ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 06 : ನೇಪಾಳದಲ್ಲಿ ನಡೆದ ಇತ್ತೀಚಿನ ಭೀಕರ ನೈಸರ್ಗಿಕ ದುರಂತವೆಂದರೆ ಆಗಸ್ಟ್ 26, 2026 ರಂದು ಸಂಭವಿಸಿದ ಭೀಕರ ಗ್ಲೇಷಿಯರ್ (ಹಿಮನದಿ) ಕುಸಿತ ಮತ್ತು ದಿಢೀರ್ ಮಹಾಪ್ರವಾಹ ಹಿಮಾಲಯದ ಲಂಗಲಾಂಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿದ ಈ ದುರಂತದಿಂದಾಗಿ ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದರ ಭೂಗೋಳಿಕ, ಭೂವಿಜ್ಞಾನ ಮತ್ತು ವೈಜ್ಞಾನಿಕ ಹಿನ್ನೆಲೆಯು, ಈ ದುರಂತವು ನೇಪಾಳ ಮತ್ತು ಟಿಬೆಟ್ ಗಡಿಗೆ ಹತ್ತಿರವಿರುವ ಲಂಗಟಾಂಗ್ ಲಿರುಂಗ್ ಪರ್ವತಗಳ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮ ನದಿ ಕುಸಿದ ಜಾಗವು ಸಮುದ್ರ ಮಟ್ಟದಿಂದ ಸುಮಾರು 5000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿದೆ. ಆದರೆ ತಳಭಾಗದಲ್ಲಿರುವ ಜನವಸತಿ ಪ್ರದೇಶಗಳು ಕೇವಲ 1,800 ಮೀಟರ್ ಎತ್ತರದಲ್ಲಿವೆ. ಈ 3,300 ಮೀಟರ್‌ಗಳ ಭಾರಿ ಕಡಿದಾದ ಇಳಿಜಾರಿನಿಂದಾಗಿ ಕಲ್ಲು ಮತ್ತು ಮಂಜುಗಡ್ಡೆಗಳು ಅತ್ಯಂತ ಭೀಕರ ವೇಗದಲ್ಲಿ ಕೆಳಕ್ಕೆ ನುಗ್ಗಿ ಬಂದವು, ನದಿಯ ಜಾಲದ ಅವಶೇಷಗಳು ನೇಪಾಳದ ಲೆಂಧೆ ಖೋರೂ ಮತ್ತು ತ್ರಿಶೂಲಿ ನದಿಗಳಿಗೆ ನುಗ್ಗಿದವು ಇದರಿಂದಾಗಿ ನದಿಗಳ ನೀರು ದೀಢೀರಣೆ 15 ರಿಂದ 20 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿದು, ಇಡೀ ಗ್ರಾಮಗಳನ್ನು ಮತ್ತು ಜಲವಿದ್ಯುತ್ ಯೋಜನೆಗಳನ್ನು ಮುಳುಗಿಸಿತು.
