ಸುದ್ದಿಒನ್.ಸೆಪ್ಟೆಂಬರ್.07: ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈಗ ಇಪಿಎಫ್ಒಗೆ ಸಂಬಂಧಿಸಿದ ಹಲವು ಪ್ರಮುಖ ಸೇವೆಗಳು ‘ಉಮಂಗ್’ (UMANG) ಮೊಬೈಲ್ ಆ್ಯಪ್ನಲ್ಲಿ ಸುಲಭವಾಗಿ ಲಭ್ಯವಾಗುತ್ತಿವೆ.
ನೌಕರರು ಮನೆಯಲ್ಲೇ ಕುಳಿತು ಯುಎಎನ್ (UAN) ಜನರೇಟ್ ಮಾಡುವುದು, ಆಕ್ಟಿವೇಟ್ ಮಾಡುವುದು ಮತ್ತು ಫೇಸ್ ಅಥೆಂಟಿಕೇಶನ್ ಸೇರಿದಂತೆ 5 ಮಹತ್ವದ ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು. ಇದರ ಜೊತೆಗೆ ಬ್ಯಾಲೆನ್ಸ್ ಚೆಕ್ ಮಾಡುವುದು, ಪಾಸ್ಬುಕ್ ಡೌನ್ಲೋಡ್ ಹಾಗೂ ಕ್ಲೈಮ್ ಸ್ಟೇಟಸ್ ತಿಳಿಯುವ ಸೌಲಭ್ಯಗಳೂ ಇಲ್ಲಿ ಸಿಗಲಿವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

ಉಮಂಗ್ ಆ್ಯಪ್ನಲ್ಲಿ ಸಿಗುವ 5 ಪ್ರಮುಖ ಸೇವೆಗಳು:
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾಹಿತಿ ಪ್ರಕಾರ, ಉಮಂಗ್ ಆ್ಯಪ್ ಮೂಲಕ ಯುಎಎನ್ ಹಂಚಿಕೆ (Allotment), ಯುಎಎನ್ ಆಕ್ಟಿವೇಶನ್ ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಯುಎಎನ್ನ ಫೇಸ್ ಅಥೆಂಟಿಕೇಶನ್ ಅನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಯುಎಎನ್ ಸಕ್ರಿಯಗೊಂಡ ನಂತರ ಸದಸ್ಯರು ತಮ್ಮ ಬ್ಯಾಲೆನ್ಸ್ ಪರಿಶೀಲನೆ, ಪಾಸ್ಬುಕ್ ಡೌನ್ಲೋಡ್, ಕ್ಲೈಮ್ ಸ್ಟೇಟಸ್ ಟ್ರ್ಯಾಕ್ ಮಾಡುವುದು ಮತ್ತು ಕೆವೈಸಿ (KYC) ಅಪ್ಡೇಟ್ನಂತಹ ಆನ್ಲೈನ್ ಸೇವೆಗಳನ್ನು ಬಳಸಬಹುದು. ಈ ಸೇವೆಗಳನ್ನು ಪಡೆಯಲು ಮಾನ್ಯವಾದ ಆಧಾರ್ ಸಂಖ್ಯೆ, ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಫೇಸ್ ಅಥೆಂಟಿಕೇಶನ್ಗಾಗಿ ‘ಆಧಾರ್ ಫೇಸ್ ಆರ್ಡಿ’ (Aadhaar Face RD) ಆ್ಯಪ್ ಅಗತ್ಯವಿದೆ.
ಹೊಸ UAN ಜನರೇಟ್ ಮತ್ತು ಆಕ್ಟಿವೇಟ್ ಮಾಡುವುದು ಹೇಗೆ?
