Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ಯಾಸ್ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರಾ? ಈ ನಂಬರ್‌ಗಳಿಗೆ ದೂರು ನೀಡಿ

---Advertisement---

ಬೆಂಗಳೂರು.ಸೆಪ್ಟೆಂಬರ್.10: ಎಲ್‌ಪಿಜಿ ಸಿಲಿಂಡರ್ ಮನೆ ಬಾಗಿಲಿಗೆ ತಲುಪಿಸಿದ ನಂತರ ಡೆಲಿವರಿ ಬಾಯ್ಸ್‌ಗಳು 30 ರಿಂದ 50 ರೂಪಾಯಿ ಹೆಚ್ಚುವರಿ ನೀಡಲೇಬೇಕೆಂದು ಕೆಲವರು ಗ್ರಾಹಕರೊಂದಿಗೆ ವಾಗ್ವಾದಕ್ಕಿಳಿಯುವ ನಿದರ್ಶನಗಳೂ ಇವೆ. ಆದರೆ, ನಿಯಮಗಳ ಪ್ರಕಾರ ಸಿಲಿಂಡರ್ ಬಿಲ್‌ನಲ್ಲಿರುವ ಮೊತ್ತಕ್ಕಿಂತ ಒಂದು ರೂಪಾಯಿ ಕೂಡ ಹೆಚ್ಚಿಗೆ ನೀಡಬೇಕಾಗಿಲ್ಲ.

ನಿಯಮಗಳು ಏನು ಹೇಳುತ್ತವೆ?

ಗ್ಯಾಸ್ ಏಜೆನ್ಸಿಯ ಗೋದಾಮಿನಿಂದ (ವೇರ್‌ಹೌಸ್) 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ಸಾರಿಗೆ ಶುಲ್ಕ (Transportation Charge) ಇರುವುದಿಲ್ಲ.

5 ರಿಂದ 15 ಕಿಲೋಮೀಟರ್ ದೂರವಿದ್ದರೆ ಗರಿಷ್ಠ 20 ರೂಪಾಯಿ ಡೆಲಿವರಿ ಶುಲ್ಕ ಇರಬಹುದು, ಆದರೆ ಈ ಶುಲ್ಕವು ಅಧಿಕೃತ ಗ್ಯಾಸ್ ಬಿಲ್‌ನಲ್ಲೇ ನಮೂದಾಗಿರುತ್ತದೆ.

ಬಿಲ್‌ನಲ್ಲಿ ಉಲ್ಲೇಖಿಸಿರುವ ಒಟ್ಟು ಮೊತ್ತವನ್ನು ಹೊರತುಪಡಿಸಿ ಡೆಲಿವರಿ ಸಿಬ್ಬಂದಿಗೆ ನಗದು ರೂಪದಲ್ಲಿ ಯಾವುದೇ ಪ್ರತ್ಯೇಕ ಶುಲ್ಕ ನೀಡುವ ಅಗತ್ಯವಿಲ್ಲ.

ಹೆಚ್ಚುವರಿ ಹಣ ಕೇಳಿದರೆ ದೂರು ನೀಡುವುದು ಹೇಗೆ?

ಡೆಲಿವರಿ ಸಿಬ್ಬಂದಿ ಬಲವಂತವಾಗಿ ಹಣ ವಸೂಲಿ ಮಾಡಲು ಯತ್ನಿಸಿದರೆ, ಮೊದಲು ನಿಮ್ಮ ಗ್ಯಾಸ್ ಏಜೆನ್ಸಿಗೆ ಮಾಹಿತಿ ನೀಡಿ. ಅಲ್ಲಿ ಪರಿಹಾರ ಸಿಗದಿದ್ದರೆ ಆಯಾ ತೈಲ ಕಂಪನಿಗಳ ಅಧಿಕೃತ ಹೆಲ್ಪ್‌ಲೈನ್‌ಗಳಿಗೆ ಕರೆ ಮಾಡಿ ದೂರು ದಾಖಲಿಸಬಹುದು:

ಇಂಡೇನ್ (Indane): 7718955555

ಭಾರತ್ ಗ್ಯಾಸ್ (Bharat Gas): 1800224344

ಹೆಚ್‌ಪಿ ಗ್ಯಾಸ್ (HP Gas): 9222201122

ಸಾಮಾನ್ಯ ಟೋಲ್-ಫ್ರೀ ದೂರು ಸಂಖ್ಯೆ (ಎಲ್ಲಾ ಕಂಪನಿಗಳಿಗೆ): 18002333555

ಸಾಮಾಜಿಕ ಜಾಲತಾಣಗಳಾದ ಎಕ್ಸ್ (Twitter) ಅಥವಾ ಫೇಸ್‌ಬುಕ್ ಮೂಲಕವೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕೃತ ಖಾತೆಯಾದ @MoPNG_eSeva ಅನ್ನು ಟ್ಯಾಗ್ ಮಾಡಿ ನೇರವಾಗಿ ದೂರು ಸಲ್ಲಿಸಬಹುದು.

Join WhatsApp

Join Now

Join Telegram

Join Now