ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1455 ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ
ಒಟ್ಟು ಹುದ್ದೆಗಳು: 1455
ಪುರುಷ ಅಭ್ಯರ್ಥಿಗಳಿಗೆ: 1382 ಹುದ್ದೆಗಳು
ಮಹಿಳಾ ಅಭ್ಯರ್ಥಿಗಳಿಗೆ: 73 ಹುದ್ದೆಗಳು
ವೇತನ ಶ್ರೇಣಿ: ₹37,500 – ₹76,100/-

ಶೈಕ್ಷಣಿಕ ವಿದ್ಯಾರ್ಹತೆ
ಅಭ್ಯರ್ಥಿಗಳು ದ್ವಿತೀಯ ಪಿಯುಸಿ (2nd PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು (ಸಿಬಿಎಸ್ಇ, ಐಸಿಎಸ್ಇ, ಎನ್ಐಒಎಸ್, 3 ವರ್ಷಗಳ ಡಿಪ್ಲೊಮಾ ಅಥವಾ ಜಿಟಿಸಿ) ಹೊಂದಿರಬೇಕು.
ವಯೋಮಿತಿ ವಿವರ (ಒಂದು ಬಾರಿಯ 5 ವರ್ಷಗಳ ಸಡಲಿಕೆ ಸೇರಿ)
ಕನಿಷ್ಠ ವಯಸ್ಸು: 18 ವರ್ಷಗಳು ತುಂಬಿರಬೇಕು.
ಗರಿಷ್ಠ ವಯೋಮಿತಿ:
ಸಾಮಾನ್ಯ ಅರ್ಹತೆ (GM) ಅಭ್ಯರ್ಥಿಗಳಿಗೆ: 33 ವರ್ಷಗಳು
ಪ.ಜಾತಿ / ಪ.ಪಂಗಡ / ಪ್ರವರ್ಗ-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 35 ವರ್ಷಗಳು
ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: 38 ವರ್ಷಗಳು
ಅರ್ಜಿ ಸಲ್ಲಿಸುವ ವೇಳಾಪಟ್ಟಿ
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 13.07.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.08.2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11.08.2026
ಅರ್ಜಿ ಸಲ್ಲಿಸಬೇಕಾದ ಅಧಿಕೃತ ವೆಬ್ಸೈಟ್: https://cetonline.karnataka.gov.in/kea/
ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗಗಳು (2ಎ, 2ಬಿ, 3ಎ, 3ಬಿ): ₹750/-
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹500/-
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ
ಹುದ್ದೆಗಳ ಆಯ್ಕೆಗಾಗಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಲಿಖಿತ ಪರೀಕ್ಷೆ: ಸಾಮಾನ್ಯ ಅಧ್ಯಯನ ಮತ್ತು ಮಾನಸಿಕ ಸಾಮರ್ಥ್ಯ ವಿಷಯಗಳ ಒಟ್ಟು 100 ಪ್ರಶ್ನೆಗಳ (100 ಅಂಕಗಳು) ಲಿಖಿತ ಪರೀಕ್ಷೆ ಇರಲಿದ್ದು, ಕಾಲಾವಧಿ 90 ನಿಮಿಷಗಳಾಗಿರುತ್ತದೆ. ತಪ್ಪು ಉತ್ತರಗಳಿಗೆ 0.25 ನಕಾರಾತ್ಮಕ ಮೌಲ್ಯಮಾಪನ (Negative Valuation) ಇರಲಿದೆ.

ಲಿಖಿತ ಪರೀಕ್ಷೆ ದಿನಾಂಕ: 20.09.2026 (ಬೆಳಗ್ಗೆ 10.30 ರಿಂದ 12.00 ರವರೆಗೆ)
ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ (PST & PET): ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಈ ಪರೀಕ್ಷೆಗೆ ಕರೆಯಲಾಗುತ್ತದೆ.
ದೈಹಿಕ ಅರ್ಹತೆ (ಪುರುಷರು): ಕನಿಷ್ಠ ಎತ್ತರ 168 ಸೆಂ.ಮೀ, ಎದೆ ಸುತ್ತಳತೆ 86 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆಯೊಂದಿಗೆ).
ದೈಹಿಕ ಅರ್ಹತೆ (ಮಹಿಳೆಯರು): ಕನಿಷ್ಠ ಎತ್ತರ 158 ಸೆಂ.ಮೀ, ಕನಿಷ್ಠ ತೂಕ 45 ಕೆ.ಜಿ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.













