ದಾವಣಗೆರೆ , ಆಗಸ್ಟ್ 11: ಭಾರತ ಚುನಾವಣಾ ಆಯೋಗ, ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ಜೂನ್ 30 ರಿಂದ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಎನುಮೆರೇಷನ್ ನಮೂನೆಗಳೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿರುತ್ತಾರೆ.
ಜಿಲ್ಲೆಯಲ್ಲಿ ಜೂನ್ 16 ,2026 ರ ವರೆಗಿನ ವರದಿಯನ್ವಯ ಒಟ್ಟು 14,99,282 ಮತದಾರರಿದ್ದು, ಸಂಬಂಧಿಸಿದ ಬಿಎಲ್‌ಒ ಗಳಿಗೆ ಅನುಗುಣವಾಗಿ ಎನುಮೆರೇಷನ್ ನಮೂನೆಗಳನ್ನು ಮುದ್ರಿಸಿ ವಿತರಿಸಲಾಗಿದೆ. ಜೂನ್ 30 ರಿಂದ ಪ್ರಾರಂಭವಾಗಿರುವ ಈ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಆಗಸ್ಟ್ 17 ರವರೆಗೆ ನಡೆಯಲಿದೆ.
ವಿಧಾನಸಭಾ ಕ್ಷೇತ್ರವಾರು ಎನುಮೆರೇಷನ್ ಹಂಚಿಕೆ ಮತ್ತು ಗಣಕೀಕರಣ ಪ್ರಗತಿ:
ದಾವಣಗೆರೆ ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ ವಿತರಿಸಲಾದ 14,99,282 ಎನುಮೆರೇಷನ್ ನಮೂನೆಗಳಲ್ಲಿ, ಆಗಸ್ಟ್ 10 ರವರೆಗೆ ಒಟ್ಟು 12,97,702 ನಮೂನೆಗಳನ್ನು ಗಣಕೀಕರಿಸಲಾಗಿದೆ.
103-ಜಗಳೂರು: ವಿತರಿಸಲಾದ ಒಟ್ಟು 2,00,836 ನಮೂನೆಗಳಲ್ಲಿ, ಬಿಎಲ್‌ಒ ರವರು 1,81,057 ನಮೂನೆಗಳನ್ನು ಯಶಸ್ವಿಯಾಗಿ ಗಣಕೀಕರಿಸಿದ್ದಾರೆ.
105-ಹರಿಹರ: ವಿತರಿಸಲಾದ ಒಟ್ಟು 2,11,023 ನಮೂನೆಗಳಲ್ಲಿ, 1,90,129 ನಮೂನೆಗಳು ಗಣಕೀಕರಣಗೊಂಡಿವೆ.
106-ದಾವಣಗೆರೆ ಉತ್ತರ: ವಿತರಿಸಲಾದ ಒಟ್ಟು 2,58,718 ನಮೂನೆಗಳಲ್ಲಿ, ಬಿಎಲ್‌ಒ ರವರು 1,98,413 ನಮೂನೆಗಳನ್ನು ಗಣಕೀಕರಿಸಿದ್ದಾರೆ.
107-ದಾವಣಗೆರೆ ದಕ್ಷಿಣ: ವಿತರಿಸಲಾದ ಒಟ್ಟು 2,27,996 ನಮೂನೆಗಳಲ್ಲಿ, 1,74,329 ನಮೂನೆಗಳು ಗಣಕೀಕರಣಗೊಂಡಿವೆ.
108-ಮಾಯಕೊಂಡ: ವಿತರಿಸಲಾದ ಒಟ್ಟು 1,97,048 ನಮೂನೆಗಳಲ್ಲಿ, 1,84,546 ನಮೂನೆಗಳ ಗಣಕೀಕರಣ ಪೂರ್ಣಗೊಂಡಿದೆ.
109-ಚನ್ನಗಿರಿ: ವಿತರಿಸಲಾದ ಒಟ್ಟು 2,03,628 ನಮೂನೆಗಳಲ್ಲಿ, 1,85,687 ನಮೂನೆಗಳು ಗಣಕೀಕರಣಗೊಂಡಿವೆ.
110-ಹೊನ್ನಾಳಿ: ವಿತರಿಸಲಾದ ಒಟ್ಟು 2,00,033 ನಮೂನೆಗಳಲ್ಲಿ, 1,83,541 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಮನೆ ಮನೆ ಪರಿಶೀಲನೆ ಹಾಗೂ ವರ್ಗೀಕರಣ ವಿವರಗಳು:

ಆಗಸ್ಟ್ 10 ರವರೆಗೆ ಜಿಲ್ಲೆಯಲ್ಲಿ ಮತದಾರರ ಎನುಮೆರೇಷನ್ ನಮೂನೆಗಳ ಹಂಚಿಕೆ ಹಾಗೂ ಸಂಗ್ರಹಣೆಯ ವೇಳೆ ಜಿಲ್ಲೆಯಾದ್ಯಂತ ಒಟ್ಟು 2,01,580 ಮತದಾರರು ಗುರುತಿಸಲಾಗದ ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಅಥವಾ ಇತರ ಕಾರಣಗಳಿಂದ ವರ್ಗೀಕೃತರಾಗಿದ್ದಾರೆ. ಇದರಲ್ಲಿ 32,086 ಮತದಾರರ ಮಾಹಿತಿ ಸಂಗ್ರಹವಾಗದಿರುವುದು ಅಥವಾ ಗೈರುಹಾಜರಿ ಕಂಡುಬಂದಿದೆ.
