ಬೆಂಗಳೂರು.ಸೆಪ್ಟೆಂಬರ್.25: ರಾಜ್ಯದ ಜನತೆಗೆ ನಂದಿನಿ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಹಾಲಿನ ದರ ಲೀಟರ್ ಗೆ 4-5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದು ನಗರದ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಪ್ರಮುಖರ ಮಹತ್ವದ ಸಭೆ ನಡೆಯಲಿದ್ದು, ದರ ಪರಿಷ್ಕರಣೆಯ ರೂಪುರೇಷೆ ಸಿದ್ಧವಾಗಲಿದೆ. ವಾಸ್ತವವಾಗಿ ಪ್ರತಿ ಲೀಟರ್ ಹಾಲಿಗೆ ₹8 ರಿಂದ ₹10 ಹೆಚ್ಚಳ ಮಾಡುವಂತೆ ಒಕ್ಕೂಟಗಳು ಬೇಡಿಕೆ ಇಟ್ಟಿದ್ದರೂ, ಗ್ರಾಹಕರಿಗೆ ಹೊರೆಯಾಗದಂತೆ ಮಧ್ಯಮ ಮಾರ್ಗ ಅನುಸರಿಸಲು ಸರ್ಕಾರ ಸೂಚಿಸಿದೆ.
ಹಾಲು ಒಕ್ಕೂಟಗಳ ಜತೆಗಿನ ಸಮಾಲೋಚನೆಯ ನಂತರ ಕೆಎಂಎಫ್ ನಿಯೋಗವು ಮುಖ್ಯಮಂತ್ರಿಗಳ ಜತೆ ಅಂತಿಮ ಸುತ್ತಿನ ಚರ್ಚೆ ನಡೆಸಲಿದೆ. ಈ ಸಭೆಯ ತೀರ್ಮಾನದ ಬೆನ್ನಲ್ಲೇ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ₹4 ರಿಂದ ₹5 ರಷ್ಟು ಹೆಚ್ಚಿಸುವ ಕುರಿತು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.










