ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡುತ್ತಿರುವ ಸೆವೆನ್ ಹಿಲ್ಸ್ ಡೆವಲಪರ್ಸ್ ಸಂಸ್ಥೆಯು ಚಿತ್ರದುರ್ಗದ ನಿವಾಸಿಗಳಿಗೆ ಹಾಗೂ ಹೂಡಿಕೆದಾರರಿಗೆ ಸುವರ್ಣಾವಕಾಶವೊಂದನ್ನು ಹೊತ್ತು ತಂದಿದೆ.

ನಗರದ ದೊಡ್ಡಸಿದ್ದವ್ವನಹಳ್ಳಿ ರಿಂಗ್ ರೋಡ್ (ಹಂತ-1) ಬಳಿ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡ ನೂತನ ಪ್ರೀಮಿಯಂ ಪ್ಲಾಟೆಡ್ ಡೆವಲಪ್ಮೆಂಟ್ ಯೋಜನೆಯನ್ನು ಸಂಸ್ಥೆಯು ಆರಂಭಿಸುತ್ತಿದ್ದು, ಇದರ ಭವ್ಯ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂಬರುವ ಭಾನುವಾರ, ಜುಲೈ 12, 2026 ರಂದು ಬೆಳಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿದೆ.
ಗ್ರಾಹಕರ ಕನಸಿನ ಮನೆ ನಿರ್ಮಾಣಕ್ಕೆ ಪೂರಕವಾಗಿ 30×40 ಅಳತೆಯ ಪ್ರೀಮಿಯಂ ಸೈಟ್ಗಳನ್ನು ಈ ಲೇಔಟ್ ಒಳಗೊಂಡಿದೆ. ಇವೆಲ್ಲವೂ ಡಿ.ಸಿ ಕನ್ವರ್ಷನ್ ಆಗಿರುವ ಬಿಲ್ಡಿಂಗ್ ಪರವಾನಗಿಗೆ ಯೋಗ್ಯವಾದ ‘ಎ-ಖಾತಾ’ ಆಸ್ತಿಗಳಾಗಿವೆ. ಇಷ್ಟೇ ಅಲ್ಲದೆ, ಈ ಯೋಜನೆಯು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಿಂಗ್ ರೋಡ್ ಪ್ರದೇಶದಲ್ಲಿದ್ದು, ತಕ್ಷಣವೇ ನೋಂದಣಿ (Registration) ಮಾಡಿಕೊಳ್ಳಲು ಸಿದ್ಧವಾಗಿದೆ.
ಲೇಔಟ್ ನ ಸೌಲಭ್ಯಗಳು :
1. ಸೈಟ್ ನಂಬರನ್ನು ಲಕ್ಕಿ ಡಿಪ್ ಮೂಲಕ ನೀಡಲಾಗುವುದು.
2. ಕಾರ್ನರ್ ಸೈಟ್ಗೆ ಶೇ. 20% ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ.
3. ಅಡ್ವಾನ್ಸ್ ಬುಕ್ಕಿಂಗ್ ಕಂತಿನ ಹಣವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ.
4. ಲಕ್ಕಿಡಿಪ್ನಲ್ಲಿ ಗೆದ್ದ ವಾಹನಗಳನ್ನು 3ನೇ ಕಂತಿನ ಅವಧಿಯಲ್ಲಿ ವಿತರಿಸಲಾಗುವುದು.
5. ಎಲ್ಲಾ ಸೈಟ್ಗಳ ಬುಕ್ಕಿಂಗ್ ಪೂರ್ಣಗೊಂಡ ನಂತರ ವಾಹನಗಳ ಲಕ್ಕಿ ಡಿಪ್ ಎತ್ತಲಾಗುವುದು.
6. ಮಕ್ಕಳ ಆಟದ ಮೈದಾನ ಮತ್ತು ಅಭಿವೃದ್ಧಿ ಪಡಿಸಿದ ಪಾರ್ಕ್
7. ಸಾಲು ಮರಗಳನ್ನು ಒಳಗೊಂಡ 40 ಅಡಿ ಮತ್ತು 30 ಅಡಿ ಅಗಲದ ಸಿಮೆಂಟ್ ರಸ್ತೆಗಳು ತಕ್ಷಣವೇ ವಾಸ ಯೋಗ್ಯ ಮನೆ ನಿರ್ಮಿಸುವಂತಹ ವಾತಾವರಣ.
