ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ಜಿಲ್ಲೆಯ ಆರು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಿನಾಂಕ:14.09.2026 ರಂದು ಒಟ್ಟು 07 ಅತಿ ಸೂಕ್ಷ್ಮ, 114 ಸೂಕ್ಷ್ಮ, 2013 ಸಾಮಾನ್ಯ ಒಟ್ಟು 2134 ಗಣೇಶ ಮೂರ್ತಿಗಳು ಪ್ರತಿಷ್ಟಾಪನೆಗೊಂಡಿರುತ್ತವೆ.
ಗಣೇಶ ಮೂರ್ತಿಗಳ ಪೈಕಿ 3ನೇ ದಿನದಂದು ಒಟ್ಟು 1170 ಗಣಪತಿಗಳು, 5ನೇ ದಿನದಂದು 542 ಗಣಪತಿಗಳು. 6ನೇ ದಿನದಂದು 49 ಗಣಪತಿಗಳು, 7ನೇ ದಿನದಂದು 93 ಗಣಪತಿಗಳು, 8ನೇ ದಿನದಂದು 27 ಗಣಪತಿಗಳು. 9ನೇ ದಿನದಂದು 87 ಗಣಪತಿ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ಜಿಲ್ಲೆಯಲ್ಲಿ ಕೊನೆಯದಾಗಿ ದಿನಾಂಕ:14.10.2026 ರಂದು ಹಿರಿಯೂರು ನಗರದಲ್ಲಿನ ಶಕ್ತಿ ಗಣಪತಿ ಮೂರ್ತಿಯ ವಿಸರ್ಜನೆಯಾಗಲಿದೆ.
ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ಚಿತ್ರದುರ್ಗ ನಗರ. ಭರಮಸಾಗರ, ಹೊಳಲ್ಕೆರೆ ಪಟ್ಟಣ, ಹೊಸದುರ್ಗ ಪಟ್ಟಣ, ಹಿರಿಯೂರು ನಗರ, ಚಳ್ಳಕೆರೆ ನಗರ, ನಾಯಕನಹಟ್ಟಿ ಪಟ್ಟಣ. ಮೊಳಕಾಲ್ಕೂರು ಪಟ್ಟಣಗಳಲ್ಲಿ ಪ್ರತಿಷ್ಟಾಪಿಸಲಾಗಿರುವ ಹಿಂದೂ ಮಹಾ ಗಣಪತಿಗಳನ್ನು ಅತಿಸೂಕ್ಷ್ಮ ಗಣಪತಿಗಳೆಂದು ಗುರುತಿಸಲಾಗಿದೆ.

ದಿನಾಂಕ:20.09.2026 ರಂದು ಮೊಳಕಾಲ್ಕೂರು ಪಟ್ಟಣದಲ್ಲಿ, ದಿನಾಂಕ:21.09.2026ರಂದು ಭರಮಸಾಗರ ಗ್ರಾಮದಲ್ಲಿ, ದಿನಾಂಕ:22.09.2026 ರಂದು ನಾಯಕನಹಟ್ಟಿ ಪಟ್ಟಣದಲ್ಲಿ, 24.09.2026 ರಂದು ಚಳ್ಳಕೆರೆ ನಗರದಲ್ಲಿ 26.09.2026 ರಂದು ಹೊಸದುರ್ಗ ಮತ್ತು ಹೊಳಲ್ಕೆರೆ ಪಟ್ಟಣದಲ್ಲಿ. ದಿನಾಂಕ:03.10.2026 ರಂದು ಚಿತ್ರದುರ್ಗ ನಗರದಲ್ಲಿ ಶೋಭಾಯಾತ್ರೆ ನಡೆಸಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ಈ ಬಗ್ಗೆ ಜಿಲ್ಲೆಯಾದ್ಯಾಂತ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ ಎಂದು ಚಿತ್ರದುರ್ಗ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.










