Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಂಚಿಕೆಯಾಗದೇ ಖಾಲಿ ಉಳಿದ 24,832 ಎಂಜಿನಿಯರಿಂಗ್ ಕೋರ್ಸ್ ಗಳು.!

---Advertisement---

ಬೆಂಗಳೂರು.ಸೆಪ್ಟೆಂಬರ್. 10 : ಎಂಜಿನಿಯರಿಂಗ್ ಸೇರಿದಂತೆ UGCET ಕೋರ್ಸ್ ಗಳ 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣ ಆಗಿದ್ದು, ಒಪ್ಪಂದದ ಪ್ರಕಾರ ಉಳಿಕೆ ಸೀಟುಗಳನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ KEA ಹಸ್ತಾಂತರಿಸಿದೆ.

ಎಲ್ಲ ವಿಧದ ಎಂಜಿನಿಯರಿಂಗ್ ಕೋರ್ಸ್ ಗಳ 24,283 ಸೀಟು ಹಾಗೂ ಆರ್ಕಿಟೆಕ್ಚರ್ ಕೋರ್ಸ್ ನ 252 ಸೀಟು ಹಂಚಿಕೆಯಾಗದೆ ಉಳಿದಿವೆ.

 ಎಂಜಿನಿಯರಿಂಗ್ ಹೊರತುಪಡಿಸಿದರೆ ನರ್ಸಿಂಗ್ ನಲ್ಲಿ ಅತಿ ಹೆಚ್ಚು ಸೀಟು ಉಳಿದಿವೆ. ಒಟ್ಟು 36,238 ಸೀಟುಗಳ ಪೈಕಿ 13,407 ಸೀಟು ಮಾತ್ರ ಹಂಚಿಕೆಯಾಗಿ, 22,832 ಸೀಟು ಹಾಗೆಯೇ ಉಳಿದಿವೆ.

ಪಶು ವೈದ್ಯಕೀಯ ಕೋರ್ಸ್ ನ ಎಲ್ಲ 366 ಸೀಟು ಹಂಚಿಕೆಯಾಗಿವೆ. ಫಾರ್ಮಸಿ ಕೋರ್ಸ್ ನ 489, ಬಿಪಿಟಿ- 22, ಕೃಷಿ ಮತ್ತು ಸಂಬಂಧಿತ ಕೋರ್ಸ್ ಗಳ 20, ಬಿಎಸ್ಸಿ ಎಎಚ್ಎಸ್ ನ 2,465 ಸೀಟು ಉಳಿದಿವೆ. ಯೋಗಾ ಮತ್ತು ನ್ಯಾಚುರೋಪತಿ ಕೋರ್ಸ್ ನ ಒಟ್ಟು 520 ಸೀಟುಗಳಲ್ಲಿ 214 ಸೀಟು ಉಳದಿವೆ.

3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸೆ.11ರವರೆಗೆ ಅವಕಾಶ‌ ನೀಡಲಾಗಿದೆ. ಕಡ್ಡಾಯ ಪ್ರವೇಶವಾಗಿರುವ ಕಾರಣ ಎಲ್ಲರೂ ತಪ್ಪದೆ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕನಿರ್ದೇಶಕರು, ಐಎಎಸ್ ಹೆಚ್.ಪ್ರಸನ್ನ ತಿಳಿಸಿದ್ದಾರೆ.

Join WhatsApp

Join Now

Join Telegram

Join Now