ವಿಜ್ಞಾನಿಗಳ ಪ್ರಕಾರ, ಇದು ಕೇವಲ ಹಿಮಪಾತವಲ್ಲ, ಪರ್ವತದ ಆಳದಲ್ಲಿರುವ ಭದ್ರವಾದ ಬಂಡೆಗಳ ಪದರದಲ್ಲಿ ಬಿರುಕು ಮೂಡಿ ಪರ್ವತದ ಒಂದು ಭಾಗವೇ ಕುಸಿದು ಬಿದ್ದಿದೆ. ಮೈನಸ್ ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ ಪರ್ವತದ ಬಂಡೆಗಳ ನಡುವೆ ಗಟ್ಟಿಯಾಗಿ ಹೆಪ್ಪುಗಟ್ಟಿರುವ ಮಂಜುಗಡ್ಡೆಯನ್ನು “ಪರ್ಮಾಫ್ರಾಸ್ಟ್” ಎನ್ನಲಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಅಂತರಿಕ ಮಂಜುಗಡ್ಡೆ ಕರಗಿ, ಬಂಡೆಗಳ ಹಿಡಿತ ಸಡಿಲಗೊಂಡು ಈ ಭಾರಿ ಭೂಕೂಸಿತ ಸಂಭವಿಸಿದೆ. ಈ ಕುಸಿತ ಎಷ್ಟು ದೊಡ್ಡದಾಗಿತ್ತೆಂದರೆ, ಸುಮಾರು 200 ಮಿಲಿಯನ್ ಕ್ಯೂಬಿಕ್ ಮೀಟರ್‌ಗಿಂತಲೂ ಅಧಿಕ ಕಲ್ಲು-ಮಣ್ಣುಗಳು ಕೆಳಗೆ ಬಿದ್ದಾಗ, ಜಾಗತಿಕ ಭೂಕಂಪನ ಮಾಪನಗಳಲ್ಲಿ 5.2 ತೀವ್ರತೆಯ ಭೂಕಂಪ ದಾಖಲಾಗಿದೆ. ಮೊದಲು ಇದನ್ನು ಸಾಮಾನ್ಯ ಭೂಕಂಪ ಎಂದು ಭಾವಿಸಲಾಗಿತ್ತು. ಆದರೆ ನಂತರ ಇದು ಹಿಮನದಿ ಕುಸಿತದ ಘರ್ಷಣೆಯಿಂದ ಉಂಟಾದ ಕಂಪನ ಎಂದು ಯು.ಎಸ್. ಜಿಯೋಲಾಜಿಕಲ್ ಸರ್ವೆ (USಉS) ಸ್ಪಷ್ಟಪಡಿಸಿದೆ.
ಈ ದುರಂತವು ಭವಿಷ್ಯದ ಸುರಕ್ಷತೆಗಾಗಿ ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ ಅತ್ಯಂತ ಪ್ರಮುಖ ಪಾಠಗಳನ್ನು ನೀಡಿದೆ. ವಿಜ್ಞಾನಿಗಳು ಮತ್ತು ಇತರ ಉಪಗ್ರಹಗಳ ಚಿತ್ರಗಳನ್ನು ಬಳಸಿ ಮರುತದ ಮಂಜಿನ ಮತ್ತು ನಂತರದ ಬದಲಾವಣೆಗಳನ್ನು ಉಂಟಾದ 0.9 ಮೈಲಿ ಅಗಲದ ಬಿರುಕನ್ನು ಇದರ ಮೂಲಕ ಪತ್ತೆಹಚ್ಚಾಲಾಗಿದೆ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯಲು ನೇಪಾಳ ಮತ್ತು ಚೀನಾ ದೇಶಗಳು ಜಂಟಿಯಾಗಿ ಗಡಿಯುದ್ಧಕ್ಕೂ ನದಿಗಳ ನೀರಿನ ಮಟ್ಟ ಮತ್ತು ಪರ್ವತಗಳ ಚಲನೆಯನ್ನು ಮೇಲ್ವಾಚಾರಣೆ ಮಾಡುವ ಹವಮಾನ ಮತ್ತು ಭೂವೈಜ್ಞಾನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿವೆ. ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲಿ ಜಾಗತಿಕ ತಾಪಮಾನ ಏರಿಕೆಯು ಎಂತಹ ಭೀಕರ ಪರಿಣಾಮ ಬೀರುತ್ತದೆ ಎಂಬುವನ್ನು ಜಗತ್ತಿಗೆ ತೋರಿಸಲು ಮತ್ತು ಜಾಗತಿಕ ಪರಿಸರ ನೀತಿಗಳನ್ನು ರೂಪಿಸಲು ಈ ಘಟನೆಯು ಮಾಹಿತಿಯನ್ನು ಬಳಸಲಾಗುತ್ತಿದೆ.












