ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಇತ್ತೀಚೆಗೆ ಅಂದರೆ ಸೆಪ್ಟಂಬರ್ 2026ರ ಮೊದಲ ವಾರದಲ್ಲಿ ಇಂಡೋನೇಷ್ಯಾದ ಸುಂದಾ ಜಲಸಂಧಿಯಲ್ಲಿರುವ ಅತ್ಯಂತ ಪ್ರಸಿದ್ಧಿ ಮತ್ತು ಸಕ್ರಿಯ ಜ್ವಾಲಾಮುಖಿಯ “ಅನಕ್ ಕ್ರಾಕಟೌ” ಭೀಕರವಾಗಿ ಸ್ಫೋಟಗೊಂಡಿದೆ. ಸೆಪ್ಟೆಂಬರ್ 4 ರಿಂದ ಆರಂಭಗೊಂಡು ಭಾನುವಾರ (ಸೆಪ್ಟಂಬರ್ 6, 2026 ಮತ್ತು ಸೆಪ್ಟಂಬರ್ 8ರ ವರೆಗೂ ನಿರಂತರವಾಗಿ ಈ ಸ್ಫೋಟ ಸಂಭವಿಸಿದೆ. ಈ ಜ್ವಾಲಾಮುಖಿಯು ಸುಮಾರು 25 ಗಂಟೆಗಳ ಕಾಲನಿರಂತರವಾಗಿ ಲಾವಾರಸ ಮತ್ತು ಬೂದಿಯನ್ನು ಉಗುಳಿದೆ. ಇದರ ಹಿನ್ನೆಲೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಪ್ರಸ್ತುತ ಪರಿಣಾಮಗಳ ಆಳವಾದ ವಿವರಣೆ ಏನೆಂದರೆ “ಅನಕ್ ಕ್ರಾಕಟೌ”ವೆಂದರೆ ಇಂಡೋನೇಷಿಯನ್ ಭಾಷೆಯಲ್ಲಿ ಕ್ರಾಕಟೌನ ಮಗು ಎಂದರ್ಥ.
ಕ್ರಿ.ಶ. 1883ರಲ್ಲಿ ಇಲ್ಲಿ ನಮೂಲ “ಕ್ರಾಕಟೌ” ಜ್ವಾಲಾಮುಖಿ ಇತಿಹಾಸದಲ್ಲಿ ಅತ್ಯಂತ ಭೀಕರವಾಗಿ ಸ್ಫೋಟಗೊಂಡಿತ್ತು. ಈ ಸ್ಪೋಟದ ಶಬ್ಧವು ಎಷ್ಟೂ ತೀವ್ರವಾಗಿತ್ತೆಂದರೆ ಸಾವಿರಾರು ಕಿಲೋ ಮೀಟರ್ ದೂರದ ಆಸ್ಟ್ರೇಲಿಯಾ ಮತ್ತು ಭಾರತದವರೆಗೂ ಕೇಳಿಸಿತ್ತು. ಆ ಘಟನೆಯಲ್ಲಿ 36,000 ಕ್ಕೂ ಹೆಚ್ಚು ಜನರು ಸಾವನ್ನಾಪ್ಪಿದರು ಮತ್ತು ಜಾಗತಿಕ ಹವಾಮಾನ ಬದಲಾಗಿತ್ತು. ಈ ಭೀಕರ ಸ್ಫೋಟದ ನಂತರ ಮೂಲ ಜ್ವಾಲಾಮುಖಿ ಸಮುದ್ರದೊಳಗೆ ಕುಸಿದು ದೊಡ್ಡ ಹೊಂಡ ನಿರ್ಮಾಣವಾಯಿತು. ಅದೇ ಜಾಗದಲ್ಲಿ 1927 ರಿಂದ ಸಮುದ್ರದೊಳಗಿನ ಲಾಲಾರಸ ಸಂಗ್ರಹದಿಂದ ಹೊಸದಾಗಿ ಬೆಳೆದು ಒಂದು ದ್ವೀಪವೇ ಈ “ಅನಕ್ ಕ್ರಾಕಟೌ” ಇದು ನಿರಂತರವಾಗಿ ಜ್ವಾಲಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಗಾತ್ರದಲ್ಲಿ ಬೆಳೆಯುತ್ತಿದೆ.
