Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಇಸ್ಪೀಟ್ ದಂಧೆ; 13 ಆರೋಪಿಗಳು ಪೊಲೀಸರ ಬಲೆಗೆ

---Advertisement---

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 :  ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಕಾನೂನು ಬಾಹೀರವಾಗಿ ಇಸ್ಟಿಟ್ ಜೂಜಾಟ ಆಡುತ್ತಿದ್ದ 13 ಜನಆರೋಪಿಗಳ ಬಂಧನ 3,36200/- ನಗದು ಹಣ ಜಪ್ತು ಮಾಡಲಾಗಿದೆ.

ದಿನಾಂಕ:19.09.2026 ರಂದು ಹಿರಿಯೂರು ಟೌನ್ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಜಾಲಿಗಿಡದ ಜಮೀನಿನಲ್ಲಿ ಬೆಳಿಗ್ಗೆ ಸುಮಾರು 9-45 ಗಂಟೆಗೆ ಕಾನೂನು ಬಾಹಿರವಾಗಿ ಅಂದರ್ ಬಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 13 ಜನ ಎ-1 ಚಿತ್ರಲಿಂಗೇಶ್ವರ ತಂದೆ ಕೃಷ್ಣಾಚಲ, ಎ-2 ರವಿಕುಮಾರ್ ತಂದೆ ಕೃಷ್ಣಪ್ಪ, ಎ-3 ಸೋಮಶೇಖರ ತಂದೆ ತಿಮ್ಮಣ್ಣ, ಎ-4 ನಾಗೇಂದ್ರಪ್ಪ ತಂದೆ ನಾಗರಾಜ್, ಎ-5 ಶಿವಣ್ಣ ತಂದೆ ಹಟ್ಟಪ್ಪ, ಎ-6 ಹನುಮಂತಪ್ಪ ತಂದೆ ಮೇಲಪ್ಪ, ಎ-7 ಬೋರಯ್ಯ ತಂದೆ ಸಂಚಿಲ್ಲಯ್ಯ, ಎ-8 ಮಂಜುನಾಥ ತಂದೆ ಲೇ: ಓಬಳಯ್ಯ, ಎ-9 ಚಂದ್ರಣ್ಣ ತಂದೆ ಅಜ್ಜಣ್ಣ, ಎ-10 ನರಸೇಗೌಡ ತಂದೆ ಜಗನ್ನಾಥ, ಎ-11 ವೀರಣ್ಣ ವೈ.ಎಸ್. ತಂದೆ ಯರ್ರಪ್ಪ, 60 ವರ್ಷ, ಗೊಲ್ಲ ಜನಾಂಗ, ವ್ಯವಸಾಯ, ಪರಶುರಾಂಪುರ, ಚಳ್ಳಕೆರೆ ತಾಲ್ಲೂಕು. ಎ-12 ಸಿದ್ದೇಶ ತಂದೆ ಸಣ್ಣವೀರಪ್ಪ, ಎ-13 ಮೇಘರಾಜಸಿಂಗ್ ತಂದೆ ಲೇ: ವಿಶ್ವನಾಥ್ ಮತ್ತು ಎ14 ಅಭಿಪಾಟೀಲ್ ಹಿರಿಯೂರು ಟೌನ್ ( ಓಡಿ ಹೋಗಿರುತ್ತಾನೆ) ಮತ್ತು ಇತರೆಯವರ ವಿರುಧ್ಧ ಹಿರಿಯೂರು ನಗರ ಪೊಲೀಸ್ ಠಾಣೆ ಮೊ ನಂ; 237/2026 ಕಲಂ; 87 ಕೆ,ಪಿ ಆಕ್ಟ್ ರಿತ್ಯ ದೂರು ದಾಖಲಿಸಿ ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತೆ.
ಸದರಿ ಪ್ರಕರಣದಲ್ಲಿ ಜೂಜುಕೋರರ ಮೇಲೆ ದಾಳಿ ಮಾಡಲು ಶ್ರೀ ರಂಜಿತ್ ಕುಮಾರ್ ಬಂಡಾರು ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಹಾಗೂ ಡಾ. ಆರ್. ಶಿವಕುಮಾರ್ ಕೆ,ಎಸ್,ಪಿ,ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ರವರ ಮಾರ್ಗದರ್ಶನದಲ್ಲಿ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಟಿ, ಎಂ ಶಿವಕುಮಾರ್ ಕೆ,ಎಸ್,ಪಿ,ಎಸ್ ರವರ ನೇತೃತ್ವದಲ್ಲಿ ಶ್ರೀ ಮಹಮ್ಮದ್ ಸಿರಾಜ್ ಪಿಐ,ಚಿತ್ರದುರ್ಗ ಡಿ,ಎ,ಆರ್ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಹಿರಿಯೂರು ನಗರ ಠಾಣೆಯ ಸಿಬ್ಬಂದಿಯವರ ತಂಡವನ್ನು ರಚಿಸಲಾಗಿತ್ತು.

ದಿನಾಂಕ;19.09.2026 ರಂದು ಮೇಲ್ಕಂಡ ಜೂಜುಕೋರರಿಂದ 3.36,200/- ರೂಪಾಯಿ ನಗದು ಹಣ 04 ಮೋಟಾರ್ ಸೈಕಲ್ ಗಳು ( ಅಂದಾಜು ಬೆಲೆ 2 ಲಕ್ಷ) 10 ಮೊಬೈಲ್ ಗಳನ್ನು ( ಅಂದಾಜು ಬೆಲೆ ಒಂದು ಲಕ್ಷ ರೂಪಾಯಿ) ಜಪ್ತುಪಡಿಸಿಕೊಂಡಿರುತ್ತೆ. ಸದರಿ ದಾಳಿಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಶ್ರೀ ರಂಜಿತ್ ಕುಮಾರ್ ಬಂಡಾರು ಐಪಿಎಸ್ ರವರು ಶ್ಲಾಘಿಸಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now