ಸದ್ಯ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಉಕ್ರೇನ್ ನಲ್ಲಿ ಜನ ಭಯಭೀತರಾಗಿದ್ದಾರೆ. ಈ ಮಧ್ಯೆ ಉಕ್ರೇನ್ ಕೂಡ ಭಾರತದ ಪ್ರಧಾನಿಯನ್ನ ಸಹಾಯ ಕೇಳಿತ್ತು ಎನ್ನಲಾಗಿದೆ. ಈಗ ಪ್ರಧಾನಿ ಮೋದಿಗೆ ಉಕ್ರೇನ್ ಮತ್ತು ರಷ್ಯಾದಲ್ಲಿರುವ ಭಾರತೀಯರನ್ನ ರಕ್ಷಿಸುವುದು ದೊಡ್ಡ ಸವಾಲಾಗಿದೆ.
ಯಾಕಂದ್ರೆ ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿರುವ ಕಾರಣ ವಾಯುನೆಲೆಯನ್ನ ಬಂದ್ ಮಾಡಲಾಗಿದೆ. ಹೀಗಾಗಿ ಅಲ್ಲಿನ ಭಾರತೀಯರನ್ನ ವಾಪಾಸ್ ಕರೆತರಲು ಸಾಧ್ಯವಾಗುತ್ತಿಲ್ಲ. ಭಾರತ ಸರ್ಕಾರ ಕೂಡ ರಕ್ಷಣಾ ಕಾರ್ಯಾಚರಣೆಯನ್ನ ಸ್ಥಗಿತಗೊಂಡಿದೆ. ಈ ಬೆನ್ನಲ್ಲೇ ಪುಟೀನ್ ಗೆ ಪ್ರಧಾನಿ ಮೋದಿ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಉಕ್ರೇನ್ ನಲ್ಲಿ ಆರಂಭಗೊಂಡ ಯುದ್ಧ ಮತ್ತು ಹಿಂಸಾಚಾರವನ್ನ ನಿಲ್ಲಿಸಿ, ಎಲ್ಲರೂ ರಾಜತಾಂತ್ರಿಕ ಚರ್ಚೆ ಮತ್ತು ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ. ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರ ಬಗ್ಗೆ ನಮಗೆ ಕಾಳಜಿ ಇದೆ. ಅವರನ್ನ ಸುರಕ್ಷಿತವಾಗಿ ಕರೆತರುವುದೇ ನಮ್ಮ ಅಗತ್ಯತೆ ಎಂದಿದ್ದಾರೆ ಎನ್ನಲಾಗಿದೆ.