ಜಿಲ್ಲಾಮಟ್ಟದ ಪ್ರಮುಖ ವರ್ಗೀಕರಣದಲ್ಲಿ ಒಟ್ಟು 1,05,359 ಶಾಶ್ವತ ವಲಸೆ ಪ್ರಕರಣಗಳು, 34,615 ಮರಣ ಪ್ರಕರಣಗಳು, 28,130 ದ್ವಿಪ್ರತಿ (Duplicate) ಮತದಾರರ ಪ್ರಕರಣಗಳು ಹಾಗೂ 1,390 ಇತರೆ ಪ್ರಕರಣಗಳು ದಾಖಲಾಗಿವೆ.
ಕ್ಷೇತ್ರವಾರು ವರ್ಗೀಕರಣದ ವಿವರ:
103-ಜಗಳೂರು: ಒಟ್ಟು 19,779 ಪ್ರಕರಣಗಳಲ್ಲಿ, 1,067 ಸಂಗ್ರಹವಾಗದ/ಗೈರು, 11,565 ಶಾಶ್ವತ ವಲಸೆ, 3,707 ಮರಣ, 3,385 ದ್ವಿಪ್ರತಿ ಹಾಗೂ 55 ಇತರೆ ಪ್ರಕರಣಗಳು ಸೇರಿವೆ.
105-ಹರಿಹರ: ಒಟ್ಟು 20,894 ಪ್ರಕರಣಗಳಲ್ಲಿ, 3,482 ಸಂಗ್ರಹವಾಗದ/ಗೈರು, 7,290 ಶಾಶ್ವತ ವಲಸೆ, 4,779 ಮರಣ, 5,266 ದ್ವಿಪ್ರತಿ ಹಾಗೂ 77 ಇತರೆ ಪ್ರಕರಣಗಳಿವೆ.
106-ದಾವಣಗೆರೆ ಉತ್ತರ: ಒಟ್ಟು 60,305 ಪ್ರಕರಣಗಳಲ್ಲಿ, 15,700 ಸಂಗ್ರಹವಾಗದ/ಗೈರು, 31,589 ಶಾಶ್ವತ ವಲಸೆ, 7,545 ಮರಣ, 4,814 ದ್ವಿಪ್ರತಿ ಹಾಗೂ 657 ಇತರೆ ಪ್ರಕರಣಗಳು ವರದಿಯಾಗಿವೆ.
107-ದಾವಣಗೆರೆ ದಕ್ಷಿಣ: ಒಟ್ಟು 53,667 ಪ್ರಕರಣಗಳಲ್ಲಿ, 10,009 ಸಂಗ್ರಹವಾಗದ/ಗೈರು, 29,240 ಶಾಶ್ವತ ವಲಸೆ, 6,630 ಮರಣ, 7,327 ದ್ವಿಪ್ರತಿ ಹಾಗೂ 461 ಇತರೆ ಪ್ರಕರಣಗಳಿವೆ.
108-ಮಾಯಕೊಂಡ: ಒಟ್ಟು 12,502 ಪ್ರಕರಣಗಳಲ್ಲಿ, 261 ಸಂಗ್ರಹವಾಗದ/ಗೈರು, 6,012 ಶಾಶ್ವತ ವಲಸೆ, 4,178 ಮರಣ, 2,010 ದ್ವಿಪ್ರತಿ ಹಾಗೂ 41 ಇತರೆ ಪ್ರಕರಣಗಳಿವೆ.
109-ಚನ್ನಗಿರಿ: ಒಟ್ಟು 17,941 ಪ್ರಕರಣಗಳಲ್ಲಿ, 617 ಸಂಗ್ರಹವಾಗದ/ಗೈರು, 10,175 ಶಾಶ್ವತ ವಲಸೆ, 3,646 ಮರಣ, 3,463 ದ್ವಿಪ್ರತಿ ಹಾಗೂ 40 ಇತರೆ ಪ್ರಕರಣಗಳು ಕಂಡುಬಂದಿವೆ.

110-ಹೊನ್ನಾಳಿ: ಒಟ್ಟು 16,492 ಪ್ರಕರಣಗಳಲ್ಲಿ, 950 ಸಂಗ್ರಹವಾಗದ/ಗೈರು, 9,488 ಶಾಶ್ವತ ವಲಸೆ, 4,130 ಮರಣ, 1,865 ದ್ವಿಪ್ರತಿ ಹಾಗೂ 59 ಇತರೆ ಪ್ರಕರಣಗಳು ಸೇರಿವೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.













