ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 12 : ಯುವ ಪೀಳಿಗೆಯ ಉತ್ತಮ ಆಲೋಚನೆ, ಪ್ರಗತಿ, ಅಭಿವೃದ್ದಿಯೇ ದೇಶದ ನಿಜವಾದ ಆಸ್ತಿ. ಶಿಕ್ಷಣದ ಜೊತೆ ಸಂಸ್ಕøತಿ, ಸಂಸ್ಕಾರವಿಲ್ಲದಿದ್ದರೆ ತಂದೆ-ತಾಯಿ ಹಾಗೂ ನೀವುಗಳು ಓದಿದ ಶಿಕ್ಷಣ ಸಂಸ್ಥೆಯನ್ನು ದೂಷಿಸುತ್ತಾರೆಂದು ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಯೂತ್ ಕನ್‍ಕ್ಲೇವ್-2026 ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಮೊಬೈಲ್, ಇನ್‍ಸ್ಟಾಗ್ರಾಂ, ಸೋಶಿಯಲ್ ಮೀಡಿಯ, ರೀಲ್ ಲೈಕ್‍ನಲ್ಲಿ ಮುಳುಗಿರುವುದು ನೋವಿನ ಸಂಗತಿ, ದೇಶಭಕ್ತ ಭಗತ್‍ಸಿಂಗ್, ಅಬ್ದುಲ್ ಕಲಾಂ, ಶಿವಾಜಿ, ಮದಕರಿನಾಯಕ ಇವರುಗಳ ಆದರ್ಶಗಳನ್ನು ಯಾರು ಪಾಲಿಸುತ್ತಿಲ್ಲ. ದೆಹಲಿಯ ಜಂತರ್-ಮಂತರ್, ಜಾರ್ಖಂಡ್‍ನಲ್ಲಿ ವಿದ್ಯಾರ್ಥಿಗಳು
ಪ್ರತಿಭಟನೆ ನಡೆಸಿದ್ದನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಹದಿನೈದು ವರ್ಷದ ಬಾಲಕಿ ದೇಶದ ಪ್ರಧಾನಿಯನ್ನು ಬೈಯುತ್ತಾಳೆಂದರೆ ಎಂತಹ ಮನಸ್ಥಿತಿ ಇರಬಹುದೆಂದು ನೀವುಗಳೆ ಊಹಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಗೆ ದೊಡ್ಡ ಜವಾಬ್ದಾರಿಯಿದೆ. ಹಣ ಸಂಪಾದಿಸಲು ನಾವು ಸಂಸ್ಥೆಯನ್ನು ಕಟ್ಟಿಲ್ಲ. ಹಣ, ಸಮಯ, ಸಂಪನ್ಮೂಲ ನಮಗೆ ಜಾಸ್ತಿಯಾಗಿಲ್ಲ. ಸೇವಾ ಮನೋಭಾವ ನಮ್ಮ ಉದ್ದೇಶ. ತಂದೆ ಮೇಲೆ ಮಕ್ಕಳಿಗೆ ಗೌರವವಿಲ್ಲ. ತಾಯಿ ಮೇಲೆ ಪ್ರೀತಿಯಲ್ಲದಂತಾಗಿದೆ. ಗುರುಗಳನ್ನು ಕಂಡರೆ ಭಕ್ತಿಯಿಲ್ಲ. ಸಂವಿಧಾನವೆಂದರೆ ಏನು ಎನ್ನುವುದು ನೀವುಗಳು ತಿಳಿದುಕೊಳ್ಳಬೇಕು. ಅರ್ಧಂಬರ್ಧ ಜ್ಞಾನ ಅಪಾಯಕಾರಿ ಎಂದರು.
ಬೆಂಗಳೂರಿನ ಸೈಕಿಯಾಟ್ರಿಸ್ಟ್ ಡಾ.ಧನಂಜಯ ಮಾತನಾಡಿ ಪ್ರತಿಯೊಬ್ಬರು ಪ್ರಸ್ತುತ ಸಮಸ್ಯೆ, ಅನುಭವಿಸುತ್ತಿರುವ ತೊಂದರೆಯನ್ನು ಗಮನಿಸಿದರೆ ನಾಲ್ವರಲ್ಲಿ ಒಬ್ಬರು
ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆನ್ನುವುದು ಗೊತ್ತಾಗುತ್ತದೆ. ಎಂಟನೆ ತರಗತಿ ಮಕ್ಕಳಿಗೆ ಹೃದಯಾಘಾತವಾಗುತ್ತಿದೆ. ಮೈಂಡ್ ಕ್ಲಿಯರ್ ಆಗಿದ್ದಾರೆ. ದೇಹ ಸುಸ್ಥಿತಿಯಲ್ಲಿರುತ್ತದೆ. ಜೀವನದಲ್ಲಿ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಕೂಡ ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನುವುದನ್ನು ನೀವುಗಳು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಜೀವನದಲ್ಲಿ ನೀವುಗಳು ಯಶಸ್ಸು ಗಳಿಸಬೇಕಾದರೆ ಕಠಿಣ ಪರಿಶ್ರಮವಿರಬೇಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ. ಒತ್ತಡ ಎಲ್ಲದಕ್ಕೂ ಕಾರಣವಾಗಬಹುದು. ನಿಮ್ಮನ್ನು ನೀವು ಮೊದಲು ಅಂತರಾಳದಲ್ಲಿ ನೋಡಿಕೊಳ್ಳಿ. ಕಾನೂನು ಭಂಗಗೊಳಿಸುವುದು ಭಾರತೀಯ ಸಂಸ್ಕøತಿಯಲ್ಲ. ಜೀವನದಲ್ಲಿ ಅನವಶ್ಯಕ ವಿಚಾರಗಳಿಗೆ ತಲೆಕೆಡಿಸಿಕೊಂಡರೆ ದುಃಖ ಜಾಸ್ತಿಯಾಗುತ್ತದೆ. ಖುಷಿಯಾಗಿರಿ ಎಂದು ಹೇಳಿದರು.
ಐಟಿ ಮತ್ತು ತಾಂತ್ರಿಕ ಶಿಕ್ಷಣ ಸಲಹೆಗಾರ ಡಾ.ಶಶಿಧರರಾವ್, ಪತ್ರಕರ್ತ ಸುಭಾಷ್ ಜಿ. ಇವರುಗಳು ವೇದಿಕೆಯಲ್ಲಿದ್ದರು.
ಡೀನ್ ಅನಂತರಾಮು, ಮಾನವ ಸಂಪನ್ಮೂಲ ಅಧಿಕಾರಿ ಕೊಟ್ರೇಶ್, ವೆಂಕಟೇಶ್ವರ ಬಿಇಡಿ. ಕಾಲೇಜಿನ ಪ್ರಾಚಾರ್ಯರಾದ ನಾಗಭೂಷಣಶೆಟ್ಟಿ, ಪದವಿ ಕಾಲೇಜು ಪ್ರಾಂಶುಪಾಲರಾದ ಶಿವಕುಮಾರ್ ಎ.ಜೆ, ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಿ.ನವಾಜ್, ಆದ್ಯ ಫಾರ್ಮಸಿ ಕಾಲೇಜು ಪ್ರಾಚಾರ್ಯರಾದ ಡಾ.ಮುತ್ತಾರ್, ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಎಂ.ಎಂ.ಮಹಂತೇಶ್, ಪಿ.ಆರ್.ಓ.ರವಿಕುಮಾರ್ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












