ಬೆಂಗಳೂರು. ಜುಲೈ 29: ಆಗಸ್ಟ್-2026 ರ ಸ್ವಾತಂತ್ರೋತ್ಸವದ ಅಂಗವಾಗಿ ಪ್ರಸಿದ್ದ ಲಾಲ್ಬಾಗ್ ಸಸ್ಯಶಾಸ್ತ್ರೀಯ ತೋಟದಲ್ಲಿ “ಶ್ರೀ ಗಂಗ ಸಾಮ್ರಾಜ್ಯ ವೈಭವ -ಕರ್ನಾಟಕದ ಮೊಟ್ಟ ಮೊದಲ ರಾಜವಂಶ” ಎಂಬ ವಿಷಯಾಧಾರಿತ 220ನೇ ಫಲಪುಷ್ಪ ಪ್ರದರ್ಶನವನ್ನು 2026 ನೇ ಆಗಸ್ಟ್ 06 ರಿಂದ 17 ರವರೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ತೋಟಗಾರಿಕೆ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಅಲಂಕಾರಿಕ ತೋಟಗಾರಿಕಾ ಸಾರ್ವಜನಿಕರು ಹಾಗೂ ಆಸಕ್ತರು, ಸಂಸ್ಥೆಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಾಗೂ ಇಲಾಖಾ ಮಳಿಗೆಗಳ ಹಂಚಿಕೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮನೆ, ಕಛೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯ ಉದ್ಯಾನವನಗಳು, ತೋಟಗಳು, ತಾರಸಿ ಅಥವಾ ಕೈ ತೋಟಗಳು, ತರಕಾರಿ ಮತ್ತು ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ಗಿಡಗಳು ಹಾಗೂ ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಆಸಕ್ತರು ಹಾಗೂ ಪ್ರದರ್ಶಕರು ಕಛೇರಿ ವೇಳೆಯಲ್ಲಿ, ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ನಿಗದಿತ ಕಛೇರಿಗಳಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳ ಸ್ಪರ್ಧೆಗೆ 2026 ನೇ ಜುಲೈ 27 ರಿಂದ ಆಗಸ್ಟ್ 04 ರ ವರೆಗೆ ಅರ್ಜಿಗಳನ್ನು ವಿತರಿಸಲಾಗುವುದು ಹಾಗೂ 2026 ಆಗಸ್ಟ್ 04 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಅರ್ಜಿಗಳನ್ನು ತೋಟಗಾರಿಕೆ ಅಪರ ನಿರ್ದೇಶಕರು (ಯೋಜನೆ), ಲಾಲ್ಬಾಗ್, ಬೆಂಗಳೂರು ಇಲ್ಲಿ ತಾರಕೇಶ್ವರಿ ಕೆ.ಆರ್. ಮೊಬೈಲ್ ಸಂ 8497048733 ಅಥವಾ ಪುಷ್ಪಲತಾ ಎಂ. ಮೊಬೈಲ್ ಸಂ. 8904592122 ಇವರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.
ವಿವಿಧ ಉದ್ಯಾನವನಗಳು, ತೋಟಗಳ ಸ್ಪರ್ಧೆ ಹಾಗೂ ಕುಂಡದಲ್ಲಿ ಬೆಳೆದ ಗಿಡಗಳ’ ಸ್ಪರ್ಧೆಗೆ 2026 ನೇ ಜುಲೈ 27 ರಿಂದ ಆಗಸ್ಟ್ 04 ರ ವರೆಗೆ ಅರ್ಜಿಗಳನ್ನು ವಿತರಿಸಲಾಗುವುದು ಹಾಗೂ 2026ನೇ ಆಗಸ್ಟ್ 06 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿಗಳನ್ನು ತೋಟಗಾರಿಕೆ ಅಪರ ನಿರ್ದೇಶಕರು ( ತೋಟದ ಬೆಳೆಗಳು) ಲಾಲ್ಬಾಗ್, ಬೆಂಗಳೂರು ಕಛೇರಿ ಅಥವಾ ಆನ್ಲೈನ್ ಮೂಲಕ https://horticulturedir.karnataka.gov.in ವೆಬ್ಸೈಟ್ನಲ್ಲೂ ಅರ್ಜಿ ಪಡೆಯಬಹುದು.
ಹೆಚ್ಚಿನ ಮಾಹಿತಗಾಗಿ ಚಂದ್ರಶೇಖರ್ ವೈ.ಸಿ ಮೊಬೈಲ್ ಸಂ. 9845549545 ಅಥವಾ ವಿನೋದ್ ರಾಯರ್ ಮೊಬೈಲ್ ಸಂ. 9886819217 ಅಥವಾ ನವೀನ್ ಕುಮಾರ್ ಮೊಬೈಲ್ ಸಂ. 9844199867 ಗೆ ಸಂಪರ್ಕಿಸುವುದು.
ಇಲಾಖಾ ಮಳಿಗೆಗಳ ಹಂಚಿಕೆ 2026 ನೇ ಜುಲೈ, 27 ಮತ್ತು 28 ರಂದು ಅರ್ಜಿಗಳನ್ನು ವಿತರಿಸಲಾಗುವುದು ಹಾಗೂ 2026ನೇ ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿಗಳನ್ನು ತೋಟಗಾರಿಕೆ ಅಪರ ನಿರ್ದೇಶಕರು, ಉದ್ಯಾನವನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ, ಲಾಲ್ಬಾಗ್, ಬೆಂಗಳೂರು ಕಛೇರಿ ಅಥವಾ ಆನ್ಲೈನ್ https://horticulturedir.karnataka.gov.in ವೆಬ್ಸೈಟ್ ನಲ್ಲಿ ಅರ್ಜಿಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಕ್ಕುಬಾಯಿ, ಮೊಬೈಲ್ ಸಂ.8217377805, ಚಿಕ್ಕಣ್ಣಗೌಡ ಮೊಬೈಲ್ ಸಂ. 9964763539 ಸಂಪರ್ಕಿಸಬಹುದು ಇವರನ್ನು ಎಂದು ಲಾಲ್ಬಾಗ್ ಸಸ್ಯತೋಟದ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











