ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಸೆಪ್ಟೆಂಬರ್ 24ರ ಗುರುವಾರದಂದು ಚಂದ್ರನು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಈ ವೇಳೆ ಧನಿಷ್ಠಾ ನಕ್ಷತ್ರದ ಪ್ರಭಾವ ಇರಲಿದ್ದು, ಜೊತೆಗೆ ‘ಧೃತಿ’ ಹಾಗೂ ‘ಶೂಲ’ ಯೋಗಗಳು ನಿರ್ಮಾಣವಾಗಲಿವೆ.
ಗುರುವಾರದ ದಿನ ಶ್ರೀ ಮಹಾವಿಷ್ಣುವಿನ ಆರಾಧನೆಗೆ ಮೀಸಲಾಗಿದ್ದು, ಜಾತಕದಲ್ಲಿ ಗುರು ಬಲವೂ ವೃದ್ಧಿಸಲಿದೆ. ಈ ಶುಭ ಸಂದರ್ಭದಲ್ಲಿ ಧೃತಿ ಯೋಗದ ಪ್ರಭಾವದಿಂದಾಗಿ ಮಿಥುನ ಸೇರಿದಂತೆ ಐದು ರಾಶಿಗಳ ಮೇಲೆ ಮಹಾವಿಷ್ಣುವಿನ ವಿಶೇಷ ಕೃಪೆ ದೊರೆಯಲಿದ್ದು, ವೃತ್ತಿ-ವ್ಯವಹಾರದಲ್ಲಿ ಮಹತ್ತರ ಪ್ರಗತಿ ಕಂಡುಬರಲಿದೆ. ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಇಂದಿನ ಫಲ ಹಾಗೂ ಪರಿಹಾರ ವಿವರ ಹೀಗಿದೆ.
ಮೇಷ ರಾಶಿ (Aries)

ಮೇಷ ರಾಶಿಯವರಿಗೆ ಇಂದು ಅದೃಷ್ಟ ಸಾಥ್ ನೀಡಲಿದೆ. ಕೈಗೆತ್ತಿಕೊಂಡ ಕೆಲಸ-ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ದೊಡ್ಡ ಜವಾಬ್ದಾರಿಗಳು ಸಿಗಲಿದ್ದು, ಉತ್ತಮವಾಗಿ ನಿಭಾಯಿಸಲಿದ್ದಾರೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಆರೋಗ್ಯ ಸುಧಾರಿಸಲಿದೆ.
ವೃಷಭ ರಾಶಿ (Taurus)
ಇಂದು ಉತ್ತಮ ಫಲಿತಾಂಶಗಳು ದೊರೆಯಲಿವೆ. ಮಾಡುವ ಕೆಲಸಗಳಲ್ಲಿ ಅತ್ಯುತ್ತಮ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗಲಿದೆ. ವ್ಯಾಪಾರಸ್ಥರಿಗೆ ಆರ್ಥಿಕ ಪ್ರಗತಿ ಕಂಡುಬರಲಿದ್ದು, ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಧೃತಿ ಯೋಗದಿಂದ ವಿಶೇಷ ಪ್ರಯೋಜನಗಳು ಸಿಗಲಿವೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಒದಗಿಬರಲಿದ್ದು, ಉನ್ನತ ಸ್ಥಾನಕ್ಕೇರುವ ಸಾಧ್ಯತೆಯಿದೆ. ಹೊಸ ಕೌಶಲಗಳನ್ನು ಕಲಿಯಲು ಆಸಕ್ತಿ ತೋರುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಆದರೆ, ಯಾರಿಗೂ ಸಾಲ ನೀಡುವುದು ಅಥವಾ ಸಾಲ ಪಡೆಯುವುದನ್ನು ಮಾಡಬೇಡಿ.
ಕರ್ಕಾಟಕ ರಾಶಿ (Cancer)

ಕುಜ ಗ್ರಹವು ಪುಷ್ಯ ನಕ್ಷತ್ರಕ್ಕೆ ಪ್ರವೇಶಿಸಿರುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಮಾತಿನ ಶೈಲಿಯಿಂದ ಎಲ್ಲರನ್ನೂ ಸೆಳೆಯುವಿರಿ. ವೃತ್ತಿಜೀವನದಲ್ಲಿ ಮುನ್ನಡೆಯಲು ಅತ್ಯುತ್ತಮ ಅವಕಾಶಗಳು ಸಿಗಲಿವೆ. ಆದರೆ ಯಾವುದೇ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ.
