ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್ . 04 : ನಗರದ ಪ್ರಸಿದ್ಧ ಚಂದ್ರವಳ್ಳಿಯಲ್ಲಿ ‘ಚಂದ್ರವಳ್ಳಿ ವಾಯುವಿಹಾರ ಬಳಗ’ದ ವತಿಯಿಂದ ಇದೇ ಬರುವ ಸೆಪ್ಟೆಂಬರ್ 6, 2026ರ ಭಾನುವಾರ ಬೆಳಿಗ್ಗೆ 8.00 ಗಂಟೆಗೆ ಶ್ರೀ ಹುಲೇಗೊಂಧಿ ಸಿದ್ದೇಶ್ವರಸ್ವಾಮಿಯ 25ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಚಂದ್ರವಳ್ಳಿ ವಾಯುವಿಹಾರಿಗಳ ಯೋಗ ಮತ್ತು ಧ್ಯಾನ ದಾಸೋಹ ಮಂದಿರದ ಉದ್ಘಾಟನಾ ಸಮಾರಂಭವು ಜರುಗಲಿದೆ.

ಈ ಸಂದರ್ಭದಲ್ಲಿ ಶ್ರೀ ಹುಲೇಗೊಂಡಿ ಸಿದ್ದೇಶ್ವರಸ್ವಾಮಿಗೆ ವಿಶೇಷ ಪುಷ್ಪಾಲಂಕಾರ ಹಾಗೂ ವಿಶೇಷ ಮಹಾಪೂಜೆ ನೆರವೇರಲಿದ್ದು, ಶ್ರಾವಣ ಮಾಸದ ಅಂಗವಾಗಿ ಭಕ್ತಾದಿಗಳಿಗೆ ‘ದಾಸೋಹ ಜಾತ್ರೆ’ಯನ್ನು ಏರ್ಪಡಿಸಲಾಗಿದೆ. ಈ ಧಾರ್ಮಿಕ ಸಮಾರಂಭದಲ್ಲಿ ಸಾರ್ವಜನಿಕರು ಹಾಗೂ ಭಕ್ತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಚಂದ್ರವಳ್ಳಿ ವಾಯುವಿಹಾರ ಬಳಗದ ವ್ಯವಸ್ಥಾಪಕರು ಕೋರಿದ್ದಾರೆ.











