸ್ ಸಮಸ್ಯೆ ನಿಯಂತ್ರಿಸುವಲ್ಲಿ ಔಷಧ ತಜ್ಞರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಿವಿಮಾತು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ ಮಾತನಾಡಿ, ನೂತನ ವಿಶ್ವವಿದ್ಯಾಲಯದ ಮೊದಲ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕಾಗಿ ಕಾಲೇಜು ವತಿಯಿಂದ ಹಲವು ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಇವುಗಳ ಸದ್ಬಳಕೆ ಮಾಡಿಕೊಂಡು ಅತ್ಯುತ್ತಮ ವೃತ್ತಿಪರರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ. ಮಾರುತಿ ಟಿ. ಎಕಬೋಟೆ, ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ನಿರ್ದೇಶನದಂತೆ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅಗತ್ಯ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆ ಬದ್ಧವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಡ್ರಗ್ ಹೌಸ್ ಸೀನಿಯರ್ ಫಾರ್ಮಸಿಸ್ಟ್ ಶ್ರೀಮತಿ ಗೀತಾ ಲಕ್ಷ್ಮಿ, ವಾಣಿ ಮೆಡಿಕಲ್ಸ್ನ ಸೀತಾರಾಮ್ ಹಾಗೂ ಮೊಳಕಾಲ್ಮೂರಿನ ಕೊಂಡ್ಲಹಳ್ಳಿ ಭಂಡಾರಿ ಮೆಡಿಕಲ್ಸ್ನ ಬಸವರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ, ಪೇಂಟಿಂಗ್, ಸುಂದರ ಕೈಬರಹ ಹಾಗೂ ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಡಾ. ಶೋಭಾ ಮತ್ತು ಡಾ. ಯಶೋಧ ನಿರೂಪಿಸಿದರೆ, ಡಾ. ಅಬೂಬಕರ್ ಸಿದ್ದಿಕ್ ವಂದಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