8. ಎಸ್.ಟಿ. ಪಿ. ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಪ್ರತಿ ನಿವೇಶನಕ್ಕೆ ಕುಡಿಯುವ ನೀರಿನ ವ್ಯವಸೆ.
9. ನಿಯಮಗಳ ಪ್ರಕಾರ ಪಾವತಿಸಿ 15 ತಿಂಗಳಿನಲ್ಲಿ ನಿವೇಶನ ನಿಮ್ಮದಾಗಿಸಿಕೊಳ್ಳಿ.
ಗ್ರಾಹಕರಿಗೆ ಹೊರೆಯಾಗದಂತೆ ಅತ್ಯಂತ ಸುಲಭವಾದ ಪಾವತಿ ಕಂತುಗಳ ಯೋಜನೆಯನ್ನು (Easy Payment Plan) ಸಂಸ್ಥೆ ಪರಿಚಯಿಸಿದೆ. ಕೇವಲ ₹25,000 ಮುಂಗಡ ಹಣ ನೀಡಿ ಸೈಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ಪ್ರೀಮಿಯಂ ಸೈಟ್ಗಳ ಒಟ್ಟು ಬೆಲೆ ₹13,50,000 ಆಗಿದ್ದು, ಉಳಿದ ಮೊತ್ತವನ್ನು ಸುಲಭ ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ. ಆರಂಭಿಕ ಆಫರ್ ಆಗಿ ಸೈಟ್ ಬುಕ್ ಮಾಡುವ ಗ್ರಾಹಕರಿಗಾಗಿ ‘ಮೆಗಾ ಲಕ್ಕಿ ಡ್ರಾ’ ಆಯೋಜಿಸಲಾಗಿದ್ದು, ಅದೃಷ್ಟಶಾಲಿ ವಿಜೇತರಿಗೆ 1 ಟಾಟಾ ಟಿಯಾಗೋ ಕಾರು ಹಾಗೂ 10 ಹೊಂಡಾ ಆಕ್ಟಿವಾ ಸ್ಕೂಟರ್ಗಳನ್ನು ಗೆಲ್ಲುವ ಬಂಪರ್ ಅವಕಾಶವಿದೆ.

ಸೈಟ್ ಸಂಖ್ಯೆಯನ್ನು ಲಕ್ಕಿ ಡಿಪ್ ಮೂಲಕವೇ ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತಿದ್ದು, ಕಾರ್ನರ್ ಸೈಟ್ ಗಳಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಎಲ್ಲಾ ಸೈಟ್ ಗಳ ಬುಕಿಂಗ್ ಪೂರ್ಣಗೊಂಡ ನಂತರ ವಾಹನಗಳ ಲಕ್ಕಿ ಡಿಪ್ ಪ್ರಕ್ರಿಯೆ ನಡೆಯಲಿದ್ದು, 3ನೇ ಕಂತಿನ ಅವಧಿಯಲ್ಲಿ ವಿಜೇತರಿಗೆ ವಾಹನಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಸಂದೀಪ್ ಗುಂದರ್ಪಿ ತಿಳಿಸಿದ್ದಾರೆ. ಸೀಮಿತ ಸೈಟ್ಗಳು ಮಾತ್ರ ಲಭ್ಯವಿದ್ದು, ಹೆಚ್ಚಿನ ವಿವರಗಳಿಗಾಗಿ ಮತ್ತು ಸ್ಥಳ ವೀಕ್ಷಣೆಗಾಗಿ ಗ್ರಾಹಕರು ಮೊಬೈಲ್ ಸಂಖ್ಯೆ 9739571555 ಅಥವಾ 9632150055 ಅನ್ನು ಸಂಪರ್ಕಿಸಬಹುದಾಗಿದೆ.












