Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ದಾವಣಗೆರೆ ಜಿಲ್ಲೆಯಲ್ಲಿ 12.97 ಲಕ್ಷಕ್ಕೂ ಹೆಚ್ಚು ನಮೂನೆಗಳ ಗಣಕೀಕರಣ ಪೂರ್ಣ

---Advertisement---

ದಾವಣಗೆರೆ, ಆಗಸ್ಟ್ 12 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್‌ 30 ರಿಂದ ಆರಂಭಗೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ರ ಮನೆ ಮನೆ ಭೇಟಿ ಪ್ರಗತಿಯಲ್ಲಿದ್ದು, ಜಿಲ್ಲೆಯಾದ್ಯಂತ ಬಿಎಲ್‌ಒ ರವರಿಂದ ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 12,97,800 ನಮೂನೆಗಳ ಗಣಕೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

 

ವಿಧಾನಸಭಾ ಕ್ಷೇತ್ರವಾರು ಪ್ರಗತಿ ಹಾಗೂ ಮಾಹಿತಿ ವಿವರ ಹೀಗಿದೆ:
103- ಜಗಳೂರು ಕ್ಷೇತ್ರ 2,00,836 ಹಂಚಿಕೆಯಾದ ನಮೂನೆಗಳಲ್ಲಿ 1,81,025 ಗಣಕೀಕರಣಗೊಂಡಿದ್ದು; 11,588 ಶಾಶ್ವತ ವಲಸೆ, 3,712 ಮರಣ, 3,389 ದ್ವಿಪ್ರತಿ, 55 ಇತರೆ ಹಾಗೂ 1,067 ಗುರುತಿಸಲಾಗದ ಸ್ಥಳಾಂತರ ಮತ್ತು 19,811 ಸಂಗ್ರಹವಾಗದ/ಗೈರು ನಮೂನೆಗಳನ್ನು ನಮೂದಿಸಲಾಗಿದೆ.

 

105-ಹರಿಹರ ಕ್ಷೇತ್ರ: 2,11,023 ನಮೂನೆಗಳಲ್ಲಿ 1,90,055 ಗಣಕೀಕರಣಗೊಂಡಿದ್ದು; 7,307 ಶಾಶ್ವತ ವಲಸೆ, 4,782 ಮರಣ, 5,302 ದ್ವಿಪ್ರತಿ, 77 ಇತರೆ ಹಾಗೂ 20,968 ಗುರುತಿಸಲಾಗದ ಸ್ಥಳಾಂತರ ಮತ್ತು 3,500 ಸಂಗ್ರಹವಾಗದ/ಗೈರು ಎಂದು ದಾಖಲಾಗಿದೆ.

106-ದಾವಣಗೆರೆ ಉತ್ತರ ಕ್ಷೇತ್ರ: 2,58,718 ನಮೂನೆಗಳಲ್ಲಿ 1,98,644 ಗಣಕೀಕರಣಗೊಂಡಿದ್ದು; 31,441 ಶಾಶ್ವತ ವಲಸೆ, 7,544 ಮರಣ, 4,822 ದ್ವಿಪ್ರತಿ, 653 ಇತರೆ ಹಾಗೂ 60,075 ಗುರುತಿಸಲಾಗದ ಸ್ಥಳಾಂತರ ಮತ್ತು 15,615 ಸಂಗ್ರಹವಾಗದ/ಗೈರು ಪ್ರಕರಣಗಳು ಕಂಡುಬಂದಿವೆ.

107-ದಾವಣಗೆರೆ ದಕ್ಷಿಣ ಕ್ಷೇತ್ರ: 2,27,996 ನಮೂನೆಗಳಲ್ಲಿ 1,74,347 ಗಣಕೀಕರಣಗೊಂಡಿದ್ದು; 29,229 ಶಾಶ್ವತ ವಲಸೆ, 6,626 ಮರಣ, 7,338 ದ್ವಿಪ್ರತಿ, 462 ಇತರೆ ಹಾಗೂ 9,994 ಗುರುತಿಸಲಾಗದ ಸ್ಥಳಾಂತರ ಮತ್ತು 53,649 ಸಂಗ್ರಹವಾಗದ/ಗೈರು ದಾಖಲಾಗಿವೆ.

108-ಮಾಯಕೊಂಡ ಕ್ಷೇತ್ರ : 1,97,048 ನಮೂನೆಗಳಲ್ಲಿ 1,84,534 ಗಣಕೀಕರಣಗೊಂಡಿದ್ದು; 6,023 ಶಾಶ್ವತ ವಲಸೆ, 4,180 ಮರಣ, 2,013 ದ್ವಿಪ್ರತಿ, 38 ಇತರೆ ಹಾಗೂ 12,514 ಗುರುತಿಸಲಾಗದ ಸ್ಥಳಾಂತರ ಮತ್ತು 260 ಸಂಗ್ರಹವಾಗದ/ಗೈರು ಕಂಡುಬಂದಿವೆ.

109-ಚನ್ನಗಿರಿ ಕ್ಷೇತ್ರ : 2,03,628 ನಮೂನೆಗಳಲ್ಲಿ 1,85,635 ಗಣಕೀಕರಣಗೊಂಡಿದ್ದು; 10,198 ಶಾಶ್ವತ ವಲಸೆ, 3,647 ಮರಣ, 3,485 ದ್ವಿಪ್ರತಿ, 40 ಇತರೆ ಹಾಗೂ 17,993 ಗುರುತಿಸಲಾಗದ ಸ್ಥಳಾಂತರ ಮತ್ತು 623 ಸಂಗ್ರಹವಾಗದ/ಗೈರು ನಮೂದಾಗಿವೆ.

110-ಹೊನ್ನಾಳಿ ಕ್ಷೇತ್ರ : 2,00,033 ನಮೂನೆಗಳಲ್ಲಿ 1,83,560 ಗಣಕೀಕರಣಗೊಂಡಿದ್ದು; 9,466 ಶಾಶ್ವತ ವಲಸೆ, 4,133 ಮರಣ, 1,867 ದ್ವಿಪ್ರತಿ, 59 ಇತರೆ ಹಾಗೂ 16,473 ಗುರುತಿಸಲಾಗದ ಸ್ಥಳಾಂತರ ಮತ್ತು 948 ಸಂಗ್ರಹವಾಗದ/ಗೈರು ದಾಖಲಾಗಿವೆ.

ಇಡೀ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,05,252 ಶಾಶ್ವತ ವಲಸೆ, 34,624 ಮರಣ ಪ್ರಕರಣಗಳು, 28,216 ದ್ವಿಪ್ರತಿ, 1,384 ಇತರೆ, ಹಾಗೂ 32,007 ಗುರುತಿಸಲಾಗದ ಸ್ಥಳಾಂತರ/ವಲಸೆ ಮತ್ತು 2,01,483 ಸಂಗ್ರಹವಾಗದ/ಗೈರು ಮತದಾರರ ಮಾಹಿತಿಯನ್ನು ಕ್ರೋಡೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now