Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ; ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ

---Advertisement---

 

ಬೆಂಗಳೂರು. ಆಗಸ್ಟ್.12 : ಕರ್ನಾಟಕ ಸರ್ಕಾರದಲ್ಲಿ ಸಚಿವರುಗಳ ಖಾತೆ ಹಂಚಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿಗಳ ಸಲಹೆಯಂತೆ ಭಾರತದ ಸಂವಿಧಾನದ ವಿಧಿ 166 (3) ಹಾಗೂ ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ನಿಯಮ 5ರ ಅಡಿಯಲ್ಲಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ 2026ರ ಆಗಸ್ಟ್ 12 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.

ಈ ಹೊಸ ಖಾತೆ ಹಂಚಿಕೆಯಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದು, ಉಳಿದ ಸಚಿವರಿಗೆ ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಚಿವರು ಮತ್ತು ಅವರಿಗೆ ಹಂಚಿಕೆಯಾದ ಖಾತೆಗಳ ವಿವರ:
ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ):
ಹಣಕಾಸು, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR), ಗುಪ್ತಚರ, ವಾರ್ತಾ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಕೃಷಿ ಮಾರುಕಟ್ಟೆ, ನಗರ ಮತ್ತು ಗ್ರಾಮಾಂತರ ಯೋಜನೆ ಆಯುಕ್ತಾಲಯ, ಬಿಡಿಎ (BDA) ಮತ್ತು ಬಿಎಂಆರ್ಡಿಎ (BMRDA) ವ್ಯಾಪ್ತಿಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರ ಯಾರಿಗೂ ಹಂಚಿಕೆಯಾಗದ ಎಲ್ಲಾ ಖಾತೆಗಳು.

ಬಿ.ಝೆಡ್. ಜಮೀರ್ ಅಹಮದ್ ಖಾನ್ (ಸಂಪುಟ ಸಚಿವರು): ವಸತಿ ಇಲಾಖೆ.

ರಾಮಲಿಂಗಾರೆಡ್ಡಿ (ಸಂಪುಟ ಸಚಿವರು): ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ.

ಲಕ್ಷ್ಮಣ ಸವದಿ (ಸಂಪುಟ ಸಚಿವರು): ಸಹಕಾರ ಇಲಾಖೆ (ಕೃಷಿ ಮಾರುಕಟ್ಟೆ ಹೊರತುಪಡಿಸಿ).
ರುದ್ರಪ್ಪ ಮಣಪ್ಪ ಲಮಾಣಿ (ಸಂಪುಟ ಸಚಿವರು): ಸಕ್ಕರೆ ಮತ್ತು ಜವಳಿ ಇಲಾಖೆ.
ಕೆ.ಹೆಚ್. ಮುನಿಯಪ್ಪ (ಸಂಪುಟ ಸಚಿವರು): ಸಮಾಜ ಕಲ್ಯಾಣ ಇಲಾಖೆ.

ಶಿವರಾಜ ತಂಗಡಗಿ (ಸಂಪುಟ ಸಚಿವರು): ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಯು.ಟಿ. ಖಾದರ್ (ಸಂಪುಟ ಸಚಿವರು): ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
ಟಿ. ರಘುಮೂರ್ತಿ (ಸಂಪುಟ ಸಚಿವರು): ಪರಿಶಿಷ್ಟ ಪಂಗಡಗಳ (ST) ಕಲ್ಯಾಣ.

ಡಾ. ಅಜಯ್ ಸಿಂಗ್ (ಸಂಪುಟ ಸಚಿವರು): ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ.

ಚಲುವರಾಯಸ್ವಾಮಿ (ಸಂಪುಟ ಸಚಿವರು): ಬೃಹತ್ ಮತ್ತು ಮಧ್ಯಮ ನೀರಾವರಿ.
ಮಧು ಬಂಗಾರಪ್ಪ (ಸಂಪುಟ ಸಚಿವರು): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ.
ಬಸವರಾಜ ರಾಯರೆಡ್ಡಿ (ಸಂಪುಟ ಸಚಿವರು): ಉನ್ನತ ಶಿಕ್ಷಣ.
ಶಿವಲಿಂಗೇಗೌಡ (ಸಂಪುಟ ಸಚಿವರು): ಅಬಕಾರಿ ಇಲಾಖೆ (ಹಣಕಾಸು ಇಲಾಖೆಯಿಂದ ಪ್ರತ್ಯೇಕಿಸಿ ಹಂಚಿಕೆ).
ಸಿ. ಪುಟ್ಟರಂಗಶೆಟ್ಟಿ (ಸಂಪುಟ ಸಚಿವರು): ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ.
ವಿಜಯಾನಂದ ಕಾಶಪ್ಪನವರ್ (ಸಂಪುಟ ಸಚಿವರು): ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳು.
ಸಂತೋಷ್ ಲಾಡ್ (ಸಂಪುಟ ಸಚಿವರು): ಕಾರ್ಮಿಕ ಮತ್ತು ಉದ್ಯೋಗ ಇಲಾಖೆ.
ಕೆ.ಎಸ್. ಬಸವಂತಪ್ಪ (ಸಂಪುಟ ಸಚಿವರು): ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ.
ಎಸ್.ಎಸ್. ಮಲ್ಲಿಕಾರ್ಜುನ್ (ಸಂಪುಟ ಸಚಿವರು): ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ.
ರಿಜ್ವಾನ್ ಅರ್ಷದ್ (ಸಂಪುಟ ಸಚಿವರು): ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು.
ಎನ್. ನರೇಂದ್ರಸ್ವಾಮಿ (ಸಂಪುಟ ಸಚಿವರು): ಕೃಷಿ ಇಲಾಖೆ.
ಹೆಚ್.ಸಿ. ಬಾಲಕೃಷ್ಣ (ಸಂಪುಟ ಸಚಿವರು): ಪೌರಾಡಳಿತ ಇಲಾಖೆ.
ಬಿ. ನಾಗೇಂದ್ರ (ಸಂಪುಟ ಸಚಿವರು): ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now