Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಎಫ್ ಚಂದಾದಾರರಿಗೆ ಸಿಹಿ ಸುದ್ದಿ; 5 ಪ್ರಮುಖ ಬದಲಾವಣೆಗಳು ಪ್ರಕಟ!

---Advertisement---

ದೆಹಲಿ.ಜುಲೈ.24: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 2026 ರಲ್ಲಿ ತನ್ನ ನಿಯಮಾವಳಿಗಳಲ್ಲಿ ಬೃಹತ್ ಬದಲಾವಣೆಗಳನ್ನು ತಂದಿದ್ದು, ಲಕ್ಷಾಂತರ ನೌಕರರಿಗೆ ದೊಡ್ಡ ರಿಲೀಫ್ ನೀಡಿದೆ. ಕ್ಲೇಮ್ ಸೆಟಲ್ಮೆಂಟ್, ಆಟೋ ಟ್ರಾನ್ಸ್ಫರ್ ಹಾಗೂ ಕೆವೈಸಿ (KYC) ಪ್ರಕ್ರಿಯೆಗಳನ್ನು ಅತ್ಯಂತ ಸರಳೀಕರಣಗೊಳಿಸಲಾಗಿದ್ದು, ಹೊಸ ಐಟಿ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.

ಈ ಹೊಸ ನವೀಕರಣದಿಂದಾಗಿ ಉಮಾಂಗ್ ಆ್ಯಪ್ (Umang App) ಮತ್ತು ಇಪಿಎಫ್ಒ ಪೋರ್ಟಲ್ ಸರ್ವರ್ಗಳು ಯಾವುದೇ ಅಡಚಣೆಯಿಲ್ಲದೆ ವೇಗವಾಗಿ ಕೆಲಸ ಮಾಡಲಿವೆ. ಪಾಸ್ವರ್ಡ್ ರಿಸೆಟ್, ಪಾಸ್ಬುಕ್ ಡೌನ್ಲೋಡ್ ಹಾಗೂ ಕ್ಲೇಮ್ ಸ್ಟೇಟಸ್ ಪರಿಶೀಲನೆ ಈಗ ಇನ್ನಷ್ಟು ಸುಲಭವಾಗಿದೆ.

ಇಪಿಎಫ್ಒ ಜಾರಿಗೆ ತಂದಿರುವ 5 ಪ್ರಮುಖ ಹೊಸ ನಿಯಮಗಳು ಮತ್ತು ಸೌಲಭ್ಯಗಳ ವಿವರ ಇಲ್ಲಿದೆ:

1. ಕೇವಲ 3 ರಿಂದ 4 ದಿನಗಳಲ್ಲಿ ಆಟೋ ಸೆಟಲ್ಮೆಂಟ್
ಹಿಂದೆ ಪಿಎಫ್ ಹಣವನ್ನು ಹಿಂಪಡೆಯಲು 7 ರಿಂದ 20 ದಿನಗಳು ಬೇಕಾಗುತ್ತಿತ್ತು. ಆದರೆ ಈಗಿನ ಆಟೋ ಸೆಟಲ್ಮೆಂಟ್ ವ್ಯವಸ್ಥೆಯಿಂದಾಗಿ, ದಾಖಲೆಗಳು ಸರಿಯಿದ್ದಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಕಂಪ್ಯೂಟರ್ ವ್ಯವಸ್ಥೆಯೇ ಕ್ಲೇಮ್ಗಳನ್ನು ಆಟೋಮ್ಯಾಟಿಕ್ ಆಗಿ ಅನುಮೋದಿಸುತ್ತದೆ. ಅನಾರೋಗ್ಯ, ಶಿಕ್ಷಣ, ಮದುವೆ ಹಾಗೂ ಮನೆ ಖರೀದಿಗಾಗಿ ಸಲ್ಲಿಸುವ ಅಡ್ವಾನ್ಸ್ ಅರ್ಜಿಗಳ ಹಣವು ಕೇವಲ 3 ರಿಂದ 4 ದಿನಗಳಲ್ಲಿ ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

2. ‘ಎನಿವೇರ್ ಸರ್ವಿಸ್’ ಮತ್ತು ಆಟೋ ಟ್ರಾನ್ಸ್ಫರ್
ಉದ್ಯೋಗ ಬದಲಾಯಿಸಿದಾಗ ಹಳೆಯ ಪಿಎಫ್ ಬ್ಯಾಲೆನ್ಸ್ ಅನ್ನು ಹೊಸ ಖಾತೆಗೆ ವರ್ಗಾಯಿಸಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಇನ್ಮುಂದೆ ಕಂಪನಿ ಬದಲಾಯಿಸಿದ ತಕ್ಷಣ ಹಳೆಯ ಪಿಎಫ್ ಬ್ಯಾಲೆನ್ಸ್ ನಿಮ್ಮ UAN ಅಡಿಯಲ್ಲಿ ಹೊಸ ಖಾತೆಗೆ ಆಟೋಮ್ಯಾಟಿಕ್ ಆಗಿ ಲಿಂಕ್ ಆಗಿ ಟ್ರಾನ್ಸ್ಫರ್ ಆಗುತ್ತದೆ (ಫಾರ್ಮ್ 13 ತುಂಬುವ ಅಗತ್ಯವಿರುವುದಿಲ್ಲ). ಜೊತೆಗೆ, ‘ಎನಿವೇರ್ ಸರ್ವಿಸ್’ ಮೂಲಕ ಚಂದಾದಾರರು ದೇಶದ ಯಾವುದೇ ಭಾಗದಲ್ಲಿದ್ದರೂ, ತಮಗೆ ಹತ್ತಿರವಿರುವ ಇಪಿಎಫ್ಒ ಕಚೇರಿಗೆ ತೆರಳಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

