Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ತಾಲ್ಲೂಕು ಮಟ್ಟದ ಕ್ರೀಡಾಕೂಟ : ಸಿರಿಗೆರೆಯ ಮೈಸೂರು ಬಸವಯ್ಯ ವಸತಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಭರ್ಜರಿ ಸಾಧನೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20  : ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ಚಿತ್ರದುರ್ಗ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಸಿರಿಗೆರೆಯ ಮೈಸೂರು ಬಸವಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುಂಪು ಆಟಗಳು ಮತ್ತು ವೈಯಕ್ತಿಕ ಆಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಗುಂಪು ಆಟಗಳ ಸ್ಪರ್ಧೆ :

ವಾಲಿಬಾಲ್: ಬಾಲಕರ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಕಾಲೇಜಿನ ತಂಡಗಳು ‘ಪ್ರಥಮ ಸ್ಥಾನ’ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಖೋ-ಖೋ: ಬಾಲಕಿಯರ ವಿಭಾಗದಲ್ಲಿ ‘ದ್ವಿತೀಯ ಸ್ಥಾನ’ ಪಡೆದು ಆರು (6) ವಿದ್ಯಾರ್ಥಿಗಳು ಮತ್ತು ಬಾಲಕರ ವಿಭಾಗದಲ್ಲಿ ಮೂರು (3) ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಯೋಗ: ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೂವರು (3) ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಥ್ಲೆಟಿಕ್ಸ್ (ವೈಯಕ್ತಿಕ ಸ್ಪರ್ಧೆಗಳು):
ಬಾಲಕಿಯರ ವಿಭಾಗ:
100 ಮೀಟರ್ ಹರ್ಡಲ್ಸ್: ಸಿಂಧೂ – ಪ್ರಥಮ ಸ್ಥಾನ,
1500 ಮೀಟರ್ ಓಟ ಮತ್ತು 3000 ಮೀಟರ್ ಓಟದಲ್ಲಿ ಹಡಪದ ಪಲ್ಲವಿ – ದ್ವಿತೀಯ ಸ್ಥಾನ.
100 ಮೀಟರ್ ಹರ್ಡಲ್ಸ್ – ಅಂಕಿತ ಕೆ.ಆರ್ – ತೃತೀಯ ಸ್ಥಾನ
800 ಮೀಟರ್ ಓಟ – ಸಿಂಧೂ – ತೃತೀಯ ಸ್ಥಾನ.
ಉದ್ದ ಜಿಗಿತ – ಕಾವೇರಿ – ತೃತೀಯ ಸ್ಥಾನ.

ಬಾಲಕರ ವಿಭಾಗ:

4×400 ಮೀಟರ್ ರಿಲೇ – ಪ್ರಥಮ ಸ್ಥಾನ
ಲಿಖಿತ್ ಕುಮಾರ್, ಪವನ್ ಕುಮಾರ್, ಪ್ರದೀಪ್ ಹಾಗೂ ಮನು ಯಾದವ್

4×100 ಮೀಟರ್ ರಿಲೇ ದ್ವಿತೀಯ ಸ್ಥಾನ
ಲಿಖಿತ್ ಕುಮಾರ್, ಚಿರಂಜೀವಿ, ಪವನ್ ಕುಮಾರ್ ಹಾಗೂ ಮನು ಯಾದವ್

200 ಮೀಟರ್ ಓಟ – ಲಿಖಿತ್ ಕುಮಾರ್ – ತೃತೀಯ ಸ್ಥಾನ.

ಈ ಎಲ್ಲಾ ವಿದ್ಯಾರ್ಥಿಗಳುತಾಲ್ಲೂಕು ಮಟ್ಟದ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ವಿಜೇತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧನೆಗೈದು ಕೀರ್ತಿ ತಂದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಎ.ಬಿ. ಮಂಜುನಾಥರವರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಜಗದೀಶ.ಎನ್. ಹಾಗೂ ಪ್ರೋತ್ಸಾಹಿಸಿದ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now