Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಇಂದಿನಿಂದ ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನ: ಉಮಾಶ್ರೀ ಅವರಿಂದ ನಾಟಕ ಪ್ರದರ್ಶನಕ್ಕೆ ಚಾಲನೆ

---Advertisement---

ಸುದ್ದಿಒನ್,ದಾವಣಗೆರೆ, ಸೆಪ್ಟೆಂಬರ್. 25 : ನಗರದ ಪಿ.ಬಿ. ರಸ್ತೆಯಲ್ಲಿರುವ ಗುರು ಹೊಳೆ ಹುಚ್ಚೇಶ್ವರ ನಾಟಕ ಸಂಘದ ರಂಗಮಂದಿರದಲ್ಲಿ ಇಂದಿನಿಂದ 10 ದಿನಗಳ ಕಾಲ ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನಗೊಳ್ಳಲಿದೆ.

ಪಿ.ಬಿ. ರತ್ನಯ್ಯ ಅವರು ರಚಿಸಿರುವ ಪ್ರಸಿದ್ಧ ‘ಸಂಪತ್ತಿಗೆ ಸವಾಲ್’ ನಾಟಕವನ್ನು ನಾಟಕ ಸಂಘದ ವತಿಯಿಂದ ಪ್ರದರ್ಶಿಸಲಾಗುತ್ತಿದೆ. ಇಂದು ಸಂಜೆ 6 ಗಂಟೆಗೆ ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಸಂಘದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರಂಗಸಂಚಿಕೆ ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಪಿ.ಬಿ. ಧುತ್ತರಿಗೆ ಟ್ರಸ್ಟ್‌ನ ಅಧ್ಯಕ್ಷ ಎಸ್.ಕೆ. ಕೊನೇಸಾಗರ, ಕರ್ನಾಟಕ ರಂಗಸಮಾಜದ ಸದಸ್ಯರಾದ ಶೇಖರ ಬಾರಿಖಾತ್, ದಿಗಿ ನರೇಶ್ ಸೇರಿದಂತೆ ಗಣ್ಯರು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ.

4–5 ವರ್ಷಗಳ ಬಳಿಕ ಸ್ಥಗಿತಗೊಂಡಿದ್ದ ನಾಟಕ ಪ್ರದರ್ಶನಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದ್ದು, ದಾವಣಗೆರೆಯ ಜನರಿಗೆ ಪ್ರಸಿದ್ಧ ನಾಟಕವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.1968–69ರಲ್ಲಿ ರಜಕಿಯರಿಯಲ್ಲಿ ಪ್ರಥಮ ಬಾರಿಗೆ ‘ಸಂಪತ್ತಿಗೆ ಸವಾಲ್’ ನಾಟಕವನ್ನು ಪ್ರದರ್ಶಿಸಲಾಗಿತ್ತು. ಬಳಿಕ 1974ರಲ್ಲಿ ಚೆಲುವಶ್ರೀ ಚಿತ್ರಮಂದಿರದಲ್ಲಿ ತೆರಕಂಡು ಯಶಸ್ಸು ಗಳಿಸಿತ್ತು ಎಂದು ಸಂಘದವರು ತಿಳಿಸಿದ್ದಾರೆ.
ಸಾವರ್ಜನಿಕರ ಅನುಕೂಲಕ್ಕಾಗಿ ನಿತ್ಯ ಮಧ್ಯಾಹ್ನ 3 ಗಂಟೆ ಹಾಗೂ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಪ್ರತಿದಿನವೂ ಪ್ರೇಕ್ಷಕರಿಗೆ ನಾಟಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿಕಾಗೋಷ್ಠಿಯಲ್ಲಿ ರಂಗನಿರ್ದೇಶಕ ಕೆಂಪಾಡಿವಲ್ ಚಂದ್ರು, ನಾಟಕ ಸಂಘದ ಮಾಲೀಕ ಪಾಪು ಕಲ್ಲೂರ, ರಂಗಾಯಣದ ವಿಶ್ರಾಂತಾಧಿಕಾರಿ ರವಿಚಂದ್ರ ಹಾಗೂ ಕಲಾವಿದರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now