ಇದುವರೆಗೆ ಯುಎಎನ್ ಹೊಂದಿರದ ಉದ್ಯೋಗಿಗಳು, ಉಮಂಗ್ ಆ್ಯಪ್ನ ‘UAN Allotment and Activation’ ಆಯ್ಕೆಯನ್ನು ಆಯ್ದುಕೊಂಡು ತಮ್ಮ ಆಧಾರ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಪರಿಶೀಲನೆಗೆ ಒಪ್ಪಿಗೆ ನೀಡಿದ ನಂತರ ಬರುವ ಒಟಿಪಿ (OTP) ಅನ್ನು ನಮೂದಿಸಬೇಕಾಗುತ್ತದೆ. ನಿಮ್ಮ ಆಧಾರ್ ಈಗಾಗಲೇ ಬೇರೆ ಯುಎಎನ್ಗೆ ಲಿಂಕ್ ಆಗಿದೆಯೇ ಎಂದು ಸಿಸ್ಟಂ ಪರಿಶೀಲಿಸುತ್ತದೆ. ಲಿಂಕ್ ಆಗಿರದಿದ್ದರೆ, ಫೇಸ್ ಅಥೆಂಟಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಮುಖದ ಸ್ಕ್ಯಾನಿಂಗ್ ಯಶಸ್ವಿಯಾದ ನಂತರ ಹೊಸ ಯುಎಎನ್ ರಚನೆಯಾಗಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ರವಾನೆಯಾಗುತ್ತದೆ.
ಈಗಾಗಲೇ UAN ಹೊಂದಿರುವವರು ಆಕ್ಟಿವೇಟ್ ಮತ್ತು ಫೇಸ್ ವೆರಿಫಿಕೇಶನ್ ಮಾಡುವುದು ಹೇಗೆ?
ಈಗಾಗಲೇ ಯುಎಎನ್ ಸಂಖ್ಯೆ ಇದ್ದು, ಅದು ಸಕ್ರಿಯವಾಗಿಲ್ಲದಿದ್ದರೆ, ಉಮಂಗ್ ಆ್ಯಪ್ನ ‘UAN Activation’ ಆಯ್ಕೆಗೆ ತೆರಳಿ ಯುಎಎನ್, ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಒಟಿಪಿ ಪರಿಶೀಲನೆಯ ನಂತರ ಯುಐಡಿಎಐ ಎಪಿಐ (UIDAI API) ಮೂಲಕ ಮುಖದ ದೃಢೀಕರಣ (Face Authentication) ಪೂರ್ಣಗೊಳ್ಳುತ್ತದೆ. ಈ ಪ್ರಕ್ರಿಯೆ ಯಶಸ್ವಿಯಾದ ತಕ್ಷಣ ಯುಎಎನ್ ಆಕ್ಟಿವೇಟ್ ಆಗಲಿದ್ದು, ತಾತ್ಕಾಲಿಕ ಪಾಸ್ವರ್ಡ್ ಮೊಬೈಲ್ಗೆ ತಲುಪಲಿದೆ.
ಅಷ್ಟೇ ಅಲ್ಲದೆ, ಈಗಾಗಲೇ ಆಕ್ಟಿವ್ ಆಗಿರುವ ಯುಎಎನ್ ಹೊಂದಿರುವ ಸದಸ್ಯರು ‘Face Authentication of already Activated UAN’ ಆಯ್ಕೆಯನ್ನು ಬಳಸಿಕೊಂಡು ತಮ್ಮ ಗುರುತನ್ನು ಮರುಪರಿಶೀಲಿಸಬಹುದು. ಇದರಿಂದ ಇಪಿಎಫ್ಒ ದಾಖಲೆಗಳು ಆಧಾರ್ ವಿವರಗಳೊಂದಿಗೆ ಸ್ವಯಂಚಾಲಿತವಾಗಿ ಅಪ್ಡೇಟ್ ಆಗಲಿವೆ.

UMANG ऐप के माध्यम से अब आप अपना UAN (यूनिवर्सल अकाउंट नंबर) अलॉट, एक्टिवेट और ऑथेंटिकेट कर सकते हैं। UAN प्राप्त होने के बाद EPFO की ऑनलाइन सेवाओं का लाभ उठाना और भी आसान हो जाता है। आप अपना EPF बैलेंस देख सकते हैं, पासबुक डाउनलोड कर सकते हैं, pic.twitter.com/1QMHJyufzD
— Ministry of Labour & Employment, GoI (@LabourMinistry) September 4, 2026












