Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯೋಧರ ಕಷ್ಟ, ತ್ಯಾಗವೇ ನಾವು ನೆಮ್ಮದಿಯಿಂದಿರಲು ಕಾರಣ: ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 28 :ದೇಶದ ಗಡಿ ಕಾಯುವ ಯೋಧರ ಕೆಚ್ಚೆದೆ, ತ್ಯಾಗ ಹಾಗೂ ಹಿಮಾವೃತ ಪರ್ವತಗಳಲ್ಲಿ ಅವರ ಜೀವನ್ಮರಣ ಹೋರಾಟದ ಸಾಹಸವನ್ನು ಸ್ಮರಿಸುವ ‘ಕಾರ್ಗಿಲ್ ವಿಜಯ ದಿವಸ’ವನ್ನು ಭೋವಿ ಗುರುಪೀಠದ ಆವರಣದಲ್ಲಿರುವ ಎಸ್ ಜೆ ಎಸ್ ಸಮೂಹ ಶಾಲೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಆಚರಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಯವರು ಹಿಮಾವೃತ ಶಿಕರಗಳಲ್ಲಿ ಯೋಧರ ಜೀವನ್ಮರಣ ಹೋರಾಟ ಕ್ಷಣಗಳಾದ “1999ರ ಕಾರ್ಗಿಲ್ ಯುದ್ಧವು ಕೇವಲ ಶತ್ರುಗಳ ವಿರುದ್ಧದ ಕಾಳಗವಾಗಿರಲಿಲ್ಲ, ಅದು ನಿಸರ್ಗದ ಅತ್ಯಂತ ಕಠಿಣ ವಾತಾವರಣದ ವಿರುದ್ಧ ನಮ್ಮ ಯೋಧರು ನಡೆಸಿದ ಜೀವನ್ಮರಣ ಹೋರಾಟವಾಗಿತ್ತು. ಸಮುದ್ರ ಮಟ್ಟದಿಂದ 16.000 ದಿಂದ 18.000 ಅಡಿಗಳಷ್ಟು ಎತ್ತರದ ಹಿಮಾವೃತ ಪರ್ವತಗಳು, ಮೈನಸ್ 30 ರಿಂದ 40 ಡಿಗ್ರಿ ತಲುಪುತ್ತಿದ್ದ ವಿಪರೀತ ಚಳಿ, ಆಮ್ಲಜನಕದ ತೀವ್ರ ಅಭಾವ, ಈ ಯಾವುದೇ ಸವಾಲುಗಳು ನಮ್ಮ ಸೈನಿಕರ ಧೈರ್ಯವನ್ನು ಕುಗ್ಗಿಸಲಿಲ್ಲ” ಎಂದು ವಿವರಿಸಿದರು.

“ಎತ್ತರದ ತುದಿಯಲ್ಲಿ ಕುಳಿತು ದಾಳಿ ಮಾಡುತ್ತಿದ್ದ ಶತ್ರುಗಳನ್ನು ಕೆಳಗಿನಿಂದ ಎದುರಿಸುವುದು ಅತ್ಯಂತ ಅಪಾಯಕಾರಿಯಾಗಿತ್ತು. ಭಾರಿ ತೂಕದ ಆಯುಧಗಳು ಹಾಗೂ ಬೆನ್ನುಮೊಟಕುಗೊಳಿಸುವಂತಹ ಸಾಮಗ್ರಿಗಳನ್ನು ಹೊತ್ತುಕೊಂಡು, ಮೈ ಕೊರೆಯುವ ಹಿಮದ ನಡುವೆ, ಪ್ರತಿ ಕ್ಷಣವೂ ಸಾವು ಎದುರಿದ್ದರೂ ನಮ್ಮ ಯೋಧರು ಹೆಜ್ಜೆ ಹಿಂದಿಡಲಿಲ್ಲ. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮನೋಜ್ ಕುಮಾರ್ ಪಾಂಡೆ ಅವರಂತಹ ನೂರಾರು ವೀರರು ರಕ್ತ ಹರಿಸಿ, ಪ್ರಾಣವನ್ನೇ ತೃಣಕ್ಕೆ ಸಮಾನವಾಗಿಟ್ಟು ‘ಆಪರೇಷನ್ ವಿಜಯ್’ ಮೂಲಕ ವಿಜಯ ಪತಾಕೆ ಹಾರಿಸಿದರು” ಎಂದು ನೆನಪಿಸಿಕೊಂಡರು.

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಯೋಧರ ಜೀವನ ನಾವಂದುಕೊಂಡಷ್ಟು ಸರಳವಲ್ಲ. ಕುಟುಂಬದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದು, ವೈಯಕ್ತಿಕ ನೋವು, ಗಾಯ, ಆಹಾರ ಮತ್ತು ಮೂಲಭೂತ ಸೌಕರ್ಯಗಳ ಅಭಾವದ ನಡುವೆಯೂ ದೇಶದ ಭದ್ರತೆಗಾಗಿ ಹಗಲಿರುಳು ನಿದ್ರೆ ಕೆಡುತ್ತಾರೆ. ಅವರು ಅನುಭವಿಸುವ ಈ ಕಷ್ಟ, ತ್ಯಾಗವೇ ಇವತ್ತು ನಾವಿಲ್ಲಿ ನೆಮ್ಮದಿಯಿಂದ ಉಸಿರಾಡಲು ಕಾರಣ. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಶಿಸ್ತು, ಸತ್ಯವಂತಿಕೆ ಮತ್ತು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಕಷ್ಟಪಟ್ಟು ಓದಿ ಉತ್ತಮ ಪ್ರಜೆಯಾಗುವುದೇ ನಾವು ಯೋಧರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದು ಕರೆ ನೀಡಿದರು.

ಕಾರ್ಗಿಲ್ ಸಮರದಲ್ಲಿ ವೀರಮರಣ ಅಪ್ಪಿದ 527 ಹುತಾತ್ಮ ಯೋಧರಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಿಮವೃಂದದಲ್ಲಿ ಯೋಧರು ಎದುರಿಸುವ ಸವಾಲುಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ನಾಟಕ ಹಾಗೂ ದೇಶಭಕ್ತಿ ಗೀತೆಗಳು ಪ್ರದರ್ಶಿಸಿ ಸಭಿಕರ ಕಣ್ಣಾಲಿಗಳನ್ನು ಒದ್ದೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಸಮಸ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶದ ಐಕ್ಯತೆ, ಸಮಗ್ರತೆ ಹಾಗೂ ಯೋಧರ ಗೌರವವನ್ನು ಸದಾ ಕಾಯ್ದುಕೊಳ್ಳುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ವೀರ ಯೋಧರಿಗೆ ಭಾವಪೂರ್ಣ ನಮನ ಸಲ್ಲಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now