Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ 84ನೇ ವರ್ಷಾಚರಣೆ

---Advertisement---

ಸುದ್ದಿಒನ್, ದಾವಣಗೆರೆ, ಆಗಸ್ಟ್. 09 : ಕ್ವಿಟ್ ಇಂಡಿಯಾ ಚಳುವಳಿಯ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) 84ನೇ ವರ್ಷಾಚರಣೆಯನ್ನು ದಾವಣಗೆರೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಹುತಾತ್ಮರಾದ ದಾವಣಗೆರೆಯ ಮಾಗನಹಳ್ಳಿ ಹನುಮಂತಪ್ಪ, ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಹದಡಿ ನಿಂಗಪ್ಪ, ಬಿದರಕುಂದಿ ನಿಂಗಪ್ಪ ಹಾಗೂ ಹಮಾಲಿ ತಿಮ್ಮಣ್ಣ ಅವರ ಸ್ಮರಣಾರ್ಥ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.

ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಾದ ಕುಮಾರಸ್ವಾಮಿ ಆರ್., ರುದ್ರೇಗೌಡ ಎರೆಹಳ್ಳಿ ಹಾಗೂ ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅದೇ ರೀತಿ, 2026–27ನೇ ಸಾಲಿನ ಮಾಧ್ಯಮ ಪ್ರಶಸ್ತಿಗೆ ಭಾಜನರಾದ ನ್ಯೂಸ್ ಫಸ್ಟ್‌ನ ಮಹಾದೇವ, TV5ನ ಅಣ್ಣಪ್ಪ ಹಾಗೂ ರಿಪಬ್ಲಿಕ್ ಕನ್ನಡದ ಕ್ಯಾಮೆರಾಮ್ಯಾನ್ ಶಿವರಾಜ್ ಇಳಿಗೆರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಬಯಲು ಸೇನೆ ಮಾಜಿ ಅಧ್ಯಕ್ಷರಾದ ಅಣಬೇರು ಜೀವನಮೂರ್ತಿ, ಮಾಜಿ ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ. ರಮೇಶ್ ನಾಯಕ್, ದೋಗ್ಗಳ್ಳಿ ವೀರೇಶ್, ಗೋಪಾಲ್ ರಾವ್ ಮಾನೆ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ. ಪಾಟೀಲ್, ಶಂಕರಗೌಡ ಬೀರಾದರ್, ನವೀನಕುಮಾರ್ ಎಚ್.ಬಿ., ಬಾಲರಾಜ್ ಶ್ರೇಷ್ಠಿ, ಜಗದೀಶ್ ಎಚ್.ಎನ್., ಕುಮಾರ್ ಘಾಟ್ಗೆ, ಟಿಂಕರ್ ಮಂಜಣ್ಣ, ನರಸಿಂಹ, ಮಹೇಂದ್ರ ಹೆಬ್ಬಾಳ, ಶಿವಕುಮಾರ್ ದೇವರಡ್ಡಿ, ಗಾಂಧಿನಗರದ ಹನುಮಂತಪ್ಪ, ಪೈಲ್ವಾನ್ ಹನುಮಂತಪ್ಪ, ಗಣೇಶ್, ಗುಡ್ಡಪ್ಪ, ನನ್ನಯ್, 6ನೇ ಕಲ್ಲು ವಿಜಯ್ ಕಿಶೋರ್ ಕುಮಾರ್ ,ಪುಲೈ,ರಾಹುಲ್,ನಾಗರಾಜ್ ,ಪಿಗ್ನಿ ಹನುಮಂತ,ವಿನಾಯಕ್,ಕುಮಾರ್ ಯೋಗೇಶ್,ಯರಗುಂಟೆ ಮಂಜುನಾಥ್, ಮಲ್ಲಿಕಾರ್ಜುನ, ನಿಂಗರಾಜ,ಮಂಜಾನಾಯ್ಕ, ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಚೇತನಾ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಭಾಗ್ಯ ಪಿಸಾಳೆ, ಮಮತಾ, ದಾಕ್ಷಾಯಿಣಮ್ಮ, ಮಂಜುಳಾ ಇಟಗಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now