ಬಳ್ಳಾರಿ.ಆಗಸ್ಟ್.7: ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಆಹಾರ ಆಗಸ್ಟ್ ಮಾಹೆಯಲ್ಲಿ ಧಾನ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಗಸ್ಟ್ ಹಾಗೂ ಸೆಪ್ಟೆಂಬರ್ ರ ಎರಡು ತಿಂಗಳ ಹಂಚಿಕೆಯನ್ನು ಆಗಸ್ಟ್ ತಿಂಗಳಿನಲ್ಲೇ ಒಟ್ಟಿಗೆ ವಿತರಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆಹಾರ ಧಾನ್ಯ ವಿತರಣೆಯ ಪ್ರಮಾಣ

ಅಂತ್ಯೋದಯ ಕಾರ್ಡುದಾರರಿಗೆ: ಪ್ರತಿ ಕಾರ್ಡಿಗೆ 21 ಕೆ.ಜಿ ಜೋಳ ಹಾಗೂ 14 ಕೆ.ಜಿ ಅಕ್ಕಿ.


ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ: ಪ್ರತಿ ಸದಸ್ಯರಿಗೆ 6 ಕೆ.ಜಿ ಜೋಳ ಹಾಗೂ 4 ಕೆ.ಜಿ ಅಕ್ಕಿ.
ಪಡಿತರ ಚೀಟಿದಾರರು 2 ತಿಂಗಳ ಆಹಾರ ಧಾನ್ಯವನ್ನು ಒಟ್ಟಿಗೆ ಪಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ 2 ಬಾರಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ. ಸಾರ್ವಜನಿಕರು ತಮಗೆ ನಿಗದಿತ ಪ್ರಮಾಣದಂತೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಬಹುದು. ಪಡಿತರ ಹಂಚಿಕೆಯಲ್ಲಿ ಯಾವುದೇ ರೀತಿಯ ದೂರುಗಳಿದ್ದಲ್ಲಿ 1967 ಉಚಿತ ಸಹಾಯವಾಣಿ (ಟೋಲ್ ಫ್ರೀ) ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.









