ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 :
ವಿಶ್ವದಲ್ಲಿ ಮರಳು ಅಥವಾ ಸಿಲಿಕಾ (SiO2) ಹೇಗೆ ಸೃಷ್ಠಿಯಾಯಿತು ಎಂಬುದು ಖಗೋಳ ವಿಜ್ಞಾನದ ಅತ್ಯಂತ ರೋಚಕ ವಿಷಯವಾಗಿದೆ. ನಾವು ನೋಡುವ ಮರಳು ಕೇವಲ ಭೂಮಿಯ ಮೇಲಿನ ಪ್ರಕ್ರಿಯೆಗಳಿಂದ ಮಾತ್ರ ಆಗಿಲ್ಲ. ಅದರ ಮೂಲ ನಕ್ಷತ್ರಗಳ ಮಹಾಸ್ಫೋಟದಲ್ಲಿ (Super Nova) ಅಡಿಗಿದೆ.
ವಿಶ್ವದಲ್ಲಿ ಮರಳಿನ ಸೃಷ್ಠಿಯ ಹಿಂದಿರುವ ವೈಜ್ಞಾನಿಕ ಹಿನ್ನೆಲೆ ಏನೆಂದರೆ ವಿಶ್ವದ ಆರಂಭದಲ್ಲಿ ಕೇವಲ ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳು ಮಾತ್ರ ಇದ್ದವು. ಮರಳಿನ ಮುಖ್ಯ ಅಂಶವಾದ ಸಿಲಿಕಾನ್ ಮತ್ತು ಆಮ್ಲಜನಕ ಆಗ ಇರಲಿಲ್ಲ. ಬೃಹತ್ ನಕ್ಷತ್ರಗಳು ತಮ್ಮ ಜೀವಿತಾವಧಿಯಲ್ಲಿ ತೀವ್ರವಾದ ಶಾಖಾ ಮತ್ತು ಒತ್ತಡದಿಂದಾಗಿ ಹಗುರವಾದ ಧಾತುಗಳನ್ನು ಸಂಯೋಜಿಸಿ ಸಿಲಿಕಾನ್ ಮತ್ತು ಆಮ್ಲಜನಕದಂತಹ ಭಾರವಾದ ಧಾತುಗಳನ್ನು ಸೃಷ್ಠಿಸುತ್ತದೆ.
ನಕ್ಷತ್ರಗಳು ತಮ್ಮ ಇಂಧನ ಮುಗಿದು ಸತ್ತಾಗ, ಅವು “ಸೂಪರ್ನೋವ” ಎಂಬ ದೈತ್ಯ ಸ್ಫೊಟಕ್ಕೆ ಒಳಗಾಗುತ್ತದೆ. ನಾಸಾದ ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶನದ
(NASA’S) (Spitzer Space Telescope)
ಸಂಶೋಧನೆಗಳ ಪ್ರಕಾರ ಈ ಮಹಾಸ್ಫೋಟದ ತೀವ್ರ ಶಾಖದಲ್ಲಿ ಸಿಲಿಕಾನ್ ಮತ್ತು ಆಮ್ಲಜನಕ ಒಟ್ಟಿಗೆ ಸೇರಿ ಸಿಲಿಕಾ ದೂಳಿನ ಕಣಗಳಾಗುತ್ತದೆ. ಇದೇ ಮರಳಿನ ಮೂಲಕ ರೂಪ ಹೀಗೆ ಸ್ಫೋಟಗೊಂಡ ನಕ್ಷತ್ರಗಳಿಂದ ಹೊರಬಂದ ಸಿಲಿಕಾ ಕಣಗಳು ಬಾಹ್ಯಾಕಾಶದಲ್ಲಿ ಕಾಸ್ಮಿಕ್ ಧೂಳು ಹಾಗೀ ಹರಡಿಕೊಳ್ಳುತ್ತದೆ.
ಕಾಸ್ಮಿಕ್ ಧೂಳು ವರ್ಷಗಳ ನಂತರ, ಗುರುತ್ವಾಕರ್ಷಣೆಯ ಬಲದಿಂದಾಗಿ ಈ ಧೂಳಿನ ಮೊಡಗಳು ಒಂದಾಗಿ ಸೂರ್ಯ ಮತ್ತು ಭೂಮಿಯಂತಹ ಗ್ರಹಗಳಾಗಿ ರೂಪಗೊಂಡವು ಭೂಮಿಯ ಹೊರಪದರದಲ್ಲಿ ಶೇಕಡ 60ಕ್ಕಿಂತ ಹೆಚ್ಚು ಸಿಲಿಕಾ ಅಡಗಿದೆ. ಆದ್ದರಿಂದ ನಾವು ಬಳಸುವ ಮರಳು ವಾಸ್ತವವಾಗಿ ಕೊಟ್ಯಾಂತರ ವರ್ಷಗಳ ಹಿಂದೆ ಸತ್ತ ನಕ್ಷತ್ರಗಳ ಧೂಳಾಗಿದೆ.
ಬಾಹ್ಯಾಕಾಶದಿಂದ ಬಂದ ಸಿಲಿಕಾ ಭೂಮಿಯ ರೂಪ ಪಡೆದ ನಂತರ. ನೈಸರ್ಗಿಕ ಪ್ರಕ್ರಿಯೆಗಳಿಂದಾಗಿ ಹಿಂದು ನಾವು ನೋಡುವ ಮರಳಾಗಿದೆ. ಭೂಮಿಯ ಮೇಲಿರುವ ಕ್ವಾಡ್ಜ್ (Quartz) ಒಳಗೊಂಡ ಗ್ರಾನೈಟ್ನಂತಹ ಬಂಡೆಗಳು, ಗಾಳಿ, ಮಳೆ, ನದಿ ನೀರು ಮತ್ತು ತಾಪಮಾನದ ಏರುಪೇರಾಗಿ ಸವೆದು ಸಣ್ಣ ಕಣಗಳಾಗುತ್ತವೆ. ನದಿಗಳು ಈ ಸಣ್ಣ ಕಣಗಳನ್ನು ನೂರಾರು ಕಿಲೋ ಮೀಟರ್ ದೂರಕ್ಕೆ ಕೊಚ್ಚಿ ಕೊಂಡು ಹೋಗುತ್ತವೆ. ದಂಡೆ ಮತ್ತು ಹಾಗೂ ಮರುಭೂಮಿಗಳಲ್ಲಿ ಮರಳಿನ ರಾಸಿಯಾಗಿ ಸಂಗ್ರಹವಾಗುತ್ತದೆ.













