ದೆಹಲಿ.ಸೆಪ್ಟೆಂಬರ್.01: ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ತಂಡದಲ್ಲಿ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ಸ್ಥಾನ ಪಡೆದಿದ್ದು, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಹಾಗೂ ಹರ್ಷಿತ್ ರಾಣಾ ಕೂಡ ತಂಡಕ್ಕೆ ಮರಳಿದ್ದಾರೆ. ಆದರೆ ಈ ಆಟಗಾರರ ಆಯ್ಕೆ ಫಿಟ್ನೆಸ್ ಕ್ಲಿಯರೆನ್ಸ್ಗೆ ಒಳಪಟ್ಟಿರುತ್ತದೆ.
ಈ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದ ನಾಯಕನಾಗಿ ನೇಮಕ ಮಾಡಲಾಗಿದ್ದು, ತಿಲಕ್ ವರ್ಮಾ ಉಪನಾಯಕನ ಜವಾಬ್ದಾರಿ ವಹಿಸಲಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ವಿಕೆಟ್ಕೀಪರ್ಗಳಾಗಿ ತಂಡದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಂಡದಲ್ಲಿದ್ದ ಸೂರ್ಯಾಂಶ್ ಶೆಡ್ಗೆ, ಪ್ರಸಿದ್ಧ್ ಕೃಷ್ಣ ಹಾಗೂ ಪ್ರಿನ್ಸ್ ಯಾದವ್ ಅವರಿಗೆ ಈ ಬಾರಿ ಸ್ಥಾನ ನೀಡಲಾಗಿಲ್ಲ.
ಭಾರತ ತಂಡ:
ಶ್ರೇಯಸ್ ಅಯ್ಯರ್ (ನಾಯಕ)
ಅಭಿಷೇಕ್ ಶರ್ಮಾ

ವೈಭವ್ ಸೂರ್ಯವಂಶಿ
ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್)
ಇಶಾನ್ ಕಿಶನ್ (ವಿಕೆಟ್ಕೀಪರ್)
ತಿಲಕ್ ವರ್ಮಾ (ಉಪನಾಯಕ)
ಶಿವಂ ದುಬೆ
ನಿತೀಶ್ ಕುಮಾರ್ ರೆಡ್ಡಿ*

ಅಕ್ಷರ್ ಪಟೇಲ್
ವಾಷಿಂಗ್ಟನ್ ಸುಂದರ್*
ವರುಣ್ ಚಕ್ರವರ್ತಿ
ರವಿ ಬಿಷ್ಣೋಯ್
ಜಸ್ಪ್ರೀತ್ ಬುಮ್ರಾ*
ಅರ್ಷದೀಪ್ ಸಿಂಗ್
ಹರ್ಷಿತ್ ರಾಣಾ*
India’s squad for Afghanistan T20I series announced. #TeamIndia will play three T20Is against Afghanistan at New Delhi, beginning September 13.#AFGvIND pic.twitter.com/UqTUeZyHz8
— BCCI (@BCCI) September 1, 2026














