ಬೆಂಗಳೂರು.ಆಗಸ್ಟ್.7: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಪ್ಯಾರಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿ ದೇಶ ಹಾಗೂ ರಾಜ್ಯದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಹೆಮ್ಮೆಯ ಕನ್ನಡಿಗಿ ಕೆ.ಎಸ್. ಶಿಲ್ಪಾ ಅವರಿಗೆ ರಾಜ್ಯ ಸರ್ಕಾರ ಬಹುಮಾನ ಹಾಗೂ ಗೌರವವನ್ನು ಘೋಷಿಸಿದೆ.
ಶಿಲ್ಪಾ ಅವರ ಈ ಐತಿಹಾಸಿಕ ಸಾಧನೆಯನ್ನು ಗುರುತಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ₹15 ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರದ ಗ್ರೂಪ್-ಬಿ ಹುದ್ದೆಯನ್ನು ನೀಡಲು ತೀರ್ಮಾನಿಸಿದೆ.

ಕನ್ನಡತಿ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾಗೆ ಸರ್ಕಾರದ ಗೌರವ
ಇದನ್ನು ಓದಿಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಶಕ್ತಿಮೀರಿ ಶ್ರಮಿಸುವೆ: ಸಚಿವ ಟಿ.ರಘುಮೂರ್ತಿಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದ ಪ್ಯಾರಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದೇಶ ಹಾಗೂ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಕೆ.ಎಸ್ ಶಿಲ್ಪಾ ಅವರಿಗೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ₹15 ಲಕ್ಷ ನಗದು ಬಹುಮಾನ… pic.twitter.com/qN7VhrVc4t
— DIPR Karnataka (@KarnatakaVarthe) August 7, 2026
ಸವಾಲುಗಳ ನಡುವೆಯೂ ಕ್ರೀಡಾರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಶಿಲ್ಪಾ ಅವರ ಶ್ರಮವು, ಗ್ರಾಮೀಣ ಭಾಗದ ಸಾವಿರಾರು ಯುವ ಕ್ರೀಡಾಪಟುಗಳಿಗೆ ದೊಡ್ಡ ಸ್ಪೂರ್ತಿಯಾಗಿದೆ ಎಂದು ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.












