ದಾವಣಗೆರೆ ಸೆಪ್ಟೆಂಬರ್. 22 : 2028ರಲ್ಲಿ ಜಪಾನ್ನ ಐಚಿಯಲ್ಲಿ ನಡೆಯಲಿರುವ ‘ವರ್ಲ್ಡ್ಸ್ಕಿಲ್ಸ್’ ಜಾಗತಿಕ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಯುವಜನರನ್ನು ಆಯ್ಕೆ ಮಾಡಲು ‘ಕರ್ನಾಟಕ ರಾಜ್ಯ ಕೌಶಲ್ಯ ಒಲಿಂಪಿಕ್ಸ್ 2026-27’ (ಇಂಡಿಯಾ ಸ್ಕಿಲ್ಸ್ 2026) ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, 16 ರಿಂದ 25 ವರ್ಷ ವಯೋಮಾನದ ಯುವಕ-ಯುವತಿಯರು ಒಟ್ಟು 63 ವಿವಿಧ ಕೌಶಲ್ಯ ವಿಭಾಗಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ಆಸಕ್ತರು www.skillindiadigital.gov.in ವೆಬ್ಸೈಟ್ ಮೂಲಕ ಸೆಪ್ಟೆಂಬರ್ 22, 2026 ರೊಳಗೆ ಆನ್ಲೈನ್ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 10:30 ರಿಂದ ಸಂಜೆ 6:30 ರ ನಡುವೆ ದೂರವಾಣಿ ಸಂಖ್ಯೆ +91 9606492216 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.










