ದಾವಣಗೆರೆ ಆಗಸ್ಟ್ 06: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನುಮೆರೇಷನ್ ನಮೂನೆಗಳ ಸಂಗ್ರಹ ಮತ್ತು ಗಣಕೀಕರಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಜೂನ್ 30 ರಿಂದ ಆಗಸ್ಟ್ 08 ರವರೆಗಿನ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಆಗಸ್ಟ್ 05 ರವರೆಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಎನುಮೆರೇಷನ್

ನಮೂನೆಗಳ ಹಂಚಿಕೆ ಮತ್ತು ಗಣಕೀಕರಣದ ಪ್ರಗತಿ ವಿವರಗಳು.
103-ಜಗಳೂರು ಕ್ಷೇತ್ರದಲ್ಲಿ ಒಟ್ಟು 2,00,836 ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 1,81,182 ನಮೂನೆಗಳನ್ನು ಗಣಕೀಕರಿಸಲಾಗಿದೆ. ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಸೇರಿದಂತೆ ಒಟ್ಟು 19,654 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 1069 ಸಂಗ್ರಹವಾಗದ/ಗೈರು, 11,518 ಶಾಶ್ವತ ವಲಸೆ, 3698 ಮರಣ, 3309 ದ್ವಿಪ್ರತಿ ಹಾಗೂ 60 ಇತರೆ ಪ್ರಕರಣಗಳು ಸೇರಿವೆ.
105-ಹರಿಹರ ಒಟ್ಟು 2,11,023 ನಮೂನೆಗಳ ಪೈಕಿ 1,90,223 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 20, 800 ಒಟ್ಟು ಪ್ರಕರಣಗಳಲ್ಲಿ 3476 ಗೈರು/ಸಂಗ್ರಹವಾಗದ, 7286 ಶಾಶ್ವತ ವಲಸೆ, 4,754 ಮರಣ, 5,207 ದ್ವಿಪ್ರತಿ ಮತ್ತು 77 ಇತರೆ ಪ್ರಕರಣಗಳಿವೆ.
106-ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ವಿತರಿಸಲಾದ 2,58,718 ನಮೂನೆಗಳಲ್ಲಿ 1,97,775 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 60,167 ಪ್ರಕರಣಗಳಲ್ಲಿ 15,703 ಗೈರು, 31,476 ಶಾಶ್ವತ ವಲಸೆ, 7,516 ಮರಣ, 4,790 ದ್ವಿಪ್ರತಿ ಹಾಗೂ 682 ಇತರೆ ಪ್ರಕರಣಗಳು ನಮೂದಾಗಿವೆ.
107-ದಾವಣಗೆರೆ ದಕ್ಷಿಣ ಒಟ್ಟು 2,27,996 ನಮೂನೆಗಳಲ್ಲಿ 1,74,145 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 53,851 ಪ್ರಕರಣಗಳ ಪೈಕಿ 10,074 ಗೈರು, 29,415 ಶಾಶ್ವತ ವಲಸೆ, 6,626 ಮರಣ, 7,267 ದ್ವಿಪ್ರತಿ ಹಾಗೂ 469 ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ.
108-ಮಾಯಕೊಂಡ: ಹಂಚಿಕೆಯಾದ 1,97,048 ನಮೂನೆಗಳ ಪೈಕಿ 1,84,600 ನಮೂನೆಗಳು ಗಣಕೀಕರಿಸಲಾಗಿದೆ. ಒಟ್ಟು 12,448 ಪ್ರಕರಣಗಳಲ್ಲಿ 263 ಗೈರು, 5,996 ಶಾಶ್ವತ ವಲಸೆ, 4,170 ಮರಣ, 1,978 ದ್ವಿಪ್ರತಿ ಮತ್ತು 41 ಇತರೆ ಪ್ರಕರಣಗಳು ಒಳಗೊಂಡಿವೆ.
109-ಚನ್ನಗಿರಿ: ವಿತರಿಸಿದ 2,03,628 ನಮೂನೆಗಳಲ್ಲಿ 1,85,779 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 17,816 ಪ್ರಕರಣಗಳಲ್ಲಿ 617 ಗೈರು, 10,111 ಶಾಶ್ವತ ವಲಸೆ, 3,645 ಮರಣ, 3,403 ದ್ವಿಪ್ರತಿ ಹಾಗೂ 40 ಇತರೆ ಪ್ರಕರಣಗಳು ಸೇರಿವೆ.
110-ಹೊನ್ನಾಳಿ: ಕ್ಷೇತ್ರದಲ್ಲಿ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,83,455 ನಮೂನೆಗಳನ್ನು ಗಣಕೀಕರಿಸಲಾಗಿದೆ. ಒಟ್ಟು 16,578 ಪ್ರಕರಣಗಳ ಪೈಕಿ 1,017 ಗೈರು, 9,513 ಶಾಶ್ವತ ವಲಸೆ, 4,129 ಮರಣ, 1,858 ದ್ವಿಪ್ರತಿ ಹಾಗೂ 61 ಇತರೆ ಪ್ರಕರಣಗಳು ಪತ್ತೆಯಾಗಿವೆ.
ಸಮಗ್ರವಾಗಿ ಜಿಲ್ಲೆಯಾದ್ಯಂತ ವಿತರಿಸಲಾದ ಒಟ್ಟು 14,99,282 ಎನುಮೆರೇಷನ್ ನಮೂನೆಗಳ ಪೈಕಿ ಈವರೆಗೆ 12,97,159 ನಮೂನೆಗಳನ್ನು ಗಣಕೀಕರಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 2,01,314 ಸ್ಥಳಾಂತರ/ಮರಣ/ದ್ವಿಪತಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 32219 ಗೈರು/ಸಂಗ್ರಹವಾಗದ, 1,05,315 ಶಾಶ್ವತ ವಲಸೆ, 34,538 ಮರಣ, 27,812 ದ್ವಿಪ್ರತಿ ಹಾಗೂ 1,430 ಇತರೆ ಪ್ರಕರಣಗಳು ಸೇರಿವೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.













