Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

---Advertisement---

ಬೆಂಗಳೂರು.ಆಗಸ್ಟ್.6: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ಮುಂದೆ ತಮ್ಮ ಹಾಗೂ ತಮ್ಮ ಕುಟುಂಬದ ಚರ ಮತ್ತು ಸ್ಥಿರಾಸ್ತಿ ಹಾಗೂ ಹೊಣೆಗಾರಿಕೆಗಳ (Immovable Property Returns – IPR) ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲೇ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ‘ಕರ್ನಾಟಕ e-PAR Window’ ಆಪ್ಲಿಕೇಶನ್‌ನಲ್ಲಿ ವಿಶೇಷ ಮಾಡ್ಯೂಲ್ ಒಂದನ್ನು ಜಾರಿಗೆ ತರಲಾಗಿದ್ದು, ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR – ತಪಾಸಣೆ ಮತ್ತು ಸ್ಕೀಮರ್) ದಿನಾಂಕ 05 ಆಗಸ್ಟ್ 2026 ರಂದು ಈ ಕುರಿತು ಆದೇಶ ನೀಡಿದ್ದು, ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ನೌಕರರಿಗೂ ಇದು ಅನ್ವಯಿಸಲಿದೆ.

ಆಗಸ್ಟ್ 20 ರಿಂದ ಚಾಲನೆ

2025-26ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ನಮೂದಿಸಲು ದಿನಾಂಕ 20.08.2026 ರಿಂದ ನೂತನ ಆನ್‌ಲೈನ್ ‘e-PAR Platform’ (IPR Module) ಲಭ್ಯವಾಗಲಿದೆ.ಅಖಿಲ ಭಾರತ ಸೇವಾ (AIS) ಅಧಿಕಾರಿಗಳಿಗೆ (IAS/IPS ಇತ್ಯಾದಿ) e-PAR ನಲ್ಲಿ ಆಸ್ತಿ ವಿವರ ಸಲ್ಲಿಸಲು ಇರುವ ಮಾದರಿಯಲ್ಲೇ, ಕರ್ನಾಟಕ ಸರ್ಕಾರದ ನೌಕರರು/ಅಧಿಕಾರಿಗಳಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ.

ಪ್ರತಿ ವರ್ಷ ಮಾರ್ಚ್ ಅಂತ್ಯದ ವೇಳೆಗೆ ನಿಗದಿತ ನಮೂನೆಯಲ್ಲಿ ನೌಕರರು ತಮ್ಮ ಹಾಗೂ ಕುಟುಂಬದ ಆಸ್ತಿ ವಿವರವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಅಪ್‌ಲೋಡ್/ದಾಖಲಿಸಬೇಕು.

ಕಂದಾಯ ಇಲಾಖೆಯ ಗ್ರೇಡ್-1 ಮತ್ತು ಗ್ರೇಡ್-2 ತಹಶೀಲ್ದಾರರ ಆಸ್ತಿ ವಿವರಗಳನ್ನು ಆನ್‌ಲೈನ್‌ನಲ್ಲೇ ದಾಖಲಿಸಲು ಮತ್ತು ಅಪ್‌ಲೋಡ್ ಮಾಡಲು ಅಧಿಕಾರಿಗಳ ‘ಮ್ಯಾಪಿಂಗ್’ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ.

ಈ ಹಿಂದೆ ಭೌತಿಕವಾಗಿ ಅಥವಾ ವಿಭಿನ್ನ ರೀತಿಯಲ್ಲಿ ಸಲ್ಲಿಸಲಾಗುತ್ತಿದ್ದ ಆಸ್ತಿ ವಿವರಗಳನ್ನು ಈಗ ಒಂದೇ ಡಿಜಿಟಲ್ ವೇದಿಕೆಗೆ (e-PAR Platform) ತರಲಾಗುತ್ತಿದ್ದು, ಇದರಿಂದ ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಹಾಗೂ ಪ್ರಕ್ರಿಯೆ ಸರಳವಾಗಲಿದೆ.

ರಾಜ್ಯದ ಎಲ್ಲಾ ಇಲಾಖಾ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲು ಸೂಚನೆ ನೀಡಲಾಗಿದೆ.

 

Join WhatsApp

Join Now

Join Telegram

Join Now