3. ಸುಲಭ ಕೆವೈಸಿ ಅಪ್ಡೇಟ್
ಹಿಂದೆ ಹೆಸರು, ಜನ್ಮ ದಿನಾಂಕ ಅಥವಾ ತಂದೆಯ ಹೆಸರಿನಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಕೆವೈಸಿ ತಿರಸ್ಕೃತಗೊಳ್ಳುತ್ತಿತ್ತು. ಹೊಸ ಸಿಸ್ಟಮ್ನಲ್ಲಿ ಆನ್ಲೈನ್ನಲ್ಲೇ ಬ್ಯಾಂಕ್ ವಿವರ ಹಾಗೂ ಪಾನ್ (PAN) ಮಾಹಿತಿಯನ್ನು ತಕ್ಷಣವೇ ವೆರಿಫೈ ಮಾಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಬಾಕಿ ಉಳಿಯುತ್ತಿದ್ದ (Pending) ಅರ್ಜಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

4. ಇಪಿಎಫ್ಒ 3.0: ಗಿಗ್ ವರ್ಕರ್ಸ್ಗಳಿಗೂ ಪೆನ್ಷನ್ ಸೌಲಭ್ಯ
ಕೇಂದ್ರ ಸರ್ಕಾರವು ‘EPFO 3.0’ ಹೆಸರಿನ ಹೊಸ ಪೆನ್ಷನ್ ಮಾದರಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಉದ್ಯೋಗಿ, ಮಾಲೀಕರು, ಸರ್ಕಾರ ಹಾಗೂ ಗಿಗ್ ವರ್ಕರ್ಸ್ (Gig Workers) ಪ್ಲಾಟ್ಫಾರ್ಮ್ಗಳು ಒಟ್ಟಾಗಿ ಈ ಯೋಜನೆಯಲ್ಲಿ ಪಾಲುದಾರರಾಗಲಿದ್ದಾರೆ. ಇದರಿಂದ ಇದುವರೆಗೆ ಪಿಎಫ್ ವ್ಯಾಪ್ತಿಗೆ ಬರದ ಗಿಗ್ ವರ್ಕರ್ಸ್ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೂ ನಿವೃತ್ತಿಯ ನಂತರ ಪೆನ್ಷನ್ ಭದ್ರತೆ ಸಿಗಲಿದೆ.

5. ಖಾತೆಯಲ್ಲಿ ಶೇ. 25 ಬ್ಯಾಲೆನ್ಸ್ ಕಡ್ಡಾಯ (ಜುಲೈ 1, 2026 ರಿಂದ ಜಾರಿ)
ಶೇಕಡಾ 48.7 ರಷ್ಟು ನೌಕರರು ನಿವೃತ್ತಿಯ ವೇಳೆಗೆ ತಮ್ಮ ಖಾತೆಯಲ್ಲಿ ಕೇವಲ ₹10,000 ದಿಂದ ₹20,000 ಮಾತ್ರ ಉಳಿಸಿಕೊಂಡಿರುತ್ತಾರೆ ಎಂಬುದನ್ನು ಗಮನಿಸಿದ ಇಪಿಎಫ್ಒ, ಜುಲೈ 1, 2026 ರಿಂದ ಹೊಸ ನಿಯಮ ತಂದಿದೆ.

ಇದರ ಪ್ರಕಾರ, ಪಿಎಫ್ ಖಾತೆಯಲ್ಲಿರುವ ಒಟ್ಟು ಹಣದಲ್ಲಿ ಕನಿಷ್ಠ ಶೇ. 25 ರಷ್ಟು ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯ.

12 ತಿಂಗಳ ಸೇವೆ ಪೂರ್ಣಗೊಂಡ ನಂತರ ಶಿಕ್ಷಣ, ಮದುವೆ, ಅಥವಾ ವೈದ್ಯಕೀಯ ತುರ್ತುಸ್ಥಿತಿಗಾಗಿ ಶೇ. 75 ರಷ್ಟು ಹಣವನ್ನು ಹಿಂಪಡೆಯಬಹುದು.

ಉದಾಹರಣೆಗೆ: ₹15,000 ವೇತನವಿರುವ ನೌಕರ 20 ವರ್ಷ ಕೆಲಸ ಮಾಡಿದರೆ ₹14 ಲಕ್ಷ ಜಮೆಯಾಗುತ್ತದೆ. ನಡುವೆ ಶೇ. 75 ಹಣ ತೆಗೆದುಕೊಂಡರೂ, ಕೊನೆಯಲ್ಲಿ ಶೇ. 25 ಅಂದರೆ ಕನಿಷ್ಠ ₹3.5 ಲಕ್ಷ ಹಣ ಉಳಿತಾಯವಾಗಿ ನಿವೃತ್ತಿ ಜೀವನಕ್ಕೆ ನೆರವಾಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now