ಈ ಹಿಂದೆ 2018ರಲ್ಲಿ ಇದು ಸ್ಫೋಟ ಇದು ಸ್ಫೋಟಗೊಂಡಗ ಇದರ ಭಾಗ ಸಮುದ್ರಕ್ಕೆ ಕುಸಿದು ಭೀಕರ ಸುನಾಮಿ ಸೃಷ್ಟಿಯಾಗಿ 430 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಭೂವಿಜ್ಞಾನಿಗಳು ಮತ್ತು ಜ್ವಾಲಾಮುಖಿ ತಜ್ಞರು ಈ ಸ್ಫೋಟವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅವರ ವೈಜ್ಞಾನಿಕ ವಿಶ್ಲೇಷಣೆಗಳಂತೆ ಇಂಡೋನೇಷ್ಯಾ ದೇಶವು “ಪೆಸಿಪಿಕ್ ರಿಂಗ್ ಆಫ್ ಪೈರ್” ವಲಯದಲ್ಲಿದೆ. ಇಲ್ಲಿ ಇಂಡೋ-ಆಸ್ಟೇಲಿಯಾನ್ ಪ್ಲೇಟ್ ಮತ್ತು ಯುರೇಷಿಯನ್ನು ಆಸ್ಟ್ರೇಲಿಯನ್ ಪ್ಲೇಟ್ ಭೂಮಿಯ ಆಳಕ್ಕೆ ಕುಸಿದಾಗ ಉಂಟಾಗುವ ವಿಪರೀತ ಶಾಖದಿಂದಾಗಿ ಶಿಲೆಗಳು ಕರಗಿ “ಮಾಗ್ಮಾ” ಸೃಷ್ಟಿಯಾಗುತ್ತದೆ. ಈ ಮಾಗ್ಮಾ ಒತ್ತಡ ತಾಳಲಾರದೆ ಅನಕ್ ಕ್ರಾಕಟೌ ಮೂಲಕ ಹೊರಬಂದಿದೆ.
ವಿಜ್ಞಾನಿಗಳ ಪ್ರಕಾರ, ಇತ್ತೀಚಿನ ಸ್ಫೋಟಕ್ಕೆ ಭೂಮಿಯ ಆಳದಿಂದ ಹಠಾತ್ತನೆ ಚಿಮ್ಮಿದ ಹೊಸ ಮಾಗ್ಮಾ ಪ್ರವಾಹವೇ ಕಾರಣ ಇದು ಜ್ವಾಲಾಮುಖಿಯ ಒಳಗೆ ಅನಿಲಗಳ ತೀವ್ರ ಒತ್ತಡವನ್ನು ಸೃಷ್ಟಿಸಿ ಸ್ಪೋಟದ ತೀವ್ರತೆಯನ್ನು ಹೆಚ್ಚಿಸಿತ್ತು. ಬಾಹ್ಯಾಕಾಶ ಸಂಸ್ಥೆ (NASA) ದ ಮೂಲಕ ಉಪಗ್ರಹ ಚಿತ್ರಗಳ ಪ್ರಕಾರ, ಈ ಸ್ಪೋಟದಿಂದ ಹೊರಬಂದ ಬೂದಿ ಮತ್ತು ಹಾನಿಕಾರಕ ಅನಿಲಗಳ ಮೋಡವು ವಾತಾವರಣದಲ್ಲಿ ಸುಮಾರು 50,000 ಅಡಿ ಎತ್ತರದವರೆಗೆ ಚಿಮ್ಮಿದೆ. ಇದರಲ್ಲಿ ಮುಖ್ಯವಾಗಿ ಸಲ್ಪಾರ್ ಡೈಆಕ್ಸೈಡ್, ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನ ಆವಿ ಇದೆ.
ಭೂಕಂಪಶಾಸ್ತ್ರಜ್ಞರು ಈ ಸ್ಫೋಟದಿಂದಾಗಿ ಮತ್ತೊಮ್ಮೆ ಜ್ವಾಲಾಮುಖಿ ದ್ವೀಪ ಭಾಗವು ಸಮುದ್ರಕ್ಕೆ ಕುಸಿದು 2018ರ ಮಾದರಿಯಲ್ಲೇ ಮತ್ತೊಂದು ಮೇರ್ಗಿ ಸುನಾಮಿ ಸೃಷ್ಟಿಯಾಗಬಹುದು ಎಂಬ ಆಂತಕ ವ್ಯಕ್ತಪಡಿಸದ್ದಾಗ ಇಂಡೋನೇಷ್ಯಾದ ಜ್ವಾಲಮೂಖಿ ಮತ್ತು ಭೂವೈಜ್ಞಾನಿಕ ವಿಪತ್ತು ತಗ್ಗಿಸುವಕೆ ಕೇಂದ್ರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಮುದ್ರ ತೀರಿದ ಜನರಿಗೆ ಕರಾವಳಿಯಿಂದ ದೂರವಿರಲು ಸೂಚಿಸಿದೆ.












