Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಈದ್-ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆ ; ಪ್ರಕರಣ ದಾಖಲು

---Advertisement---

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 :  ನಗರದಲ್ಲಿ ಈ ಹಿಂದೆ ನಡೆದ ಈದ್ ಮಿಲಾದ್ ಮೆರವಣಿಗೆ ಸಮಯದಲ್ಲಿ ಗಾಂಧಿ ಸರ್ಕಲ್ ಹತ್ತಿರ ಮಿತಿ ಮೀರಿ ಶಬ್ದದೊಂದಿಗೆ ಎಂ.ಆರ್. ಡಿ.ಜೆಯನ್ನು ಏಕಾಏಕಿ ಮೆರವಣಿಗೆಯಲ್ಲಿ ತಂದು ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿರುತ್ತದೆ.

ಎಂ.ಆರ್ ಡಿಜೆ ಮಾಲೀಕರನಾದ ಶಾರೂಕ್ ನಿಗೆ ಈದಮಿಲಾದ್ ಮೆರವಣಿಗೆಯಲ್ಲಿ ಪೊಲೀಸ್
ಇಲಾಖೆಯಿಂದ ಡಿಜೆ ಬಳಸಬಾರದೆಂದು ನೋಟೀಸ್ ನೀಡಿದ್ದರೂ ಸಹ ಈದ್ ಮಿಲಾದ್ ಮೆರವಣಿಗೆಯಲ್ಲಿ
ಅತಿಯಾದ ಶಬ್ದದೊಂದಿಗೆ ಡಿಜೆ ಸೌಂಡ್ ಸಿಸ್ಟಮ್ ನ್ನು ಹಾಕಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ
ಭಂಗ ಉಂಟಾಗುವ ರೀತಿಯಲ್ಲಿ ಉಪದ್ರವ ಉಂಟುಮಾಡಿದ ಡಿಜೆ ಮಾಲೀಕರ ಮೇಲೆ ಇಂದು ಹಿರಿಯೂರು
ನಗರ ಠಾಣೆಯ ಅಪರಾಧ ಸಂಖ್ಯೆ 234/2026 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಆರೋಪಿ ಪತ್ತೆ ಮತ್ತು ಬಳಕೆ ಮಾಡಿದ ಡಿಜೆ ವಶಪಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ.
ಸಾರ್ವಜನಿಕರಿಗೆ, ಕಾರ್ಯಕ್ರಮದ ಆಯೋಜಕರಿಗೆ ತಿಳಿಯಪಡಿಸುವುದೇನೆಂದರೆ ಅತಿಯಾದ ಕರ್ಕಶ ಶಬ್ದ ಮಾಡುವ ಡಿಜೆ ಬಳಕೆಯಿಂದ ವೃದ್ಧರಿಗೆ, ಶಾಲಾ ಮಕ್ಕಳಿಗೆ, ಹೃದಯ ಸಂಬಂಧಿ ರೋಗಿಗಳಿಗೆ ಮಹಿಳೆಯರಿಗೆ ಸಾಕಷ್ಟು ತೊಂದರೆಗಳು ಅಗುವ ಸಂಭವವಿರುತ್ತದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಿಯ ಕಲಾವಿದರಿಂದ ನೃತ್ಯ, ವಾದ್ಯ, ಸಂಗೀತ ಹಾಗೂ ಕಲಾತಂಡಗಳೊಂದಿಗೆ
ಹಬ್ಬಹರಿದಿನಗಳನ್ನು ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೋರಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