ಸಿಂಹ ರಾಶಿ (Leo)
ಮಾಡಬೇಕಾದ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಕೌಶಲ ಹಾಗೂ ಸಾಮರ್ಥ್ಯ ವೃದ್ಧಿಸಲಿದೆ. ವೃತ್ತಿಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ಪ್ರಯಾಣದಿಂದಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಜೆಟ್ ಮೇಲೆ ನಿಗಾ ಇರಿಸಿ.
ಕನ್ಯಾ ರಾಶಿ (Virgo)
ಇಂದು ಹೊಸ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದ್ದು, ಅವರ ಮೂಲಕ ಉತ್ತಮ ಉದ್ಯೋಗಾವಕಾಶಗಳು ಲಭಿಸಬಹುದು. ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಮತ್ತು ಡೀಲ್‌ಗಳು ಸಿಗಲಿವೆ. ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಆರೋಗ್ಯ ಉತ್ತಮವಾಗಿರಲಿದೆ.
ತುಲಾ ರಾಶಿ (Libra)
ಇಂದು ಮಿಶ್ರ ಫಲಿತಾಂಶಗಳು ಎದುರಾಗಲಿವೆ. ಸಣ್ಣಪುಟ್ಟ ಸವಾಲುಗಳು ಎದುರಾಗುವುದರಿಂದ ತಾಳ್ಮೆ ಅಗತ್ಯ. ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವಾಗ ಕುಟುಂಬ ಸದಸ್ಯರ ಸಲಹೆ ಪಡೆಯುವುದು ಒಳಿತು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ, ಉಳಿತಾಯಕ್ಕೆ ಒತ್ತು ನೀಡಿ.
ವೃಶ್ಚಿಕ ರಾಶಿ (Scorpio)
ಹಲವು ಕ್ಷೇತ್ರಗಳಲ್ಲಿ ಸಮಯ ಅನುಕೂಲಕರವಾಗಿದೆ. ಯೋಜನೆಗಳು ಯಶಸ್ವಿಯಾಗಲಿದ್ದು, ಹೊಸ ವ್ಯವಹಾರ ಆರಂಭಿಸಲು ಉತ್ತಮ ದಿನ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಹೊಸ ಹೂಡಿಕೆಗಳಿಂದ ಉತ್ತಮ ಲಾಭ ಬರಲಿದ್ದು, ವೃತ್ತಿಜೀವನದಲ್ಲಿ ಮಹತ್ತರ ಪ್ರಗತಿ ಕಾಣುವಿರಿ.
ಧನು ರಾಶಿ (Sagittarius)
ಬಾಕಿ ಉಳಿದಿದ್ದ ಬಹುತೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮಕರ ರಾಶಿ (Capricorn)
ಗುರು ಗ್ರಹದ ಕೃಪೆಯಿಂದ ಶುಭ ಫಲಗಳು ದೊರೆಯಲಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಅವಕಾಶಗಳು ಹಾಗೂ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ದೀರ್ಘಕಾಲದ ಆರ್ಥಿಕ ಆಸೆಗಳು ಈಡೇರಲಿವೆ. ಹೂಡಿಕೆಗಳಿಂದ ಉತ್ತಮ ಲಾಭ ದೊರೆಯಲಿದ್ದು, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ.
.ಕುಂಭ ರಾಶಿ (Aquarius)
ಶುಭ ಯೋಗಗಳ ಪ್ರಭಾವದಿಂದ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರ ವೃದ್ಧಿಯಾಗಲಿದೆ. ಉಳಿತಾಯದ ಕಡೆ ಹೆಚ್ಚಿನ ಗಮನ ನೀಡುವುದು ಅಗತ್ಯ.
ಮೀನ ರಾಶಿ (Pisces)
ಇಂದು ಮಾಡುವ ಪ್ರಯಾಣಗಳಿಂದ ಅನುಕೂಲವಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಕೈಸೇರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